ವಸುಂಧರಾ ಕದಲೂರು ಕವಿತೆ ಖಜಾನೆ

ಕತೆಯ ಕೊನೆ

10 Famous Artworks That Celebrate Father Time | HuffPost Entertainment

ಸರ್ರನೆ ಒಳ ಸೇರಿ
ನಿಧಾನವಾಗಿ ಸಾಗಿ
ಹುದುಗಿ, ತೆವಳ ಬಯಸುವ
ಕೆಲವರನು ಹಂಗಿಸಿ, ಭಂಜಿಸಿ
ಮೊಲದೊಡನೆ ಓಡಲು ಬಿಟ್ಟು;
ಆ ಚುರುಕು, ಆ ವೇಗ, ಆ ಬಿಳುಪು,
ಆ ಸೊಬಗು ಇಲ್ಲವೆಂದಂದರೂ
ಅವರಿಗೆ ಪರವಾಗಿಲ್ಲ ! ಬೇಸರವಿಲ್ಲ !
ಕತೆಯ ಕೊನೆಗೆ ಗೆಲುವಿನ ಗೆರೆ
ಮುಟ್ಟಿದವರಾರೆಂದು ಎಲ್ಲರಿಗೂ
ಗೊತ್ತಿದೆಯಲ್ಲ.

*****************




ಬೇರು- ಚಿಗುರು

745 Tree Roots Underground Illustrations & Clip Art - iStock

ಹಿತ್ತಲು- ಅಂಗಳ

Tree Roots - by Carroll from Abstract Representational Art Gallery

ಒಂದು ಹದವಾದ ಮಳೆಗೆ
ಕಾದಿದ್ದ ಹೂಬಳ್ಳಿ ; ಚಿಗುರಿ
ಹೂ ಅರಳಿಸಿ, ದುಂಬಿ ಆಹ್ವಾನಕೆ
ಸುವಾಸನೆ ಬೀರಲು ಮೆಲುಗಾಳಿಗೆ
ಕಾದಿರುವಾಗ…. ಚಿವುಟಿದರು
ಅವರಿವರೆನ್ನದ, ಪರಿಚಿತಪರಿಚಿತರು!!
ಘಾಸಿಗೊಂಡ ಬಳ್ಳಿ ತಬ್ಬಿ ಸಂತೈಸಿತು
ಅಪ್ಪಿಕೊಂಡ ಗಿಡ; ಅಭಯ ನೀಡುತ್ತಿತ್ತು ಕಾಣದೊಳಗುಳಿದ ಬೇರು…

****************

ಹಿತ್ತಲು- ಅಂಗಳ












ಹಿಂಬಾಗಿಲ ಮುಚ್ಚಿ
ಮುಂಬಾಗಿಲ ಹೊರಗೆ
ಅಡಿಯಿಡುವ ಮುನ್ನ
ನಡುಮನೆಯಲ್ಲಿ ನಿಂತ ಮೇಲೆ
ಹಿತ್ತಲ ಬೇರನು ಬೆದಕುವ
ಆಸೆ ಬಿಡಬೇಕು…
ಅಂಗಳದ ಮಲ್ಲಿಗೆಗೆ
ಮುತ್ತಿಟ್ಟ ಚಿಟ್ಟೆ
ಆಗಸಕೆ ಹಾರಿದುದ
ನೋಡಲು ಮುನ್ನಡೆಯ ಬೇಕು


  • ವಸುಂಧರಾ ಕದಲೂರು.

2 thoughts on “ವಸುಂಧರಾ ಕದಲೂರು ಕವಿತೆ ಖಜಾನೆ

Leave a Reply

Back To Top