ಹಣೆಬರಹ ಬರೆದವರಾರೋ

ಕಾವ್ಯ ಸಂಗಾತಿ

ಹಣೆಬರಹ ಬರೆದವರಾರೋ

ಶಿವಲೀಲಾ ಹುಣಸಗಿ

ಯುಗಗಳುರುಳಿದರೂ
ಬದಲಾಗದಾ ಕಾರಿರುಳು
ಕರಿಬೇವು ಇಂಗು ಸಾಸಿವೆ
ಎಣ್ಣೆಯಲಿ‌ ಸಿಡಿದಷ್ಟು.
ಒಗ್ಗರಣೆಯ ಗುಂಗು ನಶೆಯಂತೆ
ಒಕ್ಕರಿಸಿ ಕಾಡುತಿವೆ ಹಗಲಿರುಳು
ಒಳಗಿನ ಒತ್ತರಿಕೆಗಳು
ಬಿಕ್ಕಳಿಕೆಗಳಾಗಿ ಬಿಕ್ಕುತಿವೆ
ಜಲಭಾದೆ ತೀರದಷ್ಟು ಬಳಲಿಕೆ
ಚಂಡಮಾರುತಗಳ ಅಬ್ಬರಕೆ
ಚಂಡಾಡಿವೆ ಸದ್ದು ಗದ್ದಲದಲಿ
ಬೀದಿ ಹೆಣವಾಗಿ ಬಿದ್ದವರು
ಹರಳೆಣ್ಣೆಯಂತೆ ಅಂಟಿಕೊಂಡರು
ಕಣ್ಣುಗಳಿಗೆ ಕಾಡಿಗೆಯ ಶೃಂಗಾರ
ತುಟಿಯಂಚಲಿ ಹಿಡಿ ಶಾಪ
ನೆತ್ತರಿನ ಓಕುಳಿಯಲಿ ಸಪ್ಪೆ ಭಾವ
ಹೊಡೆದಾಟ ಯಾರಿಗಾಗೆಂಬ ಚಿಂತೆ?
ಮೂಕವೇದನೆ ಕಂಗಳ ರೋಧನ
ಯಾವ ಅಸ್ತಿತ್ವವಿದೆ ಈ ಮನಕೆ
ನಮಗೊಂದು ಸ್ವತಂತ್ರ ಬದುಕಿಲ್ಲ
ವಸ್ತುವಾಗಿ ಉಳಿದೆವೆಂಬ ಸಂಕಟ!
ಕಾಲಚಕ್ರ ತಿರುಗಿದಂತೆಲ್ಲವೂ ಬದಲೆಂಬರು

Old wooden cartwheel isolated on white


ನಮ್ಮೊಳಗಿನ ಅಸ್ತಿತ್ವ ಮಾತ್ರ ಶೂನ್ಯದತ್ತ
ಮೋಹವಡ್ಯಾನದ ಅಸ್ಥಿರ ನಕ್ಷತ್ರಗಳು
ಮುಖ,ಮೂತಿ,ಮುಚ್ಚಿ ತಿರುಗಬೇಕಿದೆ
ಅತಂತ್ರ ತಾಣದಲಿ ನಲುಗಿದ್ದಾಗಿದೆ
ಇನ್ನೇನು ಉಳಿದಿಲ್ಲ ಈ ಬದುಕಿಗೆ?
ಅದೇ ನಿಟ್ಟುಸಿರು,ಒಡಲಕಿಚ್ಚಲಿ!
ಮತ್ತೆ ಆಶಾಭಾವ…ಹೊಸ ಕಿರಣದತ್ತ..


10 thoughts on “ಹಣೆಬರಹ ಬರೆದವರಾರೋ

  1. ಅಹುದು ಗೆಳತಿ ಎಣ್ಣೆ ಯೊಳಗಿನ ಸಾಸಿವೆ ಜಿರಗಿ ಯಂತೆ ಚಟಪಟ ಚಟಪಡಿಸುವುದು ನಿಜ ಚಂದದ ಅರ್ಥ ಪೂರ್ಣ ನುಡಿಗಳು

  2. ಅರ್ಥ ಪೂರ್ಣ ಲೇಖನ.ತುಂಬಾ ಚೆನ್ನಾಗಿ ಮೂಡಿ ಬಂದಿದೆ ರೀ

Leave a Reply

Back To Top