ಕಾವ್ಯ ಸಂಗಾತಿ
ಕೂಡಿಬಾಳು
ಗಣಪತಿ ಹೆಗಡೆ
ಜೋಡಿ ಗೆಣೆವಕ್ಕಿಗಳು
ಕೂಡಿಯೇ ಬಾಳು
ಆಟ ಊಟ ನೋಟ ಮಾಟ
ಹಾರಾಟ
ಎಲ್ಲವೂ
ನೋವು ನಲಿವು
ಮತ್ತೆಲ್ಲಾ
ಕೂಡಿದಾಗಲೇ ಅನುಭವ
ಗಾಳಿ ತುಂಬಿದ
ಬಲೂನಿನ ಹಾಗೆ
ದೂರದ ಕಾಡು
ಕರಿಮೈಯ
ಧಡಿಯ ಕಾಡ
ಬೇಡ
ಕಾಡಲು
ಜೋಡಿಯ ಮೇಲೆ ಕಣ್ಣು
ಬಿಟ್ಟನು ಬಾಣವನ್ನು
ಚಿಮ್ಮನೆ ಹಾರಿತು ಹಕ್ಕಿ
ನಭೋಮಂಡಲಕ್ಕೆ
ಇನ್ನೊಂದು ಹಕ್ಕಿ
ಬಿದ್ದಿತ್ತು ನೆಲಕ್ಕೆ
ಗಾಳಿ ಹಾರಿದ
ಬಲೂನಿನಂತೆ
ಇನ್ನೆಲ್ಲಿಯ ನೋವು
ನಲಿವು
ಮತ್ತೆಲ್ಲಿಯದು.
ಜೋಡಿ ಹಕ್ಕಿಗಳ ದಾರುಣ ಕವನವಾಗಿ ಮೇಲ್ನೋಟಕ್ಕೆ ಕಂಡರೂ ದೇಹ ಜೀವದ ಪ್ರತೀಕವಾಗಿ ಹಕ್ಕಿಗಳನ್ನೂ ,ಬೇಡನ ಸ್ವರೂಪದಲ್ಲಿ ಕಾಲಪುರುಷನನ್ನೂ ಕಲ್ಪಿಸಿ ಕೊಂಡಾಗ ಇಡೀ ಕವನ ಹೊಸ ಅರ್ಥ ಪಡೆಯುತ್ತದೆ.ಉತ್ತಮ ಕವನ.ಅಭಿನಂದನೆಗಳು