
ವ್ಯಾಲಂಟೈನ್ ವಿಶೇಷ
ಮೊದಲ ಪ್ರೇಮ

ಮಾಡುತ್ತಿದ್ದೆ ದೇವನ ಕುರಿತು
ತಪವ ನಾನು
ಪ್ರತ್ಯಕ್ಷ ನಾದನು ಸಕಲ
ಸಿರಿಯೊಂದಿಗೆ ಶಿವನು
ಹೇಳಿದನು “ಕೇಳು ನಿನಗಾವ
ವರವನಾದರೂ ಕೊಡುವೆನು”
ಕೇಳಿದೆ ನಾ “ಕೊಡು ನನ್ನ
ಪ್ರೀತಿಗೆ ಒಡೆಯನನ್ನು”
ಕಂಡೆ ನಾನಾಗ ನಿನ್ನ
ಮೊದಲ ಬಾರಿ
ನೋಡಬೇಕೆನಿಸಿತು ನಿನ್ನ
ಚೆಲುವ ಸಾರಿ ಸಾರಿ
ನಿನ್ನ ನೆನೆದಾಗ ಹೃದಯದ
ಬಡಿತ ಏರಿ
ಹಾರಿತ್ತು ನನ್ನ ಮನಸ್ಸು
ನಿನ್ನೆಡೆಗೆ ಎಲ್ಲೆ ಮೀರಿ
ಕನಸಿನಲ್ಲಿ ಬಂದು
ಕಾಡಿದೆ ನನ್ನ
ಹೇಳಿದೆ ನೀ
“ನಾ ಪ್ರೀತಿಸುವೆ ನಿನ್ನ”
ಅದ ಕೇಳಿ ಹೂವಾಯ್ತು
ಮೈ ಮನ
ರಚಿಸಿದೆ ಕಣ್ಣಲ್ಲೇ ನಾ
ಒಂದು ಪ್ರೇಮ ಕವನ
ಹೊತ್ತು ತಂದಿತು ಪ್ರೇಮ
ಸಂದೇಶವ ನಿನ್ನ ಪತ್ರ
ಕಂಡಾಗಲೇ ಮೂಡಿತ್ತು
ಕಣ್ಣಲ್ಲಿ ಆತುರ
ಅದನೋದಿ ಹೃದಯದ
ಬಡಿತದೊಂದಿಗೆ ಏರಿತ್ತು ಕಾತುರ
ತಿಳಿದಾಗ ನೀ ನನ್ನವನೆಂದು
ಗರಿಗೆದರಿ ನರ್ತಿಸಿತ್ತು
ಮನ ಮಯೂರ
ನನ ಮನದ ಗುಡಿಯ
ದೇವನೇ ನೀನು
ಪೂಜಿಸಲು ತಂದೆ
ಪ್ರೇಮದಾ ಹೂ ನಾನು
ಒಲವಿನಾಭರಣ ಶೋಭಿತ
ನಿನ್ನನ್ನು
ನೋಡಲು ಸಾಲವು ಈ
ಎರಡು ಕಣ್ಣು
ಆಗಲಿ ನಮ್ಮ ಪ್ರೀತಿ
ಕಲ್ಪವೃಕ್ಷ
ತುಂಬಿರಲಿ ಬಾಳಲ್ಲಿ
ಮುಗಿಯದ ಹರ್ಷ
ಭೋರ್ಗರೆದು ಸುರಿಯಲಿ
ಒಲವಿನ ವರ್ಷ
ಚಿರವಾಗಿರಲಿ ನಮ
ಪ್ರೇಮ ನೂರು ವರುಷ
ನಾಗರತ್ನ ಎಂ ಜಿ

Great romantic short poem