ಮಕ್ಕಳಬಾಳಿಗೆಬೆಳಕು- ಸಾವಿತ್ರಿಬಾಯಿಫುಲೆ

ಪುಸ್ತಕ ಸಂಗಾತಿ

ಮಕ್ಕಳಬಾಳಿಗೆಬೆಳಕು- ಸಾವಿತ್ರಿಬಾಯಿಫುಲೆ

ಮಕ್ಕಳಬಾಳಿಗೆಬೆಳಕುಸಾವಿತ್ರಿಬಾಯಿಫುಲೆ

ಲೇಖಕರುಶಂಕರದೇವರು ಹಿರೇಮಠ

ಇಂದಿನ ಕೊರೋನಾ ಅವಧಿಯ ಕಾಲಮಾನದ ವರ್ತಮಾನದಲ್ಲಿ ಮಕ್ಕಳ ಕಲಿಕೆಯು ಸಹಜವಾಗಿರದೆ ಅವರ ಶೈಕ್ಷಣಿಕ ಬದುಕು ತುಂಬಾ ಕಷ್ಟಕರವಾಗಿದೆ.  ಶಾಲೆಯಲ್ಲಿ ಮಕ್ಕಳೊಂದಿಗೆ ಬೆರೆತು ಶಿಕ್ಷಕರನ್ನು ಕಣ್ಣಮುಂದೆಯೇ ಕಂಡು ಅವರಿಂದ ಪಾಠಕಲಿಯುವ ಅವರ ಪ್ರೀತಿಯ ಮಾತುಗಳಲ್ಲಿ ಹೊಗಳಿಸಿಕೊಳ್ಳುವ ಅವಕಾಶವನ್ನು ಮಕ್ಕಳು ಕಳೆದುಕೊಂಡಿರುವುದು ನಿಜಕ್ಕೂಶೋಚನೀಯ. ಮೊಬೈಲ್ಫೋನಿನಲ್ಲೋ, ವೀಡಿಯೋಗಳ ಮೂಲಕವೋ, ಟ್ಯಾಬ್ಗಳಮೂಲಕವೋ ಗಿಳಿಪಾಠ ಕೇಳುವ ಮಕ್ಕಳಿಗೆ ಆ ಪಾಠ ಎಷ್ಟು ಅರ್ಥವಾಗುತ್ತದೋ ಏನೋತಿಳಿಯದು. ಒಂದೆರಡು ತಾಸಿನಲ್ಲೇ ಮಗು ಪಾಠ ಕೇಳಲು ಬೇಸರವಾಗಿ ನಿರಾಸಕ್ತಿಯನ್ನು ತೋರುತ್ತದೆ.  ಇಂತಹ ಸಮಯದಲ್ಲಿ ಪೋಷಕರ ಪರದಾಟ ಹೇಳತೀರದು.  ಈ ಸಮಯದಲ್ಲಿ ಮಗುವಿಗೆ ಕಥೆಯನ್ನೋ.. ಕಥನಗೀತೆಯನ್ನೋ ಹೇಳಿಕೊಟ್ಟರೆ ಮಗುಖುಷಿಯಿಂದ ಕೇಳಿಸಿಕೊಂಡು ಖುಷಿಪಡುವುದು ಸಹಜ.  ಮಕ್ಕಳಿಗೆ ಇಂತಹ ಸಮಯದಲ್ಲಿ ಅನುಕೂಲಕರವಾಗುವಂತಹ ಕಥೆಗಳನ್ನು, ಕವಿತೆಗಳನ್ನು ಇನ್ನಿತರ ಸಾಹಿತ್ಯವನ್ನು ಓದುವ ಸರಳ ಅವಕಾಶವನ್ನು ಕಲ್ಪಸಿಕೊಡುತ್ತಾ ತಮ್ಮ ಸೃಜನಶೀಲತೆಯನ್ನು ಮಕ್ಕಳಸಾಹಿತ್ಯಕ್ಕಾಗಿ ಮೀಸಲಿಟ್ಟು ಅನೇಕ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ನಡೆಸುತ್ತಾ ಸೇವೆಗೈಯ್ಯುತ್ತಿರುವ ಸ್ವತಃ ಶಿಕ್ಷಕರೇ ಆಗಿರುವ ರಾಯಚೂರುಜಿಲ್ಲೆಯ ಸಿಂಧನೂರಿನವರಾದಕವಿ. ಶ್ರೀಶಂಕರದೇವರುಹಿರೇಮಠಅವರು.

ಶಂಕರದೇವರು ಹಿರೇಮಠರು ಬರೆದ ಮಕ್ಕಳಬಾಳಿನ ಬೆಳಕು ಅಕ್ಷರಜ್ಯೋತಿ ಸಾವಿತ್ರಿಬಾಯಿಫುಲೆ’ ಅವರ ಜೀವನ ಚರಿತ್ರೆಯೆಂಬ ಪುಸ್ತಕವು ಇದೀಗ ಪೂರ್ಣಗೊಂಡು ಮಕ್ಕಳಿಗಾಗಿ ಓದಲುಕಾಯುತ್ತಿದೆ.  ಈ ಪುಸ್ತಕದಲ್ಲಿ ೧೬ಅಧ್ಯಾಯಗಳಲ್ಲಿ `ಸಾವಿತ್ರಿಬಾಯಿಫುಲೆ’ಯವರಜೀವನವನ್ನು ಬಾಲ್ಯದಿಂದ ಪ್ರಾರಂಭಿಸಿ ಅವರ ಬಾಲ್ಯ, ವೈವಾಹಿಕಜೀವನ, ವಿದ್ಯಾಭ್ಯಾಸ, ಹೋರಾಟ, ಸಾಮಾಜಿಕಸೇವೆ, ಯಶಸ್ಸನ್ನು ಬಹಳ ಸೊಗಸಾಗಿ ಮಕ್ಕಳಿಗೆ ಬೇಗ ಅರ್ಥವಾಗುಂತೆ ಸರಳಭಾಷೆ, ಸರಾಗವಾಗಿ ಓದಿಸಿಕೊಂಡು ಹೋಗುವಂತಹ ನಿರೂಪಣೆಯಿಂದ ಪುಸ್ತಕವು ಗೆಲ್ಲುತ್ತದೆ.  ಸಾಮಾಜಿಕ ಪಿಡುಗುಗಳಾಗಿದ್ದ ಲಿಂಗತಾರತಮ್ಯ, ಬಡತನ, ಅನಕ್ಷರತೆಯ ವಿರುದ್ಧ ಹೋರಾಟ ಮಾಡಿ ತಾನೂ ಕಲಿತು.. ಇತರರಿಗೂ ಕಲಿಸಿ ಸಮಾಜದಲ್ಲಿ ಸ್ತ್ರೀಯನ್ನು ಗಂಡಿನಸಮಾನವಾಗಿ ವಿದ್ಯಾವಂತಳಾಗಲು ದಾರಿತೋರಿದ ಮೊದಲ ಮಹಾಗುರು `ಸಾವಿತ್ರಿಬಾಯಿಫುಲೆ’ಯವರು.

ಮುಂದಿನ ಅಧ್ಯಾಯಗಳಲ್ಲಿ ೧೭ ರಿಂದ ೨೩ರವರೆಗೆ ಲೇಖಕರೇ ಬರೆದಿರುವ ಸಾವಿತ್ರಿಬಾಯಿ ಫುಲೆಯವರ ಬಗ್ಗೆ ಕವಿತೆಗಳಿವೆ. ಇವನ್ನು ಶಾಲಾ ಮಕ್ಕಳಿಗೆ ರಾಗವಾಗಿ ಹಾಡಲು ಅನುವಾಗುವಂತೆ ಬರೆದಿದ್ದಾರೆ.  ಲೇಖಕರು ಶಿಕ್ಷಕರಾಗಿರುವುದರಿಂದ ಮಕ್ಕಳು ಬಯಸುವ, ಮಕ್ಕಳಿಗೆ ಬೇಕಾಗುವ ಸಾಹಿತ್ಯ ಹೇಗಿರಬೇಕು ಎಂಬುದನ್ನು ಅರಿತಿರುವ ಶಂಕರದೇವರು ಅವರು ಈಗಾಗಲೇ ಮಕ್ಕಳಿಗಾಗಿ ತ್ರೈಮಾಸಿಕ  `ಚೆಲುವಚಿಣ್ಣರು’ ಪತ್ರಿಕೆಯನ್ನು ಸಹ ಮಕ್ಕಳಲೋಕಕ್ಕೆ ಕೊಟ್ಟು ಮಕ್ಕಳ ಸಾಹಿತಿಗಳನ್ನು ಪ್ರೋತ್ಸಹಿಸುತ್ತಿದ್ದಾರೆ. ನಿಜಕ್ಕೂ ಇದೊಂದು ಹೆಮ್ಮೆಯ ವಿಷಯವಾಗಿದೆ. 

ನಾನು ಮೂರು ವರ್ಷಗಳಿಂದ ಲೇಖಕರನ್ನು  ಬಲ್ಲೆ. ಇವರ ಬಿಡುವಿಲ್ಲದ ಸಾಹಿತ್ಯ ಚಟುವಟಿಕೆಗಳನ್ನು ಕಂಡು ಬೆರಗಾಗಿದ್ದೇನೆ.  ಕರ್ನಾಟಕರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಯಚೂರು ಜಿಲ್ಲಾಧ್ಯಕ್ಷರಾಗಿರುವ ಇವರಿಗೆ ಅನೇಕ ಉನ್ನತ ಪ್ರಶಸ್ತಿಗಳೂ ಸಂಧಿವೆ.  ತಮ್ಮದೇ ಕೃತಿಗಳು ೫, ಸಂಪಾದಕೀಯ ಕೃತಿಗಳು೮, ಒಟ್ಟು ೧೩ ಕೃತಿಗಳನ್ನು ಕನ್ನಡತಾಯ ಮಡಿಲಿಗೆ ಕೊಟ್ಟಿರುತ್ತಾರೆ.  ಇವರ ಈ `ಸಾವಿತ್ರಿಬಾಯಿಫುಲೆ- ಜೀವನಚರಿತ್ರೆ’ ಕೃತಿಯೂ ಸಹಮಕ್ಕಳ ಮತ್ತು ಓದುಗರ ಮನಸ್ಸನ್ನು ಗೆಲ್ಲುವುದರಲ್ಲಿ ಸಂದೇಹವಿಲ್ಲ.

ಲೇಖಕರಿಗೆ ನನ್ನ ಶುಭಾಶಯ ಮತ್ತು ಅಭಿನಂದನೆಗಳು.


ವಿಶಾಲಾ ಆರಾಧ್ಯ

One thought on “ಮಕ್ಕಳಬಾಳಿಗೆಬೆಳಕು- ಸಾವಿತ್ರಿಬಾಯಿಫುಲೆ

Leave a Reply

Back To Top