ರಷ್ಯಾv/s ಉಕ್ರೇನ್ ವಾರ್

ಕಾವ್ಯ ಸಂಗಾತಿ

ರಷ್ಯಾv/s ಉಕ್ರೇನ್ ವಾರ್

ದಾದಾಪೀರ್ ತರೀಕೆರೆ

ಗೆಳತಿ
ಯುದ್ಧದಾಹಿಗಳಿಂದ ಕೂಡಿದ
ಜಗತ್ತು ಎಷ್ಟು ಭೀಕರವಾಗಿದೆ
ನೋಡು……
ಸೂಪರ್ ಪವರ್ ಸರ್ಟಿಫಿಕೇಟ್
ನೀಡಲು ನೆಲಗಳು ಉರಿಯುತ್ತಿವೆ
ಆಕಾಶ ಬೆಂಕಿ ಉಗುಳುತ್ತಿದೆ ನಿನ್ನಂತಹ ನನ್ನಂತಹವರು
ಸುಟ್ಟು ಕರಕಲಾಗುತ್ತಿದ್ದಾರೆ…..
ಚಂದ್ರನ ಮೇಲೆ ಕಾಲಿಟ್ಟ ಮಾತ್ರಕ್ಕೆ ಅಮೇರಿಕಾ ರಷ್ಯಾ
ಬೆಳದಿಂಗಳಾದವೆ?
ಬೆಳದಿಂಗಳೆಂದರೆ ಸದಾ
ಪ್ರವಹಿಸುವ ನಿನ್ನ ನಗು ಅಲ್ಲವೇ?
ಟ್ಯಾಂಕರ್ ಬಾಂಬರ್ಗಳು ಬೆಂಕಿಯ ಸ್ಮಶಾನಗಳಾಗಿಸಿವೆ
ಉಕ್ರೇನ್ ನಲ್ಲಿ
ಬಾ ಪಾರಿವಾಳಗಳಾಗಿ ಹಾರೋಣ
ಯುದ್ಧಭೂಮಿಯ ಕುಲುಮೆಯಲ್ಲಿ
ಗುಲಾಬಿ ಹೂ ಅರಳಿಸೋಣ


Leave a Reply

Back To Top