ಮಾರ್ಜಾಲ

ಕಾವ್ಯ ಸಂಗಾತಿ

ಮಾರ್ಜಾಲ

ವಿಶ್ವನಾಥಎನ್. ನೇರಳಕಟ್ಟೆ

ಕುಡಿದಿದೆ ಹಾಲ
ಹರಡಿದೆ ಹಾಲಾಹಲ
ಪಂಜವೆತ್ತಿ ಬೀಸಿದೆ ಜಾಲ
ತಡೆಯುವರಿಲ್ಲ ಬೆಳೆಯುತ್ತಿರುವ
ಇದರ ಬಾಲ
ಬಲ್ಲವನೇ ಬಲ್ಲ
ಇದರ ವಿಚಾರವೆಲ್ಲಾ
ಇದು ಬರೀ ಬೆಕ್ಕಲ್ಲ
ಭಾರೀ ಇಲಿಗಳನ್ನು
ಬರಿದೆ ಮಾತಿನಲ್ಲಿತಿಂದು ಮುಗಿಸಬಲ್ಲ
ಕರಿಕರ್ಗತ್ತಲ ಮಾರ್ಜಾಲ

ನೀಳ ನಾಲಗೆ ಹೊರಗೆ
ಉಳಿದಿಲ್ಲ ಏನೂ ಮನೆಯೊಳಗೆ
ಏನೋ ಸಿಕ್ಕಿದೆ
ಎಡೆಬಿಡದೆ ನೆಕ್ಕಿದೆ, ಮುಕ್ಕಿದೆ
ಮೈಯ್ಯನ್ನುಗೋಡೆಗೆತಿಕ್ಕಿದೆ
ವಂಚನೆಯ ನಗೆ ಉಕ್ಕಿದೆ

ಮನೆಯಲ್ಲಿ ಭೂರಿ ಭೋಜನ
ಪಕ್ಕದ ಮನೆಗೆ ಪಯಣ
ಒಮ್ಮೆ ಮನೆ ಬಿಟ್ಟು ಹೊರಟರೆ
ಮತ್ತೆ ಈ ಕಡೆಗಿಲ್ಲ ಗಮನ

ಇಲಿಗಳ ದಂಡು
ಬೆದರಿದೆಇದರಕಂಡು
ಮಾಡಿಕೊಂಡುತುಂಡುತುಂಡು
ತಿAದಿದೆ ಕುಶಿಪಟ್ಟುಕೊಂಡು
ಕೆಲವು ಇಲಿಗಳಿಗಿಲ್ಲ ಇದರಭೀತಿ
ತಮಗಾಗದಿದ್ದವರನ್ನುತಿಂದು ಮುಗಿಸಿತಲ್ಲ
ಎಂದು ಮಾರ್ಜಾಲದ ಮೇಲೆ ಪ್ರೀತಿ

ಮಾರ್ಜಾಲಕ್ಕೆಆಗಿದೆಯಂತೆ ಆರದದಾಹ
ಬಾಯಿಗೆ ಸಿಕ್ಕವರೆಲ್ಲಾ ಸ್ವಾಹ
ಅಂತೆ-ಕಂತೆಗಳ ಸಂತೆಯಲ್ಲಿ
ಬದುಕಿ ಉಳಿದವರಿಗೇ ಚಿಂತೆ
ಏಕೆಂದರೆ, ಮಾರ್ಜಾಲದೊಡಲಿಂದ
ಮರಿ ಮಾರ್ಜಾಲವೊಂದು ಹುಟ್ಟಿದೆಯಂತೆ


Leave a Reply

Back To Top