ಬಂಟ

ಕಾವ್ಯ ಸಂಗಾತಿ

ಬಂಟ

ಎಸ್. ವಿ. ಹೆಗಡೆ

ಅಚಲ ನಂದಿ ಶಿವನ ಬಂಟ
ಕುಳಿತ ಠೀವಿ ಹೊಳೆವ ಕಂಠ
ಕುಂತಲ್ಲೆ ಕುಳಿತ ಕಾವಲುದಾರ
ಕಣ್ಮುಚ್ಚದೆ ಧ್ವಾರ ಕಾವ ಸರದಾರ

ಮುಂದೆ ಶಿವನ ಸದಾ ಧ್ಯಾನ
ಮೌನದಲ್ಲೆ ಮೊರೆಯ ಕೇಳಿ
ಬಂದ ಭಕುತರ ಸಮ್ಮಾನ
ಗಣಗಣಿಸುವ ಕೊರಳ ಗಂಟೆ
ಮಣಮಣಗುಡುವ ಮನಕೆ

ರೈತನೊಡನೆ ಹೊಲವ ಹೂಳಿ
ಕಾಲು ಬಾಗಿ ಕುಳಿತ ವೃಷಭ
ದಣಿದ ದೇಹ ಹೊಳೆವ ಕಪ್ಪು
ಮೈಯ ನೆವರಿ ಒಮ್ಮೆ ಪಾದ
ಮುಟ್ಟಿ ನಮಿಸಿ


Leave a Reply

Back To Top