ಕಾವ್ಯಸಂಗಾತಿ
ಹುಡುಕಾಟ
ಉಮಾ
ಹುಡುಕುತ್ತಿರುವೆ ಯಾರನ್ನು
ಈ ಪ್ರಕೃತಿಯ ಮಡಿಲಲ್ಲಿ
ಸುಂದರ ಏಕಾಂತದಲ್ಲಿ
ನಿನ್ನದೇ ನೆರಳಿನಲ್ಲಿ..
..
ಹುಡುಕುತ್ತಿರುವೆ ಏನನ್ನು
ಕಳೆದ ನೆನಪುಗಳನ್ನೋ
ಮನದ ಬಯಕೆಗಳನ್ನೋ
ಹೃದಯದ ತುಡಿತವನ್ನೋ…
..
ಹುಡುಕುತ್ತಿರುವೆ ಏಕೆ
ಇಹದ ಅರಿವಿಲ್ಲದೆ
ಸುಂದರ ತಾಣವ ಆಸ್ವಾದಿಸದೆ
ನಿನ್ನೆಡೆಗೆ ನಿನಗೇ ಗಮನವಿಲ್ಲದೆ…
..
ಹುಡುಕುತ್ತಿರುವೆಯಾ
ನಿನ್ನ ನೆರಳಿನಲ್ಲಿ
ನನ್ನ ಛಾಯೆಯನ್ನು
ಆ ಕೃಷ್ಣನ ನೆರಳಾಗಿದ್ದ
ಆ ರಾಧೆಯಂತೆ
ನಾ ನಿನ್ನ ನೆರಳಾಗಿರಬಹುದೆಂದು….