ಕಾವ್ಯ ಸಂಗಾತಿ
ತಣಿಸು ಹೃದಯವ
ಚಂದ್ರು ಪಿ ಹಾಸನ್


ಓ ನನ್ನ ಪ್ರೇಮ ದೇವತೆ
ನಾನು ಬಯಸಿದೆ ನಿನ್ನ ಒಲವ
ನಿನಗಾಗಿ ಕಾದಿರುವೆ ಇಲ್ಲಿ
ನೀಡು ಬಾ ನನಗೆ ಗೆಲುವ
ನನ್ನಲ್ಲಿ ಮುಂಜಾವ ಮಂಜಂತೆ
ಸುರಿದು ಎಲ್ಲೆಡೆ ಆವರಿಸಿ
ಸೂರ್ಯನ ಕಿರಣಗಳಿಗೆ ಕರಗಿ
ಹೋದಂತೆ ಮರೆಯಾದೆಯಾ?
ನಿನ್ನೊಲವ ತಂಗಾಳಿಯನ್ನು
ಬಯಸಿ ನೆನೆಯುತ್ತಿರುವೆನು
ವಿರಹದ ಜ್ವಾಲೆಯಲ್ಲಿ ಬೆಂದಿರುವೆ
ಬಾ ಒಮ್ಮೆ ಬಳಿಗೆ ಸಂತೈಸೆನ್ನಾ
ಪ್ರೇಮನಾದವು ನುಡಿಯುತ್ತಿದೆ
ನನ್ನ ಹೃದಯದಲ್ಲಿ ನಿನ್ನ ಹೆಸರಲ್ಲಿ
ನನ್ನುಸಿರ ಕಣಕಣದಲ್ಲೂ ಸಹ ನಿನ್ನೆಸರನ್ನು ಜಪಿಸುತ್ತಿದೆ
ಒಮ್ಮೆ ಬಾ ನನ್ನ ಮುಂದೆ
ನನ್ನ ಸೊರಗಿರುವ ಕಣ್ಣಲ್ಲಿ
ಮಿಂಚಿರಿಸಿ ತುಂಬಿಕೋ…. ತಣಿಸು
ಹೃದಯವನ್ನು ನಿನ್ನ ಒಲವಲ್ಲಿ
One thought on “ತಣಿಸು ಹೃದಯವ”