ಕಾವ್ಯ ಸಂಗಾತಿ
ಅಮೃತಾ ಶೆಟ್ಟಿ ಶಿವಪುರ ಗಜಲುಗಳು
ಪರಿಚಯ
ಅಮೃತಾ ಉಮೇಶ್ ಶೆಟ್ಟಿ ಶಿವಪುರ
ಮೂಲತ ಉಡುಪಿ ಜಿಲ್ಲೆಯವರು
MA. LLB ಪಧವಿಧರೆ.
ವೃತ್ತಿ : ವಕೀಲರು
ನಗು ಎಂಬ ಕವನ ಸಂಕಲನ ಪ್ರಕಟವಾಗಿದೆ
ಗಝಲ್
ತಮದ ದಾರಿಲಿ ಮೌನದಿ ಸಾಗಲು ಬೆಳಕನು ಬೀರುವೆಯಾ ಕಂದೀಲು
ಮರದ ದೋಣಿಲಿ ಭಯದಿ ಹೋಗಲು ಸನಿಹ ಇರುವೆಯಾ ಕಂದೀಲು
ರಾತ್ರಿಯ ವೇಳೆಲಿ ಮಾತ್ರವೇ ಪಾತ್ರವ ಮಾಡಿ ಹಗಲಿಗೆ ಮೌನವೇ
ಒಲವಿನ ತೈಲಕೆ ಜ್ವಲಿಸುತ ಮನಕೆ ಕಾಂತಿಯ ತೋರುವೆಯಾ ಕಂದೀಲು
ಬೀಸುವ ಗಾಳಿಗೂ ಬೇಸರ ಮೂಡಿಸಿ ನಗುತ ಬದುಕುವೆಯಾ ಹೇಳು
ಬರೆವ ಕವಿತೆಯ ಪುಸ್ತಕ ತೆರೆಯಲು ಕರೆಯದೆ ಬರುವೆಯಾ ಕಂದೀಲು
ಹುಲ್ಲಿನ ಮನೆಯಲಿ ಎಲ್ಲ ನೋಡುತ ಮನುಜ ಸಂಗಾತಿಯಾಗುತ ಅಲೆದೆ
ಇರುಳ ಸಮಯ ತೆರಳುವ ದಾರಿಲಿ ಕರಗಳಿಗೆ ಏರುವೆಯಾ ಕಂದೀಲು
ಗದ್ದೆಯ ಬದಿ ನಿದ್ದೆಯ ಮಾಡದೆ ಎದ್ದಿಹುದನು ಅಮ್ಮಿಯು ಅರಿತಿಹಳು
ಕತ್ತಲೆ ಹೃದಯಕೆ ನಿತ್ಯ ಜ್ಞಾನ ದೀವಿಗೆಯಾಗಿ ಸೇರುವೆಯಾ ಕಂದೀಲು
***
ಗಝಲ್
ಬಾನಿನ ಲೋಕಕೆ ಮಾಸದ ರಂಗನು ಬೆರೆಸುವೆಯಾ ಬಣ್ಣವೇ
ನಾಳಿನ ಬದುಕಿಗೆ ಪ್ರೇಮದ ಗುಂಗನು ಮೆರೆಸುವೆಯಾ ಬಣ್ಣವೇ
ಕಾಣುವ ಕಾಮನ ಬಿಲ್ಲಲಿ ಮೂಡುವ
ರೇಖೆಯ ಎಣಿಸುವೆಯಾ
ಜಾರಿದ ನಿದಿರೆಲಿ ಮೀರಿದ ಕನಸನು ಕರೆಸುವೆಯಾ ಬಣ್ಣವೇ
ಹುಣ್ಣಿಮೆ ಚಂದ್ರನ ಅಂದಕೆ ಕಂದನ
ನಗುವನು ನೋಡು
ಮೊಗ್ಗಿನ ಗುಲಾಬಿಯ ಮೆತ್ತನೆ ಪಕಳೆ
ತೆರೆಸುವೆಯಾ ಬಣ್ಣವೇ
ಸೂರ್ಯ ಕಾಂತಿ ರವಿಗೆ ಕಾಯುತ
ಪ್ರೀತಿಯ ಕೊಡುವಳು
ಒಡಲಿನ ನೋವಿಗೆ ಸನಿಹ ಬರುತ ಮರೆಸುವೆಯಾ ಬಣ್ಣವೇ
ಅಮ್ಮಿ ಹಚ್ಚಿದ ಮದರಂಗಿ ಚೆಂದದಿ
ಉಳಿಸುತಿರು ಹಾಗೆಯೇ
ಬಾಳಿನ ದೀಪಕೆ ಒಲವಿನ ತೈಲವನು ಎರೆಸುವೆಯಾ ಬಣ್ಣವೇ
ಅಮೃತಾ ಉಮೇಶ್ ಶೆಟ್ಟಿ ಶಿವಪುರ