ಕೆಂಪು ಸೂರ್ಯ

ಕೆಂಪು ಸೂರ್ಯ

NASA's breathtaking images of the sun - CNN Video

ಮೀನು ಹಿಡಿದು ಹೊರಡಲು
ವಿದೇಶಿ ಕೆಂಪು ಕೋತಿಗಳು
ಎಸೆಯುತ್ತಿದ್ದ ಬಣ್ಣ ಬಣ್ಣದ
ಚಾಕ್ಲೇಟ್ , ಬಿಸ್ಕತ್ಗಳನ್ನು
ಕ್ಯಾಚ್ ಹಿಡಿಯುತ್ತಿದ್ದುದ
ನಮ್ಮ ಹುಡುಗರ
ಅಸಹಾಯಕತೆಯನ್ನು
ಮತ್ತೊಬ್ಬ ಪರಂಗಿ
ವೀಡಿಯೊ ಮಾಡುತ್ತಿದ್ದ ಕಂಡೆನ್ನ
ರಕ್ತ ಕುದಿದು ಕಣ್ಣು ಕೆಂಪಾಗಿ
ಕ್ಯಾಮರಾ ಕಿತ್ತು ನೆಲಕ್ಕೆಸೆದು
ಪುಡಿಗೈದು ನಡೆದೆ
ಕುಯ್ಯುಗುಟ್ಟಿದ ಕೆಂಪು ಮೂತಿಯವ
ಹೇಳುವಷ್ಟರಲ್ಲಿ
ಪಶ್ಚಿಮದ ಸೂರ್ಯ ಕೆಂಪಾಗಿ
ಚಂದ್ರ ಬರಲು ಆಣಿಯಾಗಿದ್ದ..


ಡಾ.ಎಂ.ಈ.ಶಿವಕುಮಾರ ಹೊನ್ನಾಳಿ

3 thoughts on “ಕೆಂಪು ಸೂರ್ಯ

Leave a Reply

Back To Top