ಕಾವ್ಯ ಸಂಗಾತಿ.
ಮಹಿಳಾ ದಿನದ ವಿಶೇಷ
ಮುಳ್ಳ ಮುಗುಳು
ವಿಜಯಲಕ್ಷ್ಮಿ ಕೊಟಗಿ
ಸಮಾನತೆಯ ಕನಸ ಹೊತ್ತು
ಅಸಮಾನತೆಯ ತೊಡೆಯಲೆಂದು
ಸಮತೆಯಿಂದ ಮೆರವಣಿಗೆ
ಹೊರಟಿದ್ದೇವೆ ನಾವು/
ಎಲ್ಲೇಲ್ಲೂ ಮಗ್ಗುಲ ಮುಳ್ಳುಗಳೇ
ಎತ್ತಿ ಬದಿಗೆಸೆದಷ್ಟು ಒತ್ತಿ ಬೆಳೆಯುತ್ತಿವೆ
ಗತ್ತಿನಿಂದ ಎದ್ದು ನಿಂತ ಗೊಡೆಗಳ
ಸೀಳುಸೀಳಲಿ ಮುಳ್ಳ ಮುಗುಳುಗಳೆ/
ನುಗ್ಗಿ ಸಿಗ್ಗಿಲ್ಲದೆ ಮೆರೆಯುತ್ತಿವೆ
ನೀರು ಗೊಬ್ಬರಗಳ ಹಂಗಿಲ್ಲದೆ
ಎತ್ತ ತಾವು ಸಿಕ್ಕರತ್ತ ಬೇರಿಳಿಸುತ್ತ
ಮತ್ತೆಮತ್ತೆ ಮೈಚಾಚಿ ಹಬ್ಬುತ್ತವೆ/
ಅದೆಷ್ಟು ಬಗೆ ಅದೆಷ್ಟು ಜಾತಿ
ನಗಿನಿ ಮುಳ್ಳು ಭಗಿನಿ ಮುಳ್ಳು
ಜಾಲಿ ಮುಳ್ಳು ಕಾರಿ ಮುಳ್ಳು
ಚುಚ್ಚುವ ಹುಟ್ಟುಗುಣ ಬಿಟ್ಟುಹೋದೀತೆ?
ಎಮ್ಮವರು ಎರವರೆಂಬ ಬೇಧವಿಲ್ಲದೆ
ಬದುಕು ಭಾವ ಭಾಷಣದಿ ಇಣುಕಿ
ಮೆರವಣಿಗೆ ಹೊರಟವನೇ ಕೆಣಕಿ
ಕನಸಕಂಗಳಲಿ ಕಸ ತುಂಬುವಲ್ಲಿ ಒಗ್ಗಟ್ಟು/
ಕೇಳಿರಿಲ್ಲಿ! ಕನಸುಗಾರ್ತಿಯರು ನಾವು
ಹಿಂದೆ ಸರಿಯುವುದಿಲ್ಲ ಕಷ್ಟ ಕಾಣುವುದಿಲ್ಲ
ದಿಟ್ಟ ಮನಸ್ಸಿಗೆ ಬರೆ ಬೀಳುವುದೇ ಇಲ್ಲ
ಹೋರಾಟವನೇ ಉಸಿರಾಡುವ ಆಶಾವಾದಿಗಳು/
ಕೈಕತ್ತಿಯ ಹಿಡಿದು ತೊಡರುವ ಮುಳ್ಳು ಸವರಿ
ಮುಂದೆ ಸಾಗುತ್ತೇವೆ ಒಂದಲ್ಲ ಒಂದು ದಿನ
ಸಮಾನತೆಯ ಗಮ್ಯ ಸಂಗಮಿಸಿ ಸಂಭ್ರಮಿಸುವಾಗ
ಮುಳ್ಳ ಮುಗುಳು ಮುಗುಳ್ನಕ್ಕು ಸ್ವಾಗತಿಸುವ
ನೀರಿಕ್ಷೆ ಹೊತ್ತು./
ಸಮಾನತೆಯ ಕನಸ ಹೊತ್ತು
ಅಸಮಾನತೆಯ ತೊಡೆಯಲೆಂದು
ಸಮತೆಯಿಂದ ಮೆರವಣಿಗೆ
ಹೊರಟಿದ್ದೇವೆ ನಾವು/
ಎಲ್ಲೇಲ್ಲೂ ಮಗ್ಗುಲ ಮುಳ್ಳುಗಳೇ
ಎತ್ತಿ ಬದಿಗೆಸೆದಷ್ಟು ಒತ್ತಿ ಬೆಳೆಯುತ್ತಿವೆ
ಗತ್ತಿನಿಂದ ಎದ್ದು ನಿಂತ ಗೊಡೆಗಳ
ಸೀಳುಸೀಳಲಿ ಮುಳ್ಳ ಮುಗುಳುಗಳೆ/
ನುಗ್ಗಿ ಸಿಗ್ಗಿಲ್ಲದೆ ಮೆರೆಯುತ್ತಿವೆ
ನೀರು ಗೊಬ್ಬರಗಳ ಹಂಗಿಲ್ಲದೆ
ಎತ್ತ ತಾವು ಸಿಕ್ಕರತ್ತ ಬೇರಿಳಿಸುತ್ತ
ಮತ್ತೆಮತ್ತೆ ಮೈಚಾಚಿ ಹಬ್ಬುತ್ತವೆ/
ಅದೆಷ್ಟು ಬಗೆ ಅದೆಷ್ಟು ಜಾತಿ
ನಗಿನಿ ಮುಳ್ಳು ಭಗಿನಿ ಮುಳ್ಳು
ಜಾಲಿ ಮುಳ್ಳು ಕಾರಿ ಮುಳ್ಳು
ಚುಚ್ಚುವ ಹುಟ್ಟುಗುಣ ಬಿಟ್ಟುಹೋದೀತೆ?
ಎಮ್ಮವರು ಎರವರೆಂಬ ಬೇಧವಿಲ್ಲದೆ
ಬದುಕು ಭಾವ ಭಾಷಣದಿ ಇಣುಕಿ
ಮೆರವಣಿಗೆ ಹೊರಟವನೇ ಕೆಣಕಿ
ಕನಸಕಂಗಳಲಿ ಕಸ ತುಂಬುವಲ್ಲಿ ಒಗ್ಗಟ್ಟು/
ಕೇಳಿರಿಲ್ಲಿ! ಕನಸುಗಾರ್ತಿಯರು ನಾವು
ಹಿಂದೆ ಸರಿಯುವುದಿಲ್ಲ ಕಷ್ಟ ಕಾಣುವುದಿಲ್ಲ
ದಿಟ್ಟ ಮನಸ್ಸಿಗೆ ಬರೆ ಬೀಳುವುದೇ ಇಲ್ಲ
ಹೋರಾಟವನೇ ಉಸಿರಾಡುವ ಆಶಾವಾದಿಗಳು/
ಕೈಕತ್ತಿಯ ಹಿಡಿದು ತೊಡರುವ ಮುಳ್ಳು ಸವರಿ
ಮುಂದೆ ಸಾಗುತ್ತೇವೆ ಒಂದಲ್ಲ ಒಂದು ದಿನ
ಸಮಾನತೆಯ ಗಮ್ಯ ಸಂಗಮಿಸಿ ಸಂಭ್ರಮಿಸುವಾಗ
ಮುಳ್ಳ ಮುಗುಳು ಮುಗುಳ್ನಕ್ಕು ಸ್ವಾಗತಿಸುವ
ನೀರಿಕ್ಷೆ ಹೊತ್ತು./