ವ್ಯಾಲಂಟೈನ್ ವಿಶೇಷ

ಪ್ರೇಮಿಗಳ ದಿನಕ್ಕೊಂದು ತಹತಹ

ದಾದಾಪೀರ್ ತರೀಕೆರೆ

ನಾನು ಕಳೆದು
ಹೋಗಲು ಬಯಸಿದ್ದೆನೆ
ನಿನ್ನ ಮುಂಗುರುಳ
ಸುರುಳಿಯ ಬೀಸುಗಾಳಿಯ
ನವೆಯಲ್ಲಿ

ಹುಣ್ಣಿಮೆ ರೂಪ ತಳೆದ
ಹಾಲ ಬೆಳದಿಂಗಳ
ನಿನ್ನ ಚೆಲುವಲ್ಲಿ
ಮುಳುಗಲು ಬಯಸಿದ್ದೆನೆ

ನೀನು ನದಿಯಂತೆ
ಹರಿಯುವಾಗ ನಿನ್ನ
ಅಪ್ಪಿ ಕಡಲಿಗೆ
ಜಾರ ಬೇಕೆಂದಿರುವೆ
ಮರು ಮಾತನಾಡದೆ
ಬಂಧಿಯಾಗಿ ತೋಳ ತೆಕ್ಕೆಯಲ್ಲಿ

ಈ ಪ್ರೀತಿ ಎಂದೂ ಮುಗಿಯದ
ದಾಹ ಅನಿಸುತ್ತಿದೆ
ನಿನ್ನಲ್ಲೇ ಕೊನೆಯಾಗಬೇಕು
ಎಂಬ ತಹತಹ
ಉಸಿರಾಗುವೆ ನಿನ್ನೆದೆಯಲ್ಲಿ
ಬಸಿರಾಗುವೆ.


2 thoughts on “

Leave a Reply

Back To Top