ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಜಬೀವುಲ್ಲಾ ಎಮ್. ಅಸದ್

ನೋವು ನಗುತಿರುವಾಗ ನೀ ಏಕೆ ಅಳುವೆ
ಅಂತರ ಕಳೆಯುತಿರುವಾಗ ನೀ ಏಕೆ ಅಳುವೆ

ತೊರೆದು ಬಾ ಪಡೆದ ಎಲ್ಲವ ಈ ಸಮಯ
ಮೌನ ಮಾತಾಡುರುವಾಗ ನೀ ಏಕೆ ಅಳುವೆ

ಕಾಡುವ ನೆನಪುಗಳಿಗೆ ಎಲ್ಲಿದೆ ಕೊನೆ ಹೇಳು
ಮರೆವು ಹಾಡುತಿರುವಾಗ ನೀ ಏಕೆ ಅಳುವೆ

ಕಳೆಯದ ಅಂತರ ಈ ಕಾತರ ನಿತ್ಯ ನಿರಂತರ
ಆಗಸ ಹನಿಯುತಿರುವಾಗ ನೀ ಏಕೆ ಅಳುವೆ

ಒಲವೆಂಬುದು ಸಾವಿಲ್ಲದ ಚಿರಾಯು ಅಸದ್
ಹೃದಯ ಮಿಡಿಯುತಿರುವಾಗ ನೀ ಏಕೆ ಅಳುವೆ


About The Author

1 thought on “ಗಜಲ್”

  1. ಅದ್ಭುತ ಗಝಲ್… ಮತ್ತೊಮ್ಮೆ ಮಗದೊಮ್ಮೆ ಓದಿ… ಮುದಗೊಂಡೆ..

Leave a Reply

You cannot copy content of this page

Scroll to Top