ಮುಟ್ಚು ಮುಟ್ಟು

ಕಾವ್ಯ ಸಂಗಾತಿ

ಮುಟ್ಚು ಮುಟ್ಟು

ವೈ.ಜಿ.ಅಶೋಕ್ ಕುಮಾರ್

ಮುಟ್ಚು ಮುಟ್ಟು
ಎಂದು
ಮುಟ್ಟಿನ
ಕಟ್ಟಳೆಯಲ್ಲಿ
ಮುಟ್ಟದಿರಿ ಎಂದಿರಲ್ಲ
ಈಗ ಜಗತ್ತೇ
ಮುಟ್ಟಾಗಿ
ಮನೆಯಲ್ಲಿ ಕುಳಿತ
ಸೋಜಿಗವ ನೋಡಿ

ಕಲ್ಲು ವಿಗ್ರಹಕೆ
ಜೀವಕೊಟ್ಟು
ಮುಟ್ಟದಿರಿ
ಎಂದಿರಲ್ಲ
ಈಗ
ಕೂಡಿಹಾಕಿ
ಬೀಗ
ಜಡಿದ
ಸೋಜಿಗವ
ನೋಡಿ

ಮೇಲು ಕೀಳಿನ
ಜಾತಿ ಕಟ್ಟಿ
ಮುಟ್ಟದಿರಿ
ಎಂದಿರಲ್ಲ
ಈಗ
ಎದೆಯ ತಟ್ಟಿದ
ಸೋಜಿಗವ ನೋಡಿ

ನಮ್ಮನ್ನೇ ನಾವು ಮುಟ್ಟಿಕೊಳ್ಳುವಂತಿಲ್ಲ.


Leave a Reply

Back To Top