ನೀ ನನಗಿಷ್ಟ

ಕಾವ್ಯ ಸಂಗಾತಿ

ನೀ ನನಗಿಷ್ಟ

ಶಾಲಿನಿ ಕೆಮ್ಮಣ್ಣು

ನಿನ್ನ ಮಗುವಿನ ನಗು
ಸ್ನೇಹಕ್ಕೊಂದು ಮೆರುಗು
ಆಲಿಸಿದೆ ನೀ ಪ್ರೀತಿಯ ಕೂಗು
ಅರಳಿತು ನನ್ನಾಸೆಯ ಮಲ್ಲೆಮೊಗ್ಗು

ನಿನ್ನ ಮಿತವಾದ ಸವಿನುಡಿ
ಪ್ರೇಮ ಭಾಷೆಗೆ ಹಿಡಿದ ಕನ್ನಡಿ
ತೊಡಿಸಿರುವೆ ನೀ ಪ್ರೇಮದ ಬೇಡಿ
ಮಾಡಿ ಅತಿ ಪ್ರೀತಿಯ ಮೋಡಿ

ನಿನ್ನ ಕಣ್ಣಂಚಿನ ಗಮನ
ಸೆಳೆಯುವುದು ನನ್ನ ಮನ
ನಿನ್ನ ನೆನೆಯುತ ಕ್ಷಣ ಕ್ಷಣ
ನನ್ನನೆ ಮರೆಯುವೆ ನಾ

ನೀ ಬರುವೆ ಎಂದಾಗ
ಎದೆಯಲ್ಲಿ ಭಾವರಾಗ
ನೀ ಬಳಿಗೆ ಬಂದಾಗ
ಚಿಮ್ಮಿತು ಹೊಸ ಅನುರಾಗ

ಮುಂಜಾನೆಯ ನಿನ್ನ ಸಂದೇಶ
ದಿನಾರಂಭಕೆ ಹರುಷ
ನಿನ್ನ ಮೃದು ಕೋಮಲ ಸ್ಪರ್ಶ
ಆಹಾ ಹೃದಯದೆ ಸಂಘರ್ಷ

ನಡುವ ಬಳಸಿ ನೀ ಬರಸೆಳೆಯಲು
ಏನೋ ಹಿತವಾದ ರೋಮಾಂಚನ
ನಯನಗಳು ಬೆರೆಯಲು
ಮನಸೆಲ್ಲೋ ತಲ್ಲೀನ

ಮುಂಗುರುಳ ನೀ ತೀಡುತಿರೆ
ಹಿತವಾದ ಸಿಹಿಯ ಸೋಪಾನ
ಗಲ್ಲ ಹಿಡಿದು ನೀ ದಿಟ್ಟಿಸುತ್ತಿರೆ
ತನ್ಮಯತೆಯ ಭಾವಸಿಂಚನ

ಎರಡು ಮನಗಳು ಒಂದಾದಾಗ
ಮನದಲ್ಲೇನೋ ಮಧುರ ತಲ್ಲಣ
ತೋಳಲಿ ನೀ ನನ್ನ ಬಳಸಿದಾಗ
ನೆಮ್ಮದಿಯ ಬಿಗಿ ಆಲಿಂಗನ

ಹಣೆಗಿಟ್ಟ ಸಿಹಿಮುತ್ತು
ನನ್ನೆದೆಯ ತುಂಬಿಸಿತು
ನಿನ್ನೊಂದು ಪಿಸುಮಾತು
ಮಧುರ ಕ್ಷಣಕ್ಕೆ ನಾಂದಿಯಾಯ್ತು

ಕಾದಿರುವೆ ನಿನಗಾಗಿ
ಹಗಲಿರುಳು ಒಂದು ಮಾಡಿ
ಬರುವೆಯ ನನಗಾಗಿ
ಹೃದಯ ಸಾಮ್ರಾಜ್ಯದ ಅರಸಾಗಿ

ನಿನ್ನ ಮಗುವಿನ ನಗು
ಸ್ನೇಹಕ್ಕೊಂದು ಮೆರುಗು
ಆಲಿಸಿದೆ ನೀ ಪ್ರೀತಿಯ ಕೂಗು
ಅರಳಿತು ನನ್ನಾಸೆಯ ಮಲ್ಲೆಮೊಗ್ಗು

ನಿನ್ನ ಮಿತವಾದ ಸವಿನುಡಿ
ಪ್ರೇಮ ಭಾಷೆಗೆ ಹಿಡಿದ ಕನ್ನಡಿ
ತೊಡಿಸಿರುವೆ ನೀ ಪ್ರೇಮದ ಬೇಡಿ
ಮಾಡಿ ಅತಿ ಪ್ರೀತಿಯ ಮೋಡಿ

ನಿನ್ನ ಕಣ್ಣಂಚಿನ ಗಮನ
ಸೆಳೆಯುವುದು ನನ್ನ ಮನ
ನಿನ್ನ ನೆನೆಯುತ ಕ್ಷಣ ಕ್ಷಣ
ನನ್ನನೆ ಮರೆಯುವೆ ನಾ

ನೀ ಬರುವೆ ಎಂದಾಗ
ಎದೆಯಲ್ಲಿ ಭಾವರಾಗ
ನೀ ಬಳಿಗೆ ಬಂದಾಗ
ಚಿಮ್ಮಿತು ಹೊಸ ಅನುರಾಗ

ಮುಂಜಾನೆಯ ನಿನ್ನ ಸಂದೇಶ
ದಿನಾರಂಭಕೆ ಹರುಷ
ನಿನ್ನ ಮೃದು ಕೋಮಲ ಸ್ಪರ್ಶ
ಆಹಾ ಹೃದಯದೆ ಸಂಘರ್ಷ

ನಡುವ ಬಳಸಿ ನೀ ಬರಸೆಳೆಯಲು
ಏನೋ ಹಿತವಾದ ರೋಮಾಂಚನ
ನಯನಗಳು ಬೆರೆಯಲು
ಮನಸೆಲ್ಲೋ ತಲ್ಲೀನ

ಮುಂಗುರುಳ ನೀ ತೀಡುತಿರೆ
ಹಿತವಾದ ಸಿಹಿಯ ಸೋಪಾನ
ಗಲ್ಲ ಹಿಡಿದು ನೀ ದಿಟ್ಟಿಸುತ್ತಿರೆ
ತನ್ಮಯತೆಯ ಭಾವಸಿಂಚನ

ಎರಡು ಮನಗಳು ಒಂದಾದಾಗ
ಮನದಲ್ಲೇನೋ ಮಧುರ ತಲ್ಲಣ
ತೋಳಲಿ ನೀ ನನ್ನ ಬಳಸಿದಾಗ
ನೆಮ್ಮದಿಯ ಬಿಗಿ ಆಲಿಂಗನ

ಹಣೆಗಿಟ್ಟ ಸಿಹಿಮುತ್ತು
ನನ್ನೆದೆಯ ತುಂಬಿಸಿತು
ನಿನ್ನೊಂದು ಪಿಸುಮಾತು
ಮಧುರ ಕ್ಷಣಕ್ಕೆ ನಾಂದಿಯಾಯ್ತು

ಕಾದಿರುವೆ ನಿನಗಾಗಿ
ಹಗಲಿರುಳು ಒಂದು ಮಾಡಿ
ಬರುವೆಯ ನನಗಾಗಿ
ಹೃದಯ ಸಾಮ್ರಾಜ್ಯದ ಅರಸಾಗಿ


One thought on “ನೀ ನನಗಿಷ್ಟ

Leave a Reply

Back To Top