ಕಾವ್ಯ ಸಂಗಾತಿ
ಮಾಲತಿಎಸ್.ಆರಾಧ್ಯ ಕವಿತೆಗಳು

ಪರಿಚಯ
ಕವಯತ್ರಿ, ಲೇಖಕಿ, ವೃತ್ತಿಯಲ್ಲಿ ಕನ್ನಡ ಹಾಗೂ ಹಿಂದಿ ಶಿಕ್ಷಕಿ.ಪ್ರವೃತ್ತಿಯಲ್ಲಿ ಸಾಹಿತ್ಯ ರಚನೆ,ತಾಯಿ ರಾಜರಾಜೇಶ್ವರಿಯನ್ನು ಆರಾಧಿಸುತ್ತಾ ಕನ್ನಡ ಸೇವೆ ಮುಂದುವರೆದಿದೆ,ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ.ರವಿಕಿರಣ ಸಾಹಿತ್ಯ ವೇದಿಕೆಯಲ್ಲಿ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ರಸಪ್ರಶ್ನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಜಿಲ್ಲಾ ಮಟ್ಟದ ಕವಿಗೋಷ್ಟಿಗಳಲ್ಲಿ ಭಾಗವಹಿಸುವಿಕೆ

ಮತ್ತೊಮ್ಮೆ ನಾ ಜನಿಸಲೇ
ಮತ್ತೊಮ್ಮೆ ನಿನ್ನ ಒಡಲಲಿ ಜನಿಸುವಾಸೆ
ನಿನ್ನ ಕೈ ಹಿಡಿದು
ನಡೆವಾಸೆ
ಹೃದಯ ಬಡಿತದ
ಸದ್ದುನು ಕೇಳಿ
ನಲಿವಾಸೆ
ಎದೆಗವಚಿಕೊಂಡು ಪ್ರೀತಿ ಮಾಡುವಾಸೆ
ಮತ್ತೊಮ್ಮೆ ನಿನ್ನ
ಮಡಿಲಲಿ ಮಲಗುವಾಸೆ
ಕೋಪವಿಲ್ಲದ
ದ್ವೇಷವಿಲ್ಲದ
ಮೋಸ ಕಾಣದ
ಮುಗ್ಧ ಮಗುವಾಗುವಾಸೆ
ಜಗದ ಎಲ್ಲಾ ತತ್ವಗಳನು
ನಿನ್ನಪ್ಪುಗೆಯಲಿ
ಮರೆಯುವಾಸೆ
ನೀ ಹಾಕಿಕೊಟ್ಟ ಸಂಸ್ಕಾರವ ಮತ್ತೊಮ್ಮೆ
ಕಲಿಸು ಬಾ ಅಮ್ಮ
ನನ್ನೀ ಕಣ್ಣೀರಲಿ ಪಾದವ ತೊಳೆದು
ನಾನೆಸಗಿದ ತಪ್ಪನು
ತಿಳಿದು
ಮತ್ತೊಮ್ಮೆ ನಿನ್ನ ಗರ್ಭದಿ ಜನ್ಮತಾಳುವಾಸೆ
ಅಮ್ಮಾ ಎಂದು ಕರೆವಾಸೆ
ನಿನ್ನಪ್ಪಿ ಮುದ್ದಾಡುವಾಸೆ
ಈ ಅವಕಾಶವ ಒಮ್ಮೆ
ಮತ್ತೊಮ್ಮೆ ಕರುಣಿಸು
ದೇವಾ ಜಗದೀಶ್ವರಾ !
***
ಮಕ್ಕಳು ಹಾಗು ಶಿಕ್ಷಕರು
ಮಕ್ಕಳು ಬರೆದಾಗ ತಪ್ಪಕ್ಷರ ಅಳಿಸಿ
ತಿದ್ದಬೇಕು ತಕ್ಷಣ ಮನ ಒಲಿಸಿ
ತಪ್ಪು ಹೆಜ್ಜೆಯನಿಡುವಾಗ
ಒಳ್ಳೆಯ ಸಲಹೆಗಳನೀಡುವರಾಗ
ಮನದಲಿ ಕೆಟ್ಟ ಯೋಚನೆಗಳು ಮೂಡಿದಾಗ
ಶಿಕ್ಷಕರ ಮನ ಮುದುಡುವುದಾಗ
ಕಲಿಕೆಯಲಿ ಸ್ವಲ್ಪವಾದರೂ ಶಿಕ್ಷೆ
ಇರಬೇಕು ಮಾಡಿದ ತಪ್ಪಿಗೆ
ಶಿಕ್ಷೆ ಇರದ ಶಿಕ್ಷಣ
ಇರದು ಮನದಲಿ ಕ್ಷಣ
ಮೃದುವಾದ ಮೆದುವಾದ ಶಿಕ್ಷೆಗೆ
ಯಾವತ್ತೂ ಇರಬೇಕು
ಪೋಷಕರಿಂದ ಒಪ್ಪಿಗೆ
ಇಲ್ಲದಿರೆ ಮಾತು ಮಾತಿಗೂ ಆಗುವರು ಮಕ್ಕಳು ಬೆಪ್ಪಗೆ
ಈ ರೀತಿ ಸಾಗುತಿರೆ
ಕಲಿಕೆಯಲಿ ಅನವರತ
ಸಾಗುವರು ದಿಗಂತ
ಮಕ್ಕಳಾಗುವರು ಅನಂತ !
ಮಾಲತಿ ಎಸ್.ಆರಾಧ್ಯ

ಕನ್ನಡ ಕವನಗಳನ್ನು ಬಹಳ ಚೆನ್ನಾಗಿ ಬರೆದಿದ್ದೀರ ಮಾಲತಿ ಮೇಡಂ ಬಹಳ ಸಂತೋಷವಾಯಿತು .
ತುಂಬು ಹೃದಯದ ಧನ್ಯವಾದಗಳು