ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಾವಿನ ಕಸ್ತ್ರಿ

ಎಸ್. ವಿ. ಹೆಗಡೆ

ಮನದಿ ಮಾಸದ ಮಾವೆ
ಶಿಶಿರ ಋುತು ಮಾಘ ಮಾಸದ
ಚಿಗುರಿ ನಿಂತ ಸಹಸ್ರ ಕಸ್ತೃಿಗಳ
ಶಿರದ ರಾಶಿಯ ಸುರಿದ ಮಾಯೆ
ನೋಡಿ ಮತ್ತೆ ಮನ ಕಲುಕಿದೆ ।

ಗಾಳಿಯಲಿ ಓಲಾಡಿ ತಮ್ಮೊಳಗೆ ಸೆಣಸಾಡಿ
ಕಣ್ತೆರೆದ ಮಿಡಿಯಾಗಿ ಟೊಂಗೆಯಲಿ
ಜೋತಾಡಿ ಸುಮ್ಮನೇ ಹಾರಾಡಿ
ಜೀವ ತುಂಬದೆ ಬಿದ್ದ ಮಿಡಿಗಳ ನೋಡಿ।

ಅಮ್ಮನುಸುರಿಗೆ ಉಸಿರಾಗಿ ಕಂಬನಿಗೆ
ಹನಿಯಾಗಿ ಸೆರಗಿನೊಳು ಸೆರೆಯಾಗಿ
ಸಂಕಟದಿ ಜೊತೆಯಾಗಿ ನಂಬಿ ನೆರವಾಗಿ
ಬೆಳೆದುಳಿದ ಪುಟ್ಟ ಮಿಡಿಗಳ ನೋಡಿ ।

ಮೋಹದ ಮೋಡಿ ಜೀವನಾಡಿ
ಮನ ಬಂದಾಗ ತುಂಬುವ ಒಡಲು
ನಿನ್ನದಾದರೆ ಒಡಲು ತುಂಬಲಾಗದೆ
ಮಿಡಿವ ಮನ ಮನೆ ಮನೆಯಲಿ।


About The Author

Leave a Reply

You cannot copy content of this page

Scroll to Top