ಕಾವ್ಯ ಸಂಗಾತಿ
ಬಣ್ಣದ ಹಬ್ಬ
ಪ್ರೊ ರಾಜನಂದಾ ಘಾರ್ಗಿ
ಕಾಮನ ದಹನ
ಕಾಮನೆಗಳ ಮಾರಣ
ದಹಿಸುವ ಅಗ್ನಿಯಲಿ
ಕಲ್ಮಶಗಳ ಹೋಮ
ಸಂಭ್ರಮದ ಓಕುಳಿ
ಬಿಡಿಸಿದೆ ಮನದ ಚಳಿ
ಬಣ್ಣಗಳ ಎರೆಚಾಟ
ಮುದಗೊಂಡ ಮನದಾಟ
ಸಂಕೋಲೆಗಳು ಮುರಿದು
ಗೋಡೆಗಳು ಒಡೆದು
ಭಾವಗಳು ಬೆರೆತಿವೆ
ಬಣ್ಣಗಳು ಮೆರೆದಿವೆ
ರಂಗುರಂಗಿನ ನೋಟ
ತಂದಿದೆ ಬಣ್ಣದಾಟ
ರಂಗುಗಳು ಹಾಡುತಿವೆ
ರಾಗದಿ ಶುಭ ಕೋರುತಿವೆ