ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

ಸಮಾಜಸೇವಕಿಮತ್ತುಸ್ವಾತಂತ್ರ್ಯಹೋರಾಟಗಾರ್ತಿ

ಪೂರ್ಣಿಮಾಅರವಿಂದಪಕ್ವಾಸ್ (1912 – 2016)

ಪೂರ್ಣಿಮಾ ಅರವಿಂದ ಪಕ್ವಾಸ ಗುಜರಾತಿನ ಸಮಾಜ ಸೇವಕಿ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹೋರಾಟಗಾರ್ತಿಯಾಗಿ ಬೆಳಕಿಗೆ ಬಂದರು. ಇವರನ್ನು ‘ದೀದಿ ಆಫ್ ಡ್ಯಾಂಗ್ಸ್’ ಎಂದು ಕರೆಯುತ್ತಿದ್ದರು. ಇವರು ಅಕ್ಟೋಬರ್ 5, 1913 ರಲ್ಲಿ ಈಗಿನ ಗುಜರಾತ್, ಆಗಿನ ಲಿಂಬಡಿ ರಾಜ್ಯದ ರಾಣಪುರದಲ್ಲಿ ಜನಿಸಿದರು. ಪೂರ್ಣಿಮಾರವರು ಮಣಿಪುರಿ ನೃತ್ಯ ಹಾಗೂ ಶಾಸ್ತ್ರೀಯ ಸಂಗೀತ ಕಲೆಯನ್ನು ಕೂಡ ಕಲಿತಿದ್ದರು.

ಪೂರ್ಣಿಮಾರವರು ಅರವಿಂದ ಪಕ್ವಾಸ್‍ವರನ್ನು ವಿವಾಹವಾದರು. ಈ ದಂಪತಿಗಳಿಗೆ ಆರತಿ ಮತ್ತು ಸೋನಲ್ ಎಂಬ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅನುಜ್ ಎಂಬ ಒಂದು ಗಂಡುವನ್ನು ಹೊಂದಿದ್ದರು. ಇವರ ಎರಡನೇ ಮಗಳಾದ ಸೋನಲ್‍ರವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿಯಾಗಿರುವರು.

ಪೂರ್ಣಿಮಾರವರು ತಮ್ಮ ಎಂಟನೇ ವಯಸ್ಸಿನಲ್ಲಿ ಮಹಾತ್ಮ ಗಾಂಧೀಜಿಯವರನ್ನು ಭೇಟಿಯಾದರು. ಇವರು ಲಿಂಬಡಿಯಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಪೂರ್ಣಿಮಾರವರು ತಮ್ಮ 18 ನೇ ವಯಸ್ಸಿನಲ್ಲಿ ದಂಡಿ ಮಾರ್ಚ್ ಚಳುವಳಿಯಲ್ಲಿ ಭಾಗವಹಿಸಿದರ ಫಲವಾಗಿ ಬಂಧನಕ್ಕೆ ಒಳಗಾದರು. ಜೈಲಿನಲ್ಲಿ ಕಸ್ತೂರ ಬಾ ಗಾಂಧಿಯವರೊಂದಿಗೆ ಇದ್ದರು. ಪೂರ್ಣಿಮಾರವರು ಕಸ್ತೂರ ಬಾ ರವರಿಗೆ ಇಂಗ್ಲೀಷ್ ಓದಲು ಮತ್ತು ಬರೆಯಲು ಕಲಿಸಿದರು. ಇದನ್ನು ಗಾಂಧೀಜಿಯವರು ಮೆಚ್ಚಿ ಪೂರ್ಣಿಮಾರವರಿಗೆ ಶಿಕ್ಷಣದ ಹಾದಿಯಲ್ಲಿ ಮುಂದುವರೆಯುವಂತೆ ಆಶೀರ್ವಾದ ಮಾಡಿದ್ದರು.

1938 ರಲ್ಲಿ ಹರಿಪುರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ 51ನೇ ಅಧಿವೇಶನದಲ್ಲಿ ಭಾಗವಹಿಸಿದ್ದರು. 1954ರಲ್ಲಿ ಪೂರ್ಣಿಮಾರವರು ಬಾಂಬೆಯಲ್ಲಿ “ಶಕ್ತಿಡಾಲ್” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆ ಸಂಸ್ಥೆಯು ಮಹಿಳೆಯರ ಸಾಂಸ್ಕøತಿಕ, ದೈಹಿಕ ಮತ್ತು ಆಧ್ಯಾತ್ಮಿಕ ಶಿಕ್ಷಣಕ್ಕಾಗಿ ಶ್ರಮಿಸಿತು. ಪೂರ್ಣಿಮಾರವರು 25 ವರ್ಷಗಳ ಕಾಲ ನಾಸಿಕನ್ ಬೋಸ್ಲಾ ಮಿಲಿಟರಿ ಶಾಲೆಯ ಮುಖ್ಯಸ್ಥರಾಗಿದ್ದರು. ನಂತರ 1974ರಲ್ಲಿ ಸುಪುತ್ರಾದಲ್ಲಿ ರೆತ್ತಂ ಬೋಹರ ವಿಶ್ವವಿದ್ಯಾಲಯ ಸ್ಥಾಪಿಸಿದರು. ಇದನ್ನು ಒಂದು ವಸತಿಶಾಲೆ, ಕಾಲೇಜಾಗಿ ಬೆಳೆಯುವಷ್ಟು ಅಭಿವೃದ್ಧಿಪಡಿಸಿ ಅದರ ಕಾರ್ಯಚಟುವಟಿಕೆಯನ್ನು ವಿಸ್ತರಿಸಿದರು.  ಈ ಶಾಲೆಯೂ ಡ್ಯಾಂಗ್ ಬುಡಕಟ್ಟಿಗೆ ಸೇರಿದ ಹೆಣ್ಣು ಮಕ್ಕಳಿಗಾಗಿ ಸೇವೆ ಸಲ್ಲಿಸಿತು. ಇವರು 2016 ರಲ್ಲಿ ತಮ್ಮ 102ನೇ ವಯಸ್ಸಿನಲ್ಲಿ ಸೂರತ್‍ನಲ್ಲಿ ಕೊನೆಯುಸಿರೆಳೆದರು.

ಭಾರತ ಸರ್ಕಾರವು 2004ರಲ್ಲಿ ಪೂರ್ಣಿಮಾರವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಗಮನಿಸಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತು. 2013ರಲ್ಲಿ ಸಂತೋಕ್ ಬಾ ಪ್ರಶಸ್ತಿಯನ್ನು ಕೂಡ ಪಡೆದಿರುವರು.

…‌‌‌………………………..

ಡಾ.ಸುರೇಖಾ ರಾಠೋಡ್

Leave a Reply

Back To Top