ಕಾವ್ಯ ಸಂಗಾತಿ
ಬರಹ-ವಿರಹ
ದೇವಿ ಬಳಗಾನೂರ

ಪ್ರೇಮದ ಕುರಿತು
ಬರೆದರೆ ಪ್ರೇಮಿಯೆಂದರು
ವಿರಹವನ್ನು ಬರೆದರೆ
ಭಗ್ನಪ್ರೇಮಿಯೆಂದರು
ನೋವನ್ನು ಬರೆದರೆ
ಇಷ್ಟೆಲ್ಲಾ ನೋವಿದೆಯಾ
ಪಾಪದವಳೆಂದರು…
ನಾನೋ ಭಾವನಾಜೀವಿ
ಪ್ರೇಮ ಎನ್ನೆದೆ ಬಡಿತ
ವಿರಹ ನಿಜದಿ ಆಪ್ತ ಸಂಗಾತಿ
ನೋವಿಲ್ಲ ಎಂದೇನಿಲ್ಲ..
ನಗುವೆಂಬುದು ಮೊಗದಿ
ಅರಳಿ ನಿಂತ ಕೆಂಗುಲಾಬಿ
ನೋವಿಲ್ಲಿ ಕವಿತೆಯಾಗಿ ಉಳಿದ
ಮೊನಚಾದ ಮುಳ್ಳು…