ಕಾವ್ಯ ಸಂಗಾತಿ

ಮಹಿಳಾ ದಿನದ ವಿಶೇಷ

ಬಾಗಿಲಲ್ಲಿ ನಿಂತವಳೇ

ಮಮತಾ ಶಂಕರ್

ಅಂದು ನಾನು ಈ ಮನೆಯ ಬಿಟ್ಟು ಆ ಮನೆಯ ಹೊಕ್ಕಿದ್ದೆ.
ಬಿಟ್ಪೆನೆಂದದಕ್ಕೂ, ಹೊಕ್ಕೆನೆಂದದಕ್ಕೂ ಸಾಕ್ಷಿ ಏನೂ ಮಾತಾಡದೆ ಇನ್ನೂ ಹಾಗೇ ಮೌನವಾಗಿ ನಿಂತಿರುವ ಆ ಎರಡು ಸಾಗುವಾನಿ ಬಾಗಿಲುಗಳು

ಅದೇನು ಜರೂರಿತ್ತೋ ನನಗೂ
ಎರಡೆರಡು ಮನೆಯದು…
ಎರಡೂ ನನ್ನದಲ್ಲ…
ಎರಡಕ್ಕೂ ಪರಕೀಯಳು ನಾನು
ಇದು ಬಿಟ್ಟು ಅದು ಸೇರಬೇಕೆಂದು ಪಾಲಿಸಿದ್ದು ಯಾರ ಆದೇಶವೋ….

ಆ ಮನೆಗೆ ಹೋಗುವವಳೆಂದು ಈ ಮನೆಯವರೂ
ಈ ಮನೆಯಿಂದ ಬಂದವಳೆಂದು ಆ ಮನೆಯವರೂ ನನ್ನ ಅಪ್ಪಲಿಲ್ಲ…
ಇಬ್ಬರಿಗೂ ನಾನು ಬಾಗಿಲಾಚೆಯವಳಾಗಿಬಿಟ್ಟೆ

ನಿಂತಿದ್ದೇನೆ ತೆರೆದ ಬಾಗಿಲ ಚೌಕಟ್ಟಿಗೆ ಒರಗಿ
ಬಾಗಿಲ ಒಳಗೆ ಕಣ್ಣೀರು ಒರೆಸದ ಪುಟ್ಟ ಕುರುಡು ಜಗತ್ತಿದೆ
ಬಾಗಿಲಾಚೆಗೆ ಜಗತ್ತು ವಿಶಾಲವಾಗಿದೆ.‌..
ಬಾಗಿಲೊಳಗೆ ಅಪ್ಪಿ ಬೆಚ್ಚಗಿರಲು ಕಾತರಿಸುವ ಕೂಸು
ಬಾಗಿಲೊರಗೆ ಕೈಬೀಸಿ ಕರೆಯುತ್ತಿದೆ ಕನಸು

ಮನಸಿನ ಕದ ಮುಚ್ಚಿ ಒಳ ಹೊಕ್ಕಲೊ
ಕನಸಿನ ಕದ ತೆರೆದು ಹೊರ ಹೋಗಲೋ
ನಡುವೆ ನಿಂತು ತೊಯ್ದಾಡುತಿದೆ ಒಂಟಿ ನಿಂತವಳ ಮನಸು


8 thoughts on “

    1. ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ

  1. ಪ್ರತಿ ಹೆಣ್ಣಿನ ಅಂತರಂಗದ ಧ್ವನಿಯ ಸುಂದರ ಕವಿತೆ.

  2. ನಿಜ ಬಾಗಿಲಾಚೆ ನಿಂತ ಬದುಕು
    ಕದ ತೆರೆಯಲು ಏನೆಲ್ಲಾ ಕಸರತ್ತು
    ಕನಸು ನನಸುಗಳಾ ಚೆ ಉಸಿರು

Leave a Reply

Back To Top