ಹುಣ್ಣಿಮೆಯ ಇರುಳಲ್ಲಿ

ಕಾವ್ಯ ಸಂಗಾತಿ

ಹುಣ್ಣಿಮೆಯ ಇರುಳಲ್ಲಿ

ಉಮಾ

ಹುಣ್ಣಿಮೆಯ ಇರುಳಲ್ಲಿ
ತಿಂಗಳ ಬೆಳಕಿನಲ್ಲಿ
ಹೊಳೆ ತುಂಗೆಯ ದಡದಲ್ಲಿ
ಹರಡಿದ ಬೆಳ್ಳಿ ಮರಳಲ್ಲಿ
ಕೂತು ಕಾಯುತ್ತಿದೆ ನಿನಗಾಗಿ..
….
ಹುಡುಕಿದೆ ನಿನ್ನ ಮೊಗವ
ಆ ಸುಂದರ ಚಂದ್ರನಲಿ
ನಿನ್ನುಸಿರ ಗಂಧವ ತಂಗಾಳಿಯಲ್ಲಿ
ನಿನ್ನ ಮಿಂಚುವ ಕಣ್ಣುಗಳ
ನಕ್ಷತ್ರಗಳಲ್ಲಿ…
….
ಹೃದಯದಲ್ಲಿ ಅಡಗಿರುವ
ಓ ನನ್ನ ಇನಿಯ
ಹೊರ ಬಂದು ನನ್ನ
ಕಣ್ಣ ಮುಂದೆ ಬಾರೆಯಾ
ಮನದಲಿ ಅಡಗಿ ಕಾಡುವೆಯೇಕೆ
ವಿರಹಧುರಿಯಲಿ ಬೇಯಿಸುವೆಯೇಕೆ..
….
ತಂಗಾಳಿಯ ತಂಪು
ತನು ನಡಗಿಸಿದೆ
ಹೃದಯದ ಉರಿ
ಒಡಲ ಸುಡುತಿದೆ
ಬಂದು ತಂಪೆರೆಯಲಾರೆಯಾ
ಈ ಸುಡುವ ಉರಿಯಿಂದ
ನನ್ನ ಉಳಿಸಲಾರೆಯಾ…


Leave a Reply

Back To Top