ಯುಗಾದಿ ವಿಶೇಷ

ರಾಜ ವಸಂತ ಬಂದ

ನೂತನ ಕುಲಕರ್ಣಿ

ಮಾಮರದ ಚಿಗುರಿನೊಳಗ
ಸುಯ್ಯಂತ ತೂಗಿ ತೂಗಿ ,
ಕಹುಕುಹೂ ಕೂಗಿ ಕೂಗಿ ,
ಏನ ಹಾಡುವಿ ಕೋಗಿಲೆ ?

 "ಅದೋ ಬಂದ ಅತ್ತಲಿಂದ
 ರಾಜ ವಸಂತ ಗತ್ತಿನಿಂದ;
 ಹಾಡುತಿರುವೆ ಪರಾಕು ಗೆಳತೀ
 ಸಾವರಿಸು , ಸಡಗರಿಸು .

 ರಾಜ ಬರುವ ಹಾದಿಯೊಳಗ
 ಚಿಗುರು ತಳಿರು ತೋರಣ ,
 ಬಣ್ಣದ್ಹೂಗಳ  ಅಂದಣ .
 ಭುವಿಯ ಸೀರಿ ಸೆರಗಿಗೆ
 ಬಂಗಾರದ ಬೆಳಿ ಬಾಗಿಣ .
 ಅವನ ಹಿಂದ ಮುಂದ ಎಲ್ಲಾ
 ಶಾಂತಿ ಸುಖದ ದಿಬ್ಬಣ !

ವಸಂತನ ಒಡ್ಡೋಲಗದಾಗ
ಹಕ್ಕಿ ಪಿಕ್ಕಿ ನದಿ ಗಾಳಿಯ
ಮುದ ಮೀರಿದ ಗಾಯನ .
ಚಲುವು ಒಲವು ಯೌವ್ವನದ
ಮದವೇರಿದ ನರ್ತನ .
ಸಂಗೀತ ಸಾಹಿತ್ಯ ಕಲೆಯ
ನಿತ್ಯ ಮತ್ತ ಮಧುಪಾನ !

ಅವನ ರಾಜ್ಯಭಾರದೊಳಗ
ಸುಖಕಿಲ್ಲ ಚೂರೂ ಕೊರತಿ .
ಅಲ್ಲು , ಇಲ್ಲು , ಎಲ್ಲೆಲ್ಲೂ
ಹರುಷ ಉಕ್ಕಿ ಹರಿವ ಒರತಿ .
ಅವನಿದ್ದ ಕಡೆಗೆಂದೂ ಇಲ್ಲ
ಸಾವು ನೋವು ಯುದ್ಧ ಭೀತಿ 
ಬರೀ ಪ್ರೀತಿ , ಪ್ರೀತಿ , ಪ್ರೀತಿ !!

ಇನ್ಯಾತಕ ಬೇಕ ಚಿಂತಿ ?
ರಾಜ ವಸಂತ ಬಂದ ಗೆಳತೀ :
ಸಾವರಿಸು , ಸಡಗರಿಸು !!"

2 thoughts on “

  1. ಎಂಥಾ ರಮ್ಯ ಕಲ್ಪನೆ….ನೂತನ್ ಮೇಡಂ….ಈ ಬೆಸರಿಕೆಗೆ ಇಂಥದೊಂದು ಚೆಲುವೆ ಕಲ್ಪನೆ ಬೇಕಿತ್ತು….

Leave a Reply

Back To Top