ಗಾಂಧಿ ವಿಶೇಷ
ರಾಮಭಕ್ತ ಗಾಂಧೀಜಿ-–
ಭಾರತವ ಬೆಳಗಿಸಲು ತತ್ವಗಳ ಮಾಡಿ, ದೇಶವನುಳಿಸಲು ಅಹಿರ್ನಿಶಿ ದುಡಿದರು….
ಕಾಲುನಡಿಗೆಯೇ ಮುದ್ರೆಯಾಗಿಸಿ, ನಿದ್ರೆ ಮರೆತು ದೇಹದಂಡಿಸಿ ಸಾಗಿದರು….
ಊರೂರು ಅಲೆದರು, ಜನಗಳ ಒಟ್ಟಾಗಿಸಿ ತಾನೊಬ್ಬನೇ ಎಂದು ಮೆರೆಯದವರು….
ದಂಡಿನೊಡನೆ ನಡಿಗೆ ಹೊರಟು, ಉಪ್ಪಿಗೆ ತೆರ ತೆರಲಾಗದೆಂದು ಸತ್ಯಾಗ್ರಹವ ಘೋಷಿಸಿದವರು….
ಹೋರಾಟಕ್ಕಾಗಿಯೇ ಹುಟ್ಟಿಬಂದು ಹೊಡೆದಾಟವ ಒಪ್ಪದಾತ್ಮ, ಶಾಂತಿಯನ್ನಪ್ಪಿ ನಡೆಯಿತು…
ಇಷ್ಟಪಟ್ಟ ಕಡಲೆಕಾಯಿ, ನಿತ್ಯ ಪ್ರಯೋಗದ ಜೀವನ ಈ ಒಣದೇಹಿಯ ಮುಂದೆ ಮಂಡಿಯೂರಿತು….
ಹುಡುಕಿಬಂದ ಕಷ್ಟಗಳನು ಇಷ್ಟಪಟ್ಟು ಮೆಟ್ಟಿನಡೆದು, ಗದ್ದುಗೆಯಾಸೆ ಪಡದವರು….
ದೇಶವೊಂದೇ ಗಮನದಲ್ಲಿ, ಸೇವೆಯೊಂದೇ ಕಾರ್ಯದಲೆಂದು ತೋರಲು ಮುಂದಾಳಾಗಿ ನಡೆದವರು…..
ದೇಶವ ಒಗ್ಗೂಡಿಸಿ, ಆಂಗ್ಲರ ಬೆಚ್ಚಿಸಿದ ಸತ್ಯವಂತ ಮಹಾತ್ಮನ ಅಸಹಕಾರ ಚಳುವಳಿ….
ಕನ್ನಡಕಧಾರಿಯ ಉಪವಾಸ ಸತ್ಯಾಗ್ರಹಕೆ, ನೀಡಿ ತೊಲಗಿದರು ಭಾರತಕ್ಕೆ ಸ್ವಾತಂತ್ರ್ಯದ ಬಳುವಳಿ….
ಕೋಲನು ಹಿಡಿದು ದೇಶವಿದೇಶ ಅಲೆದ, ಸ್ವಚ್ಛತಾ ಕಾರ್ಯದ ರೂವಾರಿ ಇವರು….
ದೇಹ ಸವೆಸಿ, ಅಹಿಂಸೆಯ ಪಸರಿಸಿ, ಗುಂಡೇಟನುಂಡು ಅಸುನೀಗಿದವರು….
ಗುಜರಾತಿನಲ್ಲಿ ಜನಿಸಿ, ಮೊಳಗಿಸಿ, ಎಚ್ಚರಿಸಿ, ಹಾಕಿದರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ….
ಅಂದಿಗೂ, ಇಂದಿಗೂ, ಎಂದೆಂದಿಗೂ ಧರ್ಮ, ಅಹಿಂಸೆಯ ಜಗಕೆ ತೋರಿ ಅಮರರಾದರು ರಾಮಭಕ್ತ ನಮ್ಮ ಕರಮಚಂದ ಗಾಂಧಿ….
******************************
ಶಾಂತಿವಾಸು
ಪ್ರಕಟಣೆಗೆ ಧನ್ಯವಾದಗಳು ಸರ್