ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಿಂಚುಹುಳುವಾಗುವ

ಒಲವು

force mechanics. Worm gear enveloped by smoke on a black background

ನೀ ಮುಟ್ಟಿದ್ದಕ್ಕೆ
ಸಾಕ್ಷಿಗೆ ನನ್ನಲ್ಲಿ
ಗರ್ಭಕೋಶವೊಂದು
ಇರಬಾರದಿತ್ತು

ಕತ್ತಲಲ್ಲಿ ಸೋತ
ಕನಸುಗಳಿಗೆ
ಮಿಂಚುಹುಳುವಾಗುವ
ಕನಸುಗಳಿವೆ

ಯಾರ ಪಾದದ
ಗುರುತೂ ಇರದ
ದಾರಿಗಳಲ್ಲಿ ನನ್ನ ಹೆಜ್ಜೆ
ಮೂಡಿಸುವ ಮನಸಿದೆ

ಆದರೆ ಮಧ್ಯರಾತ್ರಿಯಲ್ಲಿ
ನಾ ಒಬ್ಬಂಟಿಯಾಗಿ ನಡೆವಾಗ
ನೀ ನನ್ನ ಮುಟ್ಟಿದ್ದಕ್ಕೆ ನಾನೇ
ಸಾಕ್ಷಿಯಾಗಿ ಬಿಡುವ ಭಯವಿದೆ

ನೀ ಮುಟ್ಟಿದ್ದಕ್ಕೆ
ಸಾಕ್ಷಿಗೆ ನನ್ನಲ್ಲಿ
ಗರ್ಭಕೋಶವೊಂದು
ಇರಬಾರದಿತ್ತು


About The Author

Leave a Reply

You cannot copy content of this page

Scroll to Top