ಕಾವ್ಯ ಸಂಗಾತಿ
ಕವಿತೆ ರಮ್ಯ ತಾಣ
ಶ್ರೀನಿವಾಸ ಜಾಲವಾದಿ
ಕವಿತೆ ಅಲೆಯುತಿದೆ
ರಮ್ಯ ತಾಣದಲಿ
ಕವಿತೆ ಕನಸುತಿದೆ
ಛಲಗಾರನ ಬಲದಲ್ಲಿ
ಕವಿತೆ ಮುನಿಸುತಿದೆ
ಚೆಲುವೆ ಮೊಗದಲಿ
ಕವಿತೆ ಮುಗುಳ್ನಗುತಿದೆ
ಸಿರಿಕಂಠದೊಡತಿಯಲಿ
ಕವಿತೆ ಖಡ್ಗ ಬಿರಿದಿದೆ
ಕೆಂಪು ಶಾಹಿಯ ರಕುತದಲಿ
ಕವಿತೆ ನಲಿದಿದೆ
ಸಮಾನ ಚಿಂತಕರ ಬಳಗದಲಿ
ಕವಿತೆಯ ಕಲ್ಲುಸಕ್ಕರೆ
ಎಲ್ಲ ಕೊಳ್ಳಿರೋ ಬೇಗ ಬೇಗನೆ
Very nice construction
Simple but caught the poem with beautiful words
NICE COMPOSITION Sir