ಅನುವಾದಿತ ಅಬಾಬಿಗಳು

ಅನುವಾದಿತ ಅಬಾಬಿಗಳು

ಆಕರ : ಕಾಲಂ ಸಾಕ್ಷಿಗಾ
(ತೆಲುಗು ಅಬಾಬಿಗಳ ಸಂಕಲನ)

ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್
ಕನ್ನಡಾನುವಾದ : ಧನಪಾಲ ನಾಗರಾಜಪ್ಪ

೧)
ತ್ಯಾಗಗಳ ತುಣುಕುಗಳು ಕಾಣುತ್ತಲೇ ಇಲ್ಲ
ನೆತ್ತರಿನ ಕಲೆಗಳಡಿಯಲ್ಲಿ ನೈವೇದ್ಯವಾದವೆ?
ಬಣ್ಣಗಳಿಗೇ ಹೊರತು ಮನುಷ್ಯರಿಗೆ ಬೆಲೆಯೆಲ್ಲಿ?
ಹಕೀಮಾ
ರಂಗವಲ್ಲಿಗಳ ಲೋಕದಲ್ಲಿ ಬೂಟಾಟಿಕೆಯ ರಾಜ್ಯ!

೨)
ಮಾಂಸದ ಹೆಸರಿನಲ್ಲಿ ಮಾನವ ಹತ್ಯೆಗಳು
ಕುಲಮತಗಳ ಹೆಸರಿನಲ್ಲಿ ಮಾರಣಹೋಮಗಳು
ಮಾನವತ್ವವೇ ತಲೆ ತಗ್ಗಿಸಿತಲ್ಲಾ
ಹಕೀಮಾ
ರಕ್ಕಸ ರಾಜ್ಯದ ದರ್ರ್ಬಾರ್ ಇದು!

೩)
ಸಮಾನತ್ವ ಎನ್ನುತ್ತ ಗುಲಾಮಗಿರಿ
ಕಾರುಣ್ಯ ಎನ್ನುತ್ತ ಕಾಠಿಣ್ಯ
ಭಕ್ತಿಯ ಮುಸುಕಿನಲ್ಲಿ ನೀಚಕಾರ್ಯಗಳು
ಹಕೀಮಾ
ದೈವವೆಂದರೆ ಭಯವೇ ಇಲ್ಲ ಇವರಿಗೆ!


2 thoughts on “ಅನುವಾದಿತ ಅಬಾಬಿಗಳು

Leave a Reply

Back To Top