ಪ್ರಭಾವತಿ ಎಸ್ ದೇಸಾಯಿ

ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಕವಿ ಪರಿಚಯ

ಹೆಸರು…ಪ್ರಭಾವತಿ ಎಸ್ ದೇಸಾಯಿ
ವಿಳಾಸ
ಗಿರಿತಾರೆ ಬಿಲ್ಡಿಂಗ್
ವಿವೇಕ ನಗರ(ಪಶ್ಚಿಮ)
ಬಸವನ ಬಾಗೇವಾಡಿ ರೋಡ
ವಿಜಯಪುರ ೫೮೬೦೧೯
ಮೊ ೮೪೦೮೮ ೫೪೧೦೮.

ವೃತ್ತಿ..ನಿವೃತ್ತ ಹೊಲಿಗೆಯ ಮುಖ್ಯ ಭೋದಕಳು
ಹವ್ಯಾಸ ..ಓದು ಬರಹ,ಒಳಾಂಗಣ ಕ್ರೀಡೆ
ಪ್ರಕಟಿತ ಕೃತಿಗಳು..
೧. ಮೌನ ಕೋಗಿಲೆ (ಕವನ ಸಂಕಲನ)
೨.ಮುಂಗಾರು ಹನಿ(ಹನಿಗವನ)
೩.ರಂಗಸ್ಪಂದನ(ಸಂಪಾದಕಿ)
೪ ಮೌನ ಇಂಚರ(ಕನ್ನಡ ಗಜಲ್ಗಳು)
೫.ಮೊಬಾಯಿಲ್ ಪಯಣ ಹಾಗೂ ಇತರ ಪ್ರಬಂಧಗಳು
೬ ಶಾಂತಪ್ರಭೆಯ ಆಧುನಿಕ ವಚನ ಗಳು
೭ ಮಧುಸಾರ( ಹನಿಗವನಗಳು)
೮.ಮುಸ್ಸಂಜೆ( ಕಥಾ ಸಂಕಲನ)
೯.ವಚನ ಪ್ರಭೆ(ಆಧುನಿಕ ವಚನಗಳು)
೧೦ ಮಿಡಿತ ( ಕನ್ನಡ ಗಜಲ್ ಗಳು)
೧೧ ಪಕ್ಷಿನೋಟ(ಲಂಡನ ಪ್ರವಾಸ ಕಥನ)
೧೨ . ಸ್ವಚ್ಛ ಭಾರತ ಹಾಗೂ ಇತರ ಪ್ರಬಂಧಗಳು
೧೩.ಮಿಶ್ರ ಕಾವ್ಯ ( ಕವನ ಗಳು)
೧೪. ವಚನ ಮಿಂಚು(ಆಧುನಿಕ ವಚನಗಳು)
೧೫ .ನಿನಾದ ( ಕನ್ನಡ ಗಜಲ್ ಗಳು)
೧೬ .ಕಪ್ಪು ಹಣ ಹಾಗೂ ಇತರ ಪ್ರಬಂಧಗಳು
೧೭ ಭಾವಗಂಧಿ (ಕನ್ನಡ ಗಜಲ್ ಗಳು
೧೮. ನಿನ್ನ ಹೆಜ್ಜೆ ಗೆ ನನ್ನ ಗೆಜ್ಜೆ ( ತರಹೀ ಗಜಲ್ ಗಳು)
೧೯.ಒಲವ ಹಾಯಿ ದೋಣಿ( ಕನ್ನಡ ಗಜಲ್ ಗಳು)(ಮುದ್ರದಲ್ಲಿದೆ)

ಕಾವ್ಯನಾಮ * ಪ್ರಭೆ*
ಅಂಕಿತ ನಾಮ * ಶಾಂತ ಪ್ರಭೆ*
ಒಟ್ಟು..೨ ಕವನ ಸಂಕಲನ,೨ ಹನಿಗವನ ಸಂಕಲನ,೩ ಪ್ರಬಂಧ ನಸಂಕಲನ,,೩ ಆಧುನಿಕ ವಚನಗಳ ಸಂಕಲನ,,೧ ಕಥಾ ಸಂಕಲನ,೧ ಪ್ರವಾಸ ಸಂಕಲನ ,೧ ಸಂಪಾದಕ ಕೃತಿ, ೬ ಕನ್ನಡ ಗಜಲ್ ಗಳ ಸಂಕಲನಗಳು.

ಗಜಲ್ ೧

ಮನದ ಭಾವವೆಲ್ಲ ನಿವೇದಿಸಿದೆ ನೀನೇಕೆ ದೂರಾದೆ
ಅನುರಾಗದ ಹಣತೆ ಬೆಳಗಿಸಿದೆ ನೀನೇಕೆ ದೂರಾದೆ

ಸಂತೆಯ ಸಾಲಲಿ ನಿನ್ನ ಕಂಡ ಮನ ಹುಚ್ಚಾಗಿ ಕುಣಿಯಿತು
ಲೋಕ ಮರೆತು ಕಂಗಳ ಕೂಡಿಸಿದೆ ನೀನೇಕೆ ದೂರಾದೆ

ಬಾಳಲ್ಲಿ ಬಿಸಿಲು ತಾಕದಿರಲೆಂದು ಹಿಡಿದೆ ಸೆರಗ ನೆರಳು
ಜೊತೆ ಜೊತೆಗೆ ಹೆಜ್ಜೆ ಹಾಕ ಬಯಸಿದೆ ನೀನೇಕೆ ದೂರಾದೆ

ನಡೆವ ಹಾದಿಗಿದ್ದ ಮುಳ್ಳುಗಳ ಸರಿಸಿ ಹಾಸಿದೆ ಹೂಗಳ
ನನ್ನೆದೆಯ ಅಮೃತ ಕುಡಿಸಿದೆ ನೀನೇಕೆ ದೂರಾದೆ

ಬದುಕಲಿ ಬೆಂದ ಜೀವಿಗೆ ತಂಪಿನ ಹಸಿರ ನೆಲೆಯ ನೀಡಿದೆ
ನೂರಾರು ಕನಸುಗಳ ತೋರಿಸಿದೆ ನೀನೇಕೆ ದೂರಾದೆ

ಸುಖ ಹುಡುಕುತ ಜಂಗಮನಾಗಿ ಹಾದಿ ಬೀದಿ ಅಲೆಯುತಿರುವೆ
ಯೌವನದ ಇಬ್ಬನಿಯನು ಸುರಿಸಿದೆ ನೀನೇಕೆ ದೂರಾದೆ

“ಪ್ರಭೆ”ಯು ಮೋಹ ಬೇಡಿ ಕನವರಿಸುವುದು ಅವನು ಅರಿಯಲಿಲ್ಲ
ತುಟಿ ಮುತ್ತುಗಳ ಹಾರ ಪೋಣಿಸಿದೆ ನೀನೇಕೆ ದೂರಾದೆ

*************

ಗಜಲ್ ೨

ಒಲವ ಮೊಗ್ಗು ಬಿರಿಯುವ ನೋವು ದುಂಬಿಗೇನು ಗೊತ್ತು
ಕನಸಿಲ್ಲದ ಬದುಕ ಯಾತನೆ ಕಣ್ಣಿಗೇನು ಗೊತ್ತು

ಗೂಡಲಿ ಕಾಯುತಿದೆ ಪುಟ್ಟ ಮರಿಯೊಂದು ತಾಯಿಯನು
ಗುಟುಕನು ತರುವ ಹಕ್ಕಿಯ ಕಷ್ಟ ಮರಿಗೇನು ಗೊತ್ತು

ಶಿಲಾ ಬಾಲೆಯ ಚೆಲುವಿಗೆ ಮರುಳಾಗಿ ಮೈ ಮರೆತನು
ಮೂತಿ೯ಯಾದ ಶಿಲೆ ತಿಂದ ಪೆಟ್ಟು ಉಳಿಗೇನು ಗೊತ್ತು

ಪ್ರಕೃತಿಯ ಮಡಿಲಲಿ ಬಾಳುವ ಪಿಕ ಸುಖಿ ತಾನೆಂದಿತು‌
ಹೊನ್ನ ಪಂಜರದ ಬಂಧಿ ಗಿಣಿಗೆ ಸುಖವೇನು ಗೊತ್ತು

ಬೆಳಕ ಕಂಡ ಹಾತೆಗಳು ಚುಂಬಿಸಲು ಕಾತರಿಸಿವೆ
ಬೆಳಕಿನ ಝಳ ಹಾದಿ ಬೆಳಗುವ ದೀಪಕೇನು ಗೊತ್ತು

ಬೆಳಕಿಲ್ಲದ ಹಾದಿಯಲ್ಲಿ ಗುರಿ ಮುಟ್ಟಲು ಸಾಗಿದೆ
ರಕುತ ಸುರಿಸಿದ ಕಾಲ ನೋವು ಮುಳ್ಳಿಗೇನು ಗೊತ್ತು

ಮಧು ಬಟ್ಟಲಿನ ಅಮಲಿನಲಿ ಜೀವ ತೇಲಾಡುತಿದೆ
“ಪ್ರಭೆ” ಹರಿಸಿದ ಕಂಬನಿ ಹರವು ಅವನಿಗೇನು ಗೊತ್ತು.


ಪ್ರಭಾವತಿ ಎಸ್ ದೇಸಾಯಿ

2 thoughts on “ಪ್ರಭಾವತಿ ಎಸ್ ದೇಸಾಯಿ

  1. ಚಂದದ ಗಜಲ್ ಗಳು ಎರಡನೇ ಗಜಲ್ ಇನ್ನೂ ಇಷ್ಟವಾಯಿತು ಅಮ್ಮ

Leave a Reply

Back To Top