ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

I.ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳು

ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ತನ್ನದೆ ಹರವುಗಳನ್ನು ಹೊಂದಿಕೊಂಡು ನಾಗಾಲೋಟದಲ್ಲಿ ಬೆಳೆಯುತ್ತಿದೆ. ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣದ ಪ್ರಗತಿ ಇಷ್ಟು ವೇಗದ ಮಹತ್ವ ಪಡೆಯುತ್ತಿರುವುದು ಹರ್ಷದ ಸಂಗತಿ. ಈ ನಿಟ್ಟಿನಲ್ಲಿ ಶಿಕ್ಷಣವನ್ನು ಮತ್ತು ಶಾಲೆಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗೋಪಾಯಗಳೆಡೆಗೆ ಗಮನ ಹರಿಸುವ ಜರೂರಿದೆ…
1. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ
ಶಿಕ್ಷಕರು ಮಕ್ಕಳಿಗೆ ಕೇವಲ ಪಠ್ಯಪುಸ್ತಕದ ಜ್ಞಾನ ನೀಡುವುದಕ್ಕೆ ಸೀಮಿತವಾಗದೆ, ಚಿಂತನೆ, ಸೃಜನಶೀಲತೆ, ಸಂವಹನ ಕೌಶಲ್ಯ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಬೇಕು.
2. ಕನ್ನಡದ ಜೊತೆಗೆ ಇಂಗ್ಲಿಷ್ ಭಾಷಾ ಕೌಶಲ
ಮಕ್ಕಳಿಗೆ ಕನ್ನಡದಲ್ಲಿ ಉತ್ತಮ ಅಡಿಪಾಯ ನೀಡುವುದರ ಜೊತೆಗೆ, ಇಂಗ್ಲಿಷ್ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಅಗತ್ಯವಾದ ಕೌಶಲಗಳನ್ನು ಬೆಳೆಸಬೇಕು. ಕನ್ನಡ ಮತ್ತು ಇಂಗ್ಲಿಷ್ ಪರಸ್ಪರ ವಿರೋಧಿಗಳಲ್ಲ ಎಂಬ ಅರಿವು ಪೋಷಕರಲ್ಲಿಯೂ ಮೂಡಬೇಕಾಗಿದೆ
ಕನ್ನಡ ಮಾಧ್ಯಮದಲ್ಲಿ ಓದಿದರೂ ಇಂಗ್ಲಿಷ್‌ನಲ್ಲಿ ಉತ್ತಮ ಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಲು ಸಾಧ್ಯ ಎಂಬುದನ್ನು ತರಬೇತಿಯ ಮೂಲಕ ಬಲಪಡಿಸಬೇಕು
3. ಮೂಲಸೌಕರ್ಯಗಳ ಅಭಿವೃದ್ಧಿ
ಪ್ರತಿಯೊಂದು ಶಾಲೆಯಲ್ಲಿಯೂ ಸ್ವಚ್ಛವಾದ ತರಗತಿಗಳು, ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯಗಳು, ಗ್ರಂಥಾಲಯ, ಆಟದ ಮೈದಾನ ಮತ್ತು ಅಗತ್ಯ ಕಲಿಕಾ ಸಾಮಗ್ರಿಗಳ ವ್ಯವಸ್ಥೆ ಮಾಡಬೇಕು
4. ತಂತ್ರಜ್ಞಾನ ಆಧಾರಿತ ಶಿಕ್ಷಣ
ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣ, ಶೈಕ್ಷಣಿಕ ವಿಡಿಯೊಗಳು ಮತ್ತು ಡಿಜಿಟಲ್ ಕಲಿಕಾ ಸಂಪನ್ಮೂಲಗಳು ಮತ್ತು ಅರ್ಹ ಮತ್ತು ನುರಿತ ಶಿಕ್ಷಕರ ಸಹಾಯದಿಂದ ಮಕ್ಕಳ ಕಲಿಕೆಯನ್ನು ಹೆಚ್ಚು ಆಸಕ್ತಿದಾಯಕವಾಗಿಸಬಹುದು.
5. ಪೋಷಕರ ವಿಶ್ವಾಸ ಗಳಿಸುವುದು
ಶಾಲೆಯಲ್ಲಿ ಮಕ್ಕಳ ಕಲಿಕಾ ಪ್ರಗತಿ, ಶಿಕ್ಷಕರ ಬೋಧನಾ ಕ್ರಮ ಪರೀಕ್ಷಾ ಫಲಿತಾಂಶ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ನಿಯಮಿತವಾಗಿ ಮಾಹಿತಿ ನೀಡುವುದರೊಂದಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ . ಪೋಷಕ-ಶಿಕ್ಷಕ-ಮಕ್ಕಳ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸುವುದರ ಮೂಲಕ ಮಕ್ಕಳ ಮತ್ತು ಪಾಲಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು

6. ಶಾಲಾಭಿವೃದ್ಧಿಯಲ್ಲಿ ಸಮುದಾಯದ ಪಾತ್ರ
ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ದಾನಿಗಳು, ಆಸಕ್ತರು ಶಾಲೆಯ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು. ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳನ್ನು ಸಕ್ರೀಯವಾಗಿ ಕಾರ್ಯನಿರ್ವಹಿಸುವಂತೆ ಪ್ರೇರೆಪಿಸಬೇಕು
7. ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸುವುದು
ಕನ್ನಡ ಸಾಹಿತ್ಯ, ಕವಿತೆ, ಕಥೆ, ನಾಟಕ, ಜನಪದ ಕಲೆ, ಗಾದೆ ಮತ್ತು ಒಗಟುಗಳ ಮೂಲಕ ಮಕ್ಕಳಲ್ಲಿ ಭಾಷೆಯ ಮೇಲಿನ ಪ್ರೀತಿ ಬೆಳೆಸಬೇಕು. ಬದುಕಿನ ಮಹತ್ವಗಳು, ಮಾನವೀಯ ಮೌಲ್ಯಗಳು ನೆಲೆಯೂರಿ ನಿಲ್ಲುವಂತೆ ಮಾಡಬೇಕು ಹಾಗೂ ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು.
8. ಶಿಕ್ಷಕರಿಗೆ ನಿರಂತರ ತರಬೇತಿ
ಹೊಸ ಬೋಧನಾ ವಿಧಾನಗಳು,ತಂತ್ರಜ್ಞಾನದ ಪೂರೖಕೆ,ಮಕ್ಕಳ ಮನೋವಿಜ್ಞಾನ, ತಂತ್ರಜ್ಞಾನ ಬಳಕೆ ಮತ್ತು ಚಟುವಟಿಕೆ ಆಧಾರಿತ ಕಲಿಕೆಯ ಕುರಿತು ಶಿಕ್ಷಕರಿಗೆ ಗುಣಮಟ್ಟದ ತರಬೇತಿ ನೀಡಬೇಕು. ಶಿಕ್ಷಕರು ತಮ್ಮ ವೃತ್ತಿಪರ ಕೌಶಲಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ಕಲ್ಪಿಸುತ್ತ ಶಿಕ್ಷಕರನ್ನೂ ಬೆಳೆಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು
9. ಸರ್ಕಾರಿ ಶಾಲೆಗಳ ಸಾಧನೆಗಳನ್ನು ಜನರಿಗೆ ತಲುಪಿಸುವುದು
ಶಾಲೆಯ ವಿದ್ಯಾರ್ಥಿಗಳು ಕ್ರೀಡೆ, ವಿಜ್ಞಾನ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದಾಗ ಅವುಗಳನ್ನು ಸಾರ್ವಜನಿಕವಾಗಿ ಗುರುತಿಸಿ ಸೂಕ್ತ ಬಹುಮಾನ ಪ್ರೋತ್ಸಾಹ ನೀಡಬೇಕು. ಇದರಿಂದ ಪೋಷಕರಲ್ಲಿ ವಿಶ್ವಾಸ ಮೂಡುತ್ತದೆ.
10. ಸರ್ಕಾರದ ಜವಾಬ್ದಾರಿ
ಸರ್ಕಾರವು ಶಾಲೆಗಳಿಗೆ ಅಗತ್ಯ ಅನುದಾನ, ಎಲ್ಲ ವಿಷಯಗಳ ಶಿಕ್ಷಕರ ನೇಮಕಾತಿ, ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಗುಣಮಟ್ಟದ ಕಲಿಕಾ ಸಾಮಗ್ರಿಗಳನ್ನು ಒದಗಿಸಲು ಸರ್ಕಾರ ದಾಪುಗಾಲು ಇಡಬೇಕು ಮತ್ತು ಶಾಲೆಗಳ ಸಮಸ್ಯೆಗಳನ್ನು ಗುರುತಿಸಿ ಕಾಲಮಿತಿಯೊಳಗೆ ಪರಿಹರಿಸುವ ವ್ಯವಸ್ಥೆ ಇರಬೇಕು.
4. ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವಲ್ಲಿ ಶಿಕ್ಷಕರ ಪಾತ್ರ
ಶಿಕ್ಷಕರು ಶಾಲೆಯ ಜೀವಾಳ. ಮಕ್ಕಳಿಗೆ ಪಾಠ ಹೇಳಿಕೊಡುವುದಷ್ಟೇ ಶಿಕ್ಷಕರ ಕೆಲಸವಲ್ಲ; ಅವರಲ್ಲಿ ಆತ್ಮವಿಶ್ವಾಸ, ಮಾನವೀಯ ಮೌಲ್ಯಗಳು, ವೈಜ್ಞಾನಿಕ ಮನೋಭಾವ ಮತ್ತು ಕಲಿಯುವ ಆಸಕ್ತಿಯನ್ನು ಬೆಳೆಸುವುದೂ ಶಿಕ್ಷಕರ ಕರ್ತವ್ಯವಾಗಿದೆ.
ಪ್ರತಿಯೊಬ್ಬ ಮಗುವಿನ ಕಲಿಕಾ ಸಾಮರ್ಥ್ಯ ವಿಭಿನ್ನವಾಗಿರುವುದರಿಂದ, ಮಕ್ಕಳ ಅಗತ್ಯಗಳಿಗೆ ಅನುಗುಣವಾಗಿ, ಮಕ್ಕಳ ಬುದ್ಧಿಮತ್ತೆ ಅನುಸಾರ ಬೋಧನಾ ವಿಧಾನಗಳನ್ನು ರೂಪಿಸಬೇಕು, ಮತ್ತು ಮಕ್ಕಳ ಪ್ರತಿಭೆ ಗುರುತಿಸಿ ನೀರೆರೆದು ಪ್ರೋತ್ಸಾಹಿಸಿ ಪಾಲಕರೊಟ್ಟಿಗೆ ಈ ಕುರಿತು ಆಪ್ತ ಸಮಾಲೋಚನೆ ಮತ್ತು ಮನವರಿಕೆ ಮಾಡಬೇಕು. ಶಾಲೆಗೆ ಬರುವ ಪ್ರತಿಯೊಂದು ಮಗುವೂ ಕಲಿಕೆಯಲ್ಲಿ ಪ್ರಗತಿ ಸಾಧಿಸುವಂತೆ ನೋಡಿಕೊಳ್ಳಬೇಕು.
ಒಂದು ಸರ್ಕಾರಿ ಶಾಲೆಯ ಗುಣಮಟ್ಟ ಹೆಚ್ಚಾದರೆ, ಆ ಶಾಲೆಯ ಮೇಲಿನ ಪೋಷಕರ ವಿಶ್ವಾಸ ಹೆಚ್ಚುತ್ತದೆ. ಪೋಷಕರ ವಿಶ್ವಾಸ ಹೆಚ್ಚಾದರೆ, ಮಕ್ಕಳ ದಾಖಲಾತಿಯೂ ಹೆಚ್ಚುವ ಸಾಧ್ಯತೆ ಇದೆ.
5. ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವಲ್ಲಿ ಪೋಷಕರ ಪಾತ್ರ…
ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಬೇಕು. ಮಕ್ಕಳ ದಿನನಿತ್ಯದ ಕಲಿಕೆಯನ್ನು ಗಮನಿಸಬೇಕು. ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಸಹಕರಿಸಬೇಕು.
ಸರ್ಕಾರಿ ಶಾಲೆಯಲ್ಲಿ ಓದುವುದು ಕೀಳರಿಮೆಯ ವಿಷಯವಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆಯೇ, ಅವರ ಜ್ಞಾನ ಮತ್ತು ಕೌಶಲಗಳು ಬೆಳೆಯುತ್ತಿವೆಯೇ ಎಂಬುದಕ್ಕೆ ಹೆಚ್ಚಿನ ಮಹತ್ವವನ್ನು ಪಾಲಕರು ನೀಡಬೇಕು.ಹೆಣ್ಣು ಗಂಡೆಂಬ ಭೇದವಿಲ್ಲದೆ ಶಿಕ್ಷಣದ ಹಕ್ಕು ಸದ್ಭಳಕೆಯಾಗಬೇಕು..

ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವುದು ಕೇವಲ ಸರ್ಕಾರದ ಕೆಲಸವಲ್ಲ. ಅದು ಶಿಕ್ಷಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು, ಸ್ಥಳೀಯ ಸಮುದಾಯ ಮತ್ತು ಕನ್ನಡಪರ ಸಂಘಟನೆಗಳೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.
ಕನ್ನಡ ಶಾಲೆಗಳನ್ನು ಉಳಿಸುವುದೆಂದರೆ ಕೇವಲ ಕನ್ನಡ ಭಾಷೆಯನ್ನು ಉಳಿಸುವುದಲ್ಲ; ಸಮಾನ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವುದು, ಗ್ರಾಮೀಣ ಮಕ್ಕಳ ಶಿಕ್ಷಣ, ಅವರಭವಿಷ್ಯವನ್ನು ರೂಪಿಸುವುದು ಮತ್ತು ನಮ್ಮ ನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡುವುದೂ ಆಗಿದೆ.
“ಸರ್ಕಾರಿ ಶಾಲೆ ಉಳಿಸಿ” ಎಂಬ ಘೋಷಣೆಯು ಕೇವಲ ಮಾತಿನಲ್ಲಿ ಉಳಿಯಬಾರದು. “ಸರ್ಕಾರಿ ಶಾಲೆಯನ್ನು ಗುಣಮಟ್ಟದ ಶಾಲೆಯನ್ನಾಗಿ ರೂಪಿಸಿ” ಎಂಬ ಸಂಕಲ್ಪವಾಗಿ ಬದಲಾಗಬೇಕು.
ಕನ್ನಡ ಶಾಲೆಗಳು ನಮ್ಮ ಹೆಮ್ಮೆ. ಅವುಗಳ ಅಭಿವೃದ್ಧಿ ನಮ್ಮೆಲ್ಲರ ಹೊಣೆ ಎನ್ನುವ ಮನೋಧೋರಣೆ ಹೊಂದಬೇಕು..


About The Author

Leave a Reply

You cannot copy content of this page

Scroll to Top