
ವ್ಯಾಲಂಟೈನ್ ವಿಶೇಷ
ಧ್ರುವತಾರೆ
ಚಂದ್ರು ಪಿ ಹಾಸನ್

ಚೆಲುವೆ ಚೆಲುವೆ ನನ್ನಡೆಗೆ
ನಲಿನಲಿದು ಒಮ್ಮೆ ಬಾರೆ
ನಿನ್ನಡೆಗೆ ಕಣ್ತುಂಬಿ ಬರಸೆಳೆದು
ಒಲವನ್ನು ತೋರುಬಾರೆ
ನೀಲಾಗಸದಿ ಒಳೆವ
ಧ್ರುವ ತಾರೆಯು ನೀನು
ಕಂಡೊಡನೆ ಮನಸೆಳೆದು
ಆಸೆ ತುಂಬಿದವಳು ನೀನು
ನಯನಮನೋಹರ ತರುವ
ಬೆಳಕಿನ ಹೊಳಪಿಗೆ ನನ್ನೆದೆ
ಪರಿಶುದ್ಧವಾಗಿ ನಿನ್ನೊಲವ
ತುಂಬಿ ತಂದಾನ ಹಾಡಿದೆ
ರಾತ್ರಿಯಲ್ಲಿ ಪ್ರೀತಿ ಚಿಲುಮೆ ತಂದು
ನನ್ನಾಕರ್ಷಿಸಿ ಮುಟ್ಟಿದೆ ಎನ್ನುವಷ್ಟರಲ್ಲಿ
ಹಗಲನ್ನು ತಂದು ಎನ್ನ ನಿಯಂತ್ರಿಸಿ
ಮಾಯವಾಗಿ ವಿರಹವೇದನೆ ನೀಡಿದೆ
ಆಕಾಶ ಸುಂದರಿ ಒಮ್ಮೆ ಬಾ ಭುವಿಗೆ
ದೂರದೂರದಲ್ಲಿ ನಿಂತೇಕೆ ಸೆಳೆವೆ
ಬಂದು ತೋರೊಮ್ಮೆ ಪ್ರೀತಿಯ ಅರಿವೇ
ಪ್ರಕೃತಿಯನ್ನೇ ಕೊಡುಗೆಯಾಗಿ ಕೊಡುವೆ

Super sir