ನನ್ನೊಡೆಯನ ಕಾವಲುಗಾರ ನಾನು

ಕಾವ್ಯ ಸಂಗಾತಿ

ನನ್ನೊಡೆಯನ ಕಾವಲುಗಾರ ನಾನು

ದೇಶಕ್ಕೆ ಅನ್ನನೀಯುವ ನನ್ನೊಡೆಯ
ನಸುಕಿನಲ್ಲೆದ್ದು ಉಳುಮೆಗೆ ಹೊರಡುವ.
ಸವೆಸುವ ದಾರಿಯೊಳು ನಾನವಗೆ ಕಾವಲು.
ನನ್ನಮ್ಮ ನನ್ನ ತೊರೆದಿರಲು.
ನಾ ಬೀದಿ-ಬದಿ ಬಿದ್ದಿರಲು.
ಕರುಣಿಸಿದ. ತಾ ಉಣ್ಣುವ
ಅನ್ನದೋಳ್ ತುತ್ತನಿಟ್ಟು ಸಲುಹಿದ.

“ಹೊಲ ಹಸನ”ಮಾಡಿ ಎಂಟಡಿ
ಆಳದೋಳ್ ಹೊಕ್ಕಿರುವ “ಕರಕಿ”
ಬೇರನು ‘ಹೆಕ್ಕಿ’ತೆಗೆದು ದಣಿದಿರುವ..
“ಭೂ-ಮಾತೆ”ಯ ಮಮತೆಯ
ಮಣ್ಣಿನ ಹಾಸಿಗೆಗೆ ಒರಗಿರುವ..
ದೇಹದ ಧಣಿವ ತ್ಯಜಿಸುವ..
ನಾನೂ ಧಣಿದಿರುವೆ. ಒಡೆಯನ
‘ಶಿರಿ’ ಬೆಳೆಗೆ ಕಾಡು ಪ್ರಾಣಿಗಳ
ದಾಂಗುಡಿಯ ತಡೆದಿರುವೆ..

ತನ್ನ ಕಷ್ಟ. ಕಣ್ಣೀರಿನ ವ್ಯತೆಗಳ
ಒಡಳಾಂತರದಿ ಧಹಿಸಿ ಗೇಯುತಿಹ..
ಸಕಲ-ಜೀವಿಗಳ, ದೇಶವಾಸಿಗಳ
ಹಸಿವ ನೀಗಿಸಲು ಶ್ರಮಿಸುತಿಹ..
ನನ್ನೊಡೆಯ ನನ್ನ ಹೆಮ್ಮೆ..
ಹುಟ್ಟಿಬರಲಿ ಮತ್ತೊಮ್ಮೆ.
ಮಗದೊಮ್ಮೆ…

ಒಡೆಯನ ಬೆನ್ನಿಗೆ ಕಾವಲಿರುವೆ..
ಭೂ-ಮಾತೆ ದುಗುಡವ ಕೇಳಲು
ಅವಳೊಡಲಿಗೆ ಕಿವಿಯೊಡ್ಡಿರುವೆ..
ಧಣಿದು. ಧಣಿವಾರಿಸಿಕೊಳ್ಳುತಿಹ
ನನ್ನೊಡೆಯನ ಕಾವಲಿಗಿರುವೆ..
ಒಡತಿಯ ಬುತ್ತಿಗಾಗಿ ಕಾಯುತಿರುವೆ..


ಸುರೇಶ ಮಲ್ಲಾಡದ..

One thought on “ನನ್ನೊಡೆಯನ ಕಾವಲುಗಾರ ನಾನು

  1. ಸುಂದರ ಹಾಗೂ ಭಾವನಾತ್ಮಕ ಕವಿತೆ….ಮನೋಜ್ಞ ವಾಗಿದೆ..

Leave a Reply

Back To Top