ಕಾವ್ಯ ಸಂಗಾತಿ
ನಿನ್ನಂತಾಗಬೇಕು
ಮುಳುಗುವಾಗಲು
ಮೂಡುವಾಗಿನದ್ದೇ ವಿಶ್ವಾಸ
ಸಾಯುವಾಗಲೂ ನಕ್ಕು
ಕಣ್ಣ ಮುಚ್ಚಿಕೊಂಡಂತೆ
ಯಾರು ಕೊಟ್ಟರು ನಿನಗೆ
ಮತ್ತೆ ನಾಳೆ ಮೂಡುತ್ತೇನೆಂಬ
ಭರವಸೆಯ ಆತ್ಮವಿಶ್ವಾಸ
ತಿಳಿ ನೀಲಿ, ಬಿಳಿ
ಕಡುಗೆಂಪು, ಕಪ್ಪು
ಹಳದಿ, ಕಿತ್ತಳೆ,ನೇರಳೆ
ಎಲ್ಲ ಬಣ್ಣಗಳ ಬಳಿದು
ರಂಗಮಂದಿರದಲ್ಲಿ ನಿಂತ
ನಾಟಕಕಾರನಂತೆ
ಕಂಗೊಳಿಸುತ್ತಿರುವೆ
ನೋವಿನಲ್ಲಿ ನಗು
ಹೇಗೆ ಹುಟ್ಟಿತು?
ಸಾವಿನಲ್ಲಿ ಭರವಸೆ
ಹೇಗೆ ದಕ್ಕೀತು?
ಕೊಂಚ ಪಾಠ ಹೇಳಿಕೊಡು
ಸಾಯುವ ಮೊದಲು
ನಿನ್ನಂತೆ ನಕ್ಕು
ಮರೆಯಾಗುವುದ ತಿಳಿಸಿಕೊಡು
ಒಲವು