ಗಜಲ್

ಗಜಲ್

ನೀನಿಲ್ಲದ ಸಮಯದಿ ಪ್ರೀತಿಯೊಂದು ಸಿಕ್ಕಿಬಿಟ್ಟಿತು ಮೌನ
ನೀರಿಲ್ಲದ ವೇಳೆಯಲ್ಲಿ ದಾಹ ನೀಗಿಬಿಟ್ಟಿತು ಮೌನ

ಹೂವು ಅರಳಲು ಸೂರ್ಯನ ಅಗತ್ಯವೇನಿಲ್ಲ
ಇರುಳಲ್ಲಿ ಕಮಲವೊಂದು ಅರಳಿಬಿಟ್ಟಿತು ಮೌನ

ಪವಿತ್ರ ಸ್ನಾನಕ್ಕೆ ಗಂಗೆಯಲಿ ಮುಳಗಬೇಕೆಂದೇನಿಲ್ಲ
ಹೃದಯ ಅವಳ ಕಣ್ಣಂಚಿನ ಕೊಳದಲಿ ಮುಳುಗಿಬಿಟ್ಟಿತು ಮೌನ

ಧ್ಯಾನವೆಂದರೆ ಆದ್ಯಾತ್ಮಿದ ಬಗೆಗೆ ಮಾತನಾಡಬೇಕೆಂದೇನಿಲ್ಲ
ಕೆಲವೇ ಕೆಲವರಂತೆ ಅವಳ ಹೃದಯ ನನ್ನಾತ್ಮವಾಗಿಟ್ಟಿತು ಮೌನ

ಅರಿವೆಂದರೆ ವಿಶಾಲ ಜ್ಞಾನದ ಬಗೆಗೆ ಮಾತನಾಡಬೇಕೆಂದೇನಿಲ್ಲ
ಅವಳ ಇರುವಿಕೆಯೇ ದೇವನರಮನೆಯ ಬೆಳಕಾಗಿಬಿಟ್ಟಿತು ಮೌನ


ದೇವರಾಜ್ ಹುಣಸಕಟ್ಟಿ.
.

Leave a Reply

Back To Top