ಕಾವ್ಯ ಸಂಗಾತಿ
ನನ್ನೊಳಿಲ್ಲ ನಾನು
ನನ್ನೊಳಿಲ್ಲ ನಾನು
ನನ್ನೊಳು ನೀ ಬೆರೆತಿರುವಾಗ
ಹೃದಯದ ಹಾಡೊಂದು
ನನ್ನ ಮರೆಸಿ
ನಿನ್ನ ಮೆರೆಸುತ್ತಿರುವಾಗ
ಭಾವಗಳಿಗೆ ಬಣ್ಣ ತುಂಬಿ
ನೀಲಿಗಗನದ ಕಾಮನಬಿಲ್ಲಾಗಿ
ಕಣ್ತುಂಬುತ್ತಿರುವಾಗ
ಜೀವಕ್ಕೆ ಉಸಿರು ತುಂಬಿ
ಉಸಿರಿಗೆ ಒಲವ ತುಂಬಿ
ಒಲವಿಗೆ ಚೈತನ್ಯ ತುಂಬಿ
ನೀ ಜೊತೆ ಇರುವಾಗ
ನನ್ನೊಳಿಲ್ಲ ನಾನು
ನನ್ನೊಳು ನೀ ಬೆರೆತಿರುವಾಗ
ಒಲವು