ಗಜಲ್
ದೇವರಾಜ್ ಹುಣಸಿಕಟ್ಟಿ
ನೆಟ್ಟ ಸರಹದ್ದುಗಳ ದಾಟುವುದು ಯಾವಾಗ
ಮನುಷ್ಯ ಮನುಷ್ಯನಾಗುವುದು ಯಾವಾಗ
ಅದೆಷ್ಟು ಧರ್ಮಾoದತೆಯ ಹೊದ್ದು ಮಲಗಿದ್ದೀರಿ
ಮತದ ಬೇಡಿಗಳ ಕಿತ್ತೆಸೆಯುವುದು ಯಾವಾಗ
ಬಣ್ಣ ಬಳಿದೆರೆಷ್ಟು ಬಿಳಿಚಲೇಬೇಕು ಕಾಲನಾಟಕ್ಕೆ
ತೊಟ್ಟ ಮುಖವಾಡಗಳ ಕಳೆಚುವುದು ಯಾವಾಗ
ಮಸಣವದು ಕರೆದು ತಂದಾಗಿದೆ ಮನ ಮನೆ-ಮನೆಗೆ
ಸತ್ತ ಮನುಷ್ಯತ್ವದ ಗಬ್ಬು ವಾಸನೆ ತೊಳೆಯುವುದು ಯಾವಾಗ
ಓಣಿಗೊಂದರಂತೆ ಗುಡಿ ಗುಂಡಾರ ಕಟ್ಟಿದ್ದೆ ಬಂತು
ಹೃದಯದರಮನೆಯಲಿ ‘ದೇವ ‘ ನೆಲೆಸುವುದು ಯಾವಾಗ