ಕಾವ್ಯ ಸಂಗಾತಿ
ಗಿಡಗಳ ಬೆಳೆಸಿ
ಮಾಲತಿ ಎಸ್.ಆರಾಧ್ಯ
ನೀರನ್ನು ಉಳಿಸಿ ಗಿಡಗಳ ಬೆಳೆಸಿ ಮಳೆಯನು ನಾವು ತರಿಸೋಣ ಗುಡಿ ಗೋಪುರದಂತೆ ಮರಗಳ ಬೆಳೆಸಿ ಕಾಲವ ಸಧ್ವಿನಿಯಾಗಿಸೋಣ
ಹಳ್ಳ ಕೊಳ್ಳದ ನೀರನ್ನೆಲ್ಲ ಶುದ್ಧೀಕರಿಸಿ ಮತ್ತೆ ಅದನ್ನು ಬಳಸೋಣ
ನೀರಿನ ಮಹಿಮೆಯ ನೀರಿನ ಗರಿಮೆಯ ಎಲ್ಲೆಡೆ ನಾವು ಸಾರೋಣ
ಉರಿಬಿಸಿಲಲ್ಲಿ ನೆರಳನು ಕೊಡುವ ಮರಕ್ಕೆ ನಾವು ನಮಿಸೋಣ
ನಮಿಸಿ ನಾವು ಬಿಂದಿಗೆ ತುಂಬಾ ನೀರನ್ನು ಅದಕ್ಕೆ ಹಾಯಿಸೋಣ
ಇಂದಿನ ಮಕ್ಕಳಿಗೆ ಇದರ ಮಹಿಮೆಯ ತಿಳಿಸೋಣ
ಹಿತಮಿತ ಬಳಸಿ ನೀರನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳಿಸೋಣ!!!!!