ಗಾಂಧಿ ವಿಶೇಷ
ಗಾಂಧೀಗೆ,
ಗಾಂಧೀ ಎಂದಾಗ,
ಅದಾರು ಈ ಗಾಂಧೀ
ಎಂಬ ಪ್ರಶ್ನೆ ಭುಗಿಲೆನ್ನುತ್ತದೆ.
ಹೀಗೀಗೆ ಹೀಗೀಗೆ ಎಂದು ಬಿಡಿಸಿಟ್ಟಾಗ,
ಓ ಅದಾ,ಲಂಗೋಟಿ ಅಜ್ಜ ಎನ್ನದವರಿಲ್ಲ.
ಮೂರ್ಖ ಮುದುಕ,
ಸತ್ತ ಅಹಿಂಸೆಯ ಫಾರ್ಮಲಾ ಬಳಸಿ
ಬ್ರಟಿಷರನ್ನೇನೋ ನಡುಗಿಸಿದ ಆದರೆ
ಭಾರತೀಯನಿಂದೇ ಮುಳುಗಿದ.
ಎಷ್ಟೆಲ್ಲಾ ಇತ್ತು,
ಕುರ್ಚಿಯ ಗಟ್ಟಿ ತಾಕತ್ತು
ಇರಲಿಲ್ಲವೆಂದ ಮೇಲೆ
ಅವನದೇನು ಆದರ್ಶ.
ಹಗರಣದಿ ಸಿಲುಕಿ
ಜೇಲಿನಲ್ಲಿದ್ದೂ ಮಂತ್ರಿಯಾಗುವ
ಈಗಿನ ಬಿಳಿ ಟೋಪಿಯವರಲ್ಲಿ
ಇವನ್ಯಾವ ಲೆಕ್ಕ.
ನಿಜವಾಗಿಯೂ ತನ್ನ
ಫ್ಯೂಚರ್ ಹಾಳು ಮಾಡಿಕೊಂಡ.
ಸ್ವತಂತ್ರ ಭಾರತ,ಸ್ವತಂತ್ರ ನಾಡೆಂದು
ದಿಕ್ಕು ದಿವಾಳಿಯಿಲ್ಲದೇ ಅಡ್ಡಾಡಿ
ಬದುಕ ಕೊನೆ ಮಾಡಿಕೊಂಡ.
ಆದರೂ ಅಜ್ಜ
ಮತ್ತೆ ಹುಟ್ಟಿ ಬರುವ
ಯತ್ನ ಮಾತ್ರ ಬೇಡ.
ಬಂದರೂ ನಾ ಗಾಂಧೀ
ಎನ್ನಬೇಡ.
ಪಕ್ಷ,ಓಟು,ಕುರ್ಚಿಯಲಿ
ನಿನ್ನ ಎಳದಾಡಿ
ಕ್ಷಣ ಕ್ಷಣವೂ ಕೊಲ್ಲುತ್ತಾರೆ
ಅಷ್ಟೊಂದು ಮುಂದುವರೆದಿದೆ
ನೀ ಕಟ್ಟಿದ ನಿನ್ನ ಭಾರತ.
************************************
ರಜಿಯಾ ಬಳಬಟ್ಟಿ