ಗಜಲ್
ಜ್ಯೋತಿ ಬಿ ದೇವಣಗಾವ್
ಯಾಕೆ ಹೇಳು ಇದೆಂಥ ಮೌನ ರಾಹು ಬಡಿಯಿತೆ
ಕ್ಷಣಕ್ಷಣಕೂ ಮಿಡಿದ ವೀಣೆಯ ತಾರು ಕಡಿಯಿತೆ
ಒಲವ ಕಡಲಿಗೆ ಇಳಿದೇ ಬಿಟ್ಟೆವು ಉನ್ಮಾದದಲಿ
ನಿಂತ ನೆಲವು ಬಾಯಿ ಬಿಡದೆ ನನ್ನ ಉಳಿಸಿತೆ
ಆಣೆ ಭಾಷೆ ಎಲ್ಲ ಮರೆತು ಮಂಕು ಕವಿಯಿತು
ಚಲವತೊಟ್ಟು ತೊರೆದುಹೋಗುವ ಆಸೆ ಬಲಿಯಿತೆ
ನೀ ನಿತ್ತ ಗುಟುಕು ಪ್ರೀತಿ ಸಾಕು ಉಳಿದ ಜನುಮಕೆ
ಕೊಂದಾಡುತಿರಲಿ ಹೀಗೆ ನೆನಪು ನೆಪವ ಸೆಳೆದಿತೆ
ಒಂಟಿಯಾಗಿ ನಡೆಯುವೆ ಕೆಂಡಹಾಸಿದ ದಾರಿಗೆ
ಚಿಜ್ಜ್ಯೋತಿಯೊಂದು ಬೆಳಗಿ ತಾಪಕೆ ತಾನೇ ಕರಗಿತೆ