ವ್ಯಾಲಂಟೈನ್ ವಿಶೇಷ

ನನ್ನ ಪ್ರೇಮಿ

ಡಾ. ನಿರ್ಮಲಾ ಬಟ್ಟಲ

ನೀನೆಂದೂ ನನ್ನೆದುರು
ಪ್ರೇಮ ನಿವೇದನೆಯನ್ನು
ಮಾಡಿಯೇ ಇಲ್ಲ ….!
ಆದರೂ ನಿನ್ನೆದೆಯ
ತುಂಬಾ ನಾನೇ ಇರುವೆ ನಲ್ಲ ….!
ನೀನೆಂದೂ ಉಡುಗೊರೆಯ
ತಂದು ಸಂತಸ ಪಡಿಸಲೆಯಿಲ್ಲ …!
ಆದರೂ ನನ್ನದೆಲ್ಲವೂ
ನಿನ್ನದೇ ಎಂದೆಯಲ್ಲ ….!
ನೀನೆಂದೂ ಕಣ್ಣಲ್ಲಿ ಕಣ್ಣಿಟ್ಟು
ಮಾತಾಡಿಮರಳು
ಮಾಡಿಯೇಇಲ್ಲ….!
ಆದರೂ ಕಣ್ಣಂಚಿನ ನೂರು ಭಾವನೆಗಳ ಅರಿಯುವೆಯಲ್ಲ ….! ಪ್ರತಿದಿನವೂ ಪ್ರೇಮೋತ್ಸವ ಆಚರಿಸುವ ನೀನು ಪ್ರೇಮಿಗಳ ದಿನಕ್ಕಾಗಿ ಕಾಯುವುದೇ ಇಲ್ಲ…..!
ನೀನೆಂದೂ ನನ್ನ ಆಸೆ ಕನಸುಗಳು ಏನೆಂದು ಕೇಳಿಯೇ ಇಲ್ಲ….!
ಆದರೂ ಅವುಗಳನ್ನೆಲ್ಲ ಈಡೇರಿಸುವೆಯಲ್ಲ….!
ನೀನೆಂದದೂ ನಮ್ಮಿಬ್ಬರ ಪ್ರೀತಿಗೆ ವ್ಯಾಖ್ಯಾನ ನೀಡಿಯೇ ಇಲ್ಲ ….!
ಆದರೂ ಪ್ರೀತಿ ಅಂತರಂಗದಲ್ಲಿ ಹರಿಯುವ ಗುಪ್ತಗಾಮಿನಿ ಎನ್ನುವ ನೀನು ತತ್ತ್ವಜ್ಞಾನಿ ….!
ನಮ್ಮಿಬ್ಬರ ನಡುವೆ ಎಷ್ಟೊಂದು ವೈರುಧ್ಯಗಳು ನೋಡು
ಪ್ರೀತಿಯನ್ನು ವರ್ತನೆಯಲ್ಲಿ ತೋರಿಸು ಎಂದು ಹಪಹಪಿಸುವ ನಾನು ಮನೋವಿಜ್ಞಾನಿ ….!!


10 thoughts on “

  1. ಒಳ್ಳೆಯ ಸಂದೇಶ ಕೊಟ್ಟಿದ್ದೀರಿ.ಸೊಗಸಾದ ಪ್ರೇಮ ನಿವೇದನೆ.ಭಾರೀಯ ಪರಂಪರೆಯ ನಾವೆಲ್ಲ ನಿತ್ಯ ಪ್ರೇಮಿಗಳೇ. – ಭಗವಾನ್.

  2. ಮೂರ್ತ ಅಮೂರ್ತ ಪ್ರೀತಿಯ ಸೂಕ್ಷ್ಮತೆಯ ವ್ಯಾಖ್ಯಾನ ನೀಡುವ ಸಂವೇದನಾತ್ಮಕ ಕವಿತೆ ನಿರ್ಮಲಾ….

  3. ಸಂಗಾತಿಯ ಪ್ರೇಮ ನೀವೇದನೆಯನ್ನು ಅದ್ಬುತವಾಗಿ ಹೇಳೀದ್ದೀರಿ ಮೇಡಂ

Leave a Reply

Back To Top