ಕಾವ್ಯ ಸಂಗಾತಿ
ಒಲವಿನಲೆ
ಒಲವು
ಬಾರೆ ನೀ ಸನಿಹಕ್ಕೆ
ಎಂದು ನೀ ಕರೆಯುತ್ತಿರುವಾಗ
ನಾ ಬಾರೆ ಎನ್ನಲಾರೆ
ನಿನ್ನ ತುಟಿಗಳು ಮೌನದಿ
ಮಾತನಾಡುತ್ತಿರುವಾಗ
ನಾ ಮೌನ ತಾಳಲಾರೆ
ನಿನ್ನ ಹೃದಯವು ನನ್ನ
ಹೆಸರನೇ ಜಪಿಸುತ್ತಿರುವಾಗ
ನಾ ದೂರ ನಿಲ್ಲಲಾರೆ
ನಿನ್ನ ಕಂಗಳು ನೆಟ್ಟ ನೋಟದಿ
ನನ್ನೇ ದಿಟ್ಟಿಸುತ್ತಿರುವಾಗ
ನಿನ್ನ ನೋಡದೆ ಇರಲಾರೆ
ನಿನ್ನ ಬೆರಳುಗಳು ನನ್ನ
ಕಿರುಬೆರಳ ಹಿಡಿದಿರುವಾಗ
ಒಲವಿನಲೆಯಲ್ಲಿ
ಕೊಚ್ಚಿಹೋಗದೇ ಇರಲಾರೆ
ನೀನಿಲ್ಲದೆ ಇರುವಾಗಲೂ ನಿನ್ನ
ನೆನಪುಗಳು ಕಾಡುತ್ತಿರುವಾಗ
ನಿನ್ನ ನೆನಪುಗಳ ಬಿಟ್ಟು ಬೇರೇನನ್ನು ಬೇಡಲಾರೆ