ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಗಜಲ್

ಎಂದೆಂದೂ ಮರೆಯಲಾಗದ ಸುಂದರ ಕನಸಂಥವಳು ನೀನು
ಆ ವನ ದೇವತೆಯೇ ನಾಚುವಂತಹ ಶಾಂತಿ ಕಾರುಣ್ಯದವಳು ನೀನು

ನನಗಾಗೇ ಸೃಷ್ಟಿಸಿದಂತಹ ಅಪೂರ್ವ ಸುಗಂಧ ಸೌರಭವು ನೀ
ಕೆಲವು ಮಾತು ಕಟುವೆನಿಸಿದರು ನಿಜದಿ ಹೃದಯವಂತಳು ನೀನು

ಮೌನದಿ ಗ್ರಹಿಸಿ ಒಲವು ಚೆಲುವಿನ ಸುಧೆಯ ಹರಿಸುವವಳು
ಹಾಲು ಜೇನಿನಂತೆ ಬೆರೆವ ಮಧುರ ಸಿಹಿ ಮನದವಳು ನೀನು

ಏನೆಲ್ಲಾ ಸಿಂಗರಿಸಿ ಚೆಂದಗೊಳಿಸಿ ಒಳಗೊಳಗೆ ಹಿಗ್ಗುವವಳು ನೀ
ಅಪಾರ ಪ್ರೀತಿ ಪ್ರೇಮ ಮನದಿ ಕಾಪಿಟ್ಟು ಮೇಲೆ ಮುನಿಯುವವಳು ನೀನು

ಕ್ಷಣ ಕಾಣದೇ ಮೌನವಾಗಿ ದೂರ ಹೋದರೆ ಚಡಪಡಿಸುವವಳು ನೀ
ಸದಾ ರಮಿಸುತ್ತ ಸನಿಹವಿರಲೆಂದು ಮನದಿ ಹಂಬಲಿಸುವವಳು ನೀನು

ನೀನಿಲ್ಲದೇ ಬದುಕಿಲ್ಲ ಕೈಬಿಟ್ಟು ಅಗಲದಿರು ನನ್ನ ಆತ್ಮಸಖಿ
ಈ ‘ಹೊನ್ನಮಹಲ್’ ನ ಹಣತೆಯ ಜೀವದ ಉಸಿರಾದವಳು ನೀನು 🌹


ಸಿದ್ಧರಾಮ ಹೊನ್ಕಲ್

About The Author

1 thought on “”

Leave a Reply

You cannot copy content of this page

Scroll to Top