ಕಾವ್ಯ ಸಂಗಾತಿ
ಗಜಲ್
ವಾಣಿ ಭಂಡಾರಿ.
ಜಗವೆ ಅಳುತ್ತಾ ಕೂತಿರುವಾಗ ನಗುವಿಗೆಲ್ಲಿದೆ ಜಾಗ ಹೇಳು
ಒಲವೆ ಸತ್ತು ಮಲಗಿರುವಾಗ ಮಾತಿಗೆಲ್ಲಿದೆ ಜಾಗ ಹೇಳು.
ಹೃದಯ ಭಾರ ಹೊತ್ತು ಹಿಮಾಲಯ ಏರಲಾರದು
ಮುಗಿಲೇ ಸೊರಗಿ ದಿಗಿಲಾಗಿರುವಾಗ ಹಸಿರಿಗೆಲ್ಲಿದೆ ಜಾಗ ಹೇಳು.
ನದಿಯೇ ದಾರಿ ತಪ್ಪಿದರೆ ಕಡಲಿಗೆ ಅಸ್ತಿತ್ವ ಎಲ್ಲಿಹುದು
ಮಾಯೆ ಮುಸುಕಿ ಕಪ್ಪೆರಿದಾಗ ಬೆಳಕಿಗೆಲ್ಲಿದೆ ಜಾಗ ಹೇಳು.
ಕತ್ತಲೆ ಬೆಳಕಿನಾಟದಲ್ಲಿ ಸುತ್ತೇಳು ಲೋಕ ಕಾಣದು
ಬದುಕಿನ ಅರ್ಥ ತಿಳಿಯದಿರುವಾಗ ಮೌಲ್ಯಕ್ಕೆಲ್ಲಿದೆ ಜಾಗ ಹೇಳು.
ಮನಕ್ಕೆ ತಂಗಾಳಿ ಬೀಸದೆ ವಾಣಿಗೆ ಜನ್ನತ್ ನ ದಾರಿ ಕಾಣದು
ಭಾವವೇ ಬರಿದು ಆಗಿರುವಾಗ ನಲವಿಗೆಲ್ಲಿದೆ ಜಾಗ ಹೇಳು
super
Wha kya baat hey ji