ಗಜಲ್

ಗಜಲ್

ಮತ್ತೆ ಬಂದಿದೆ ವಸಂತ ಕಳೆದ ನೆನಪಿನ ಸಾಲಿಗೆ
ಹೂ ಮುತ್ತುವ ದುಂಬಿ ಕಾಡಿದೆ ಕನಸಿನ ಸಾಲಿಗೆ

ರಿಂಗಣಸಿದೆ ಧುನಿ ಅಂಗಳದಿ ಹೊಳೆವ ಚಂದ್ರಿಕೆಗೆ
ಶಶಿಯೊಲವಿಗೆ ಅರಳಿದೆ ನೈದಿಲೆ ಚೆಲುವಿನ ಸಾಲಿಗೆ

ಮೊದಲ ಭೇಟಿಯಲಿ ಮಿಂದ ನೆನಪು ಒಲವ ಮಳೆಗೆ
ಹೂಗಳರಳಿವೆ ಮನದಲಿ ಮರೆತು ಕಾನನ ಸಾಲಿಗೆ

ಮನವು ತುಂಬಿದೆ ಮತ್ತೆ ಮತ್ತೆ ಮಳೆಯ ಓಕುಳಿಗೆ
ಘನಿಕರಿಸದೆ ಮಳೆ ಹರಿದಿದೆ ಕಣ್ಣ ನೀರಿನ ಸಾಲಿಗೆ

ಮೊಹಬತ್ತಿನ ರೋಶನಿ ಹರಡಿದೆ ಶಾರು ಬಾಳಿಗೆ
ನವಿಲ ನಲಿವ ಮನ ಕಾದಿದೆ ಅವನ ಒಲವಿನ‌ ಸಾಲಿಗೆ


ಶಾಲಿನಿ ರುದ್ರಮುನಿ ಹುಬ್ಬಳ್ಳಿ

4 thoughts on “ಗಜಲ್

Leave a Reply

Back To Top