ಅನನ್ಯ ಭಾವ

ಕಾವ್ಯ ಸಂಗಾತಿ

ಅನನ್ಯ ಭಾವ

ಪ್ರೊ ರಾಜನಂದಾ ಘಾರ್ಗಿ

ಯಾವ ಜನ್ಮದ ಸಹ ಬಂಧ
ಬೆಸೆದಿದೆ ಭಾವ ಸಂಭಂದ
ಕೂಡಿದೆ ಹೊಸ ಅನುಬಂಧ
ನೀಡಿದೆ ಮನಕೆ ಆನಂದ

ಕಣ್ಣಿಲಿ ಮೂಡಿದ ಕನಸುಗಳು
ಬೆಸೆದ ಎರಡು ಮನಸುಗಳು
ಮೂಡಿವೆ ಮನದಿ ಕವನಗಳು
ಹಾಡಿವೆ ಕೂಡಿ ಹೃದಯಗಳು

ನಿಸರ್ಗದಲಿ ಹೊಸ ಚಲನ
ಚಂದ್ರ ಚಕೋರರ ಮಿಲನ
ಸುರದಲಿ ಉಲಿದಿದೆ ಕಾನನ
ಮನವ ಮಿಡಿವ ಗಾಯನ

ಹೊಸ ಭಾವವಿದು ಅನನ್ಯ
ತುಂಬಿದೆ ಜೀವನದಿ ಕಾರುಣ್ಯ
ತಂದಿದೆ ಸಂತಸಗಳ ಅಗಣ್ಯ
ತುಂಬಿದೆ ಜೀವನದಿ ಚೈತನ್ಯ


2 thoughts on “ಅನನ್ಯ ಭಾವ

Leave a Reply

Back To Top