ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಸಮರಸವು ಮೂಡಲಿ” ಈ ನೆಲದ ಭಾಷೆಯಿದುಬುದ್ಧ ಬಸವರ ವಚನಗಳುಸತ್ಯ ಸಮತೆ ಶಾಂತಿ ಪ್ರೀತಿಮನುಜ ಪಥದ ಮಂತ್ರವು ನಾನು ಹುಟ್ಟಿ ನಾವು ಬೆಳೆದುನಾಡ ಗೋಡೆ ಕಟ್ಟ ಬೇಕುವರ್ಗ ವರ್ಣ ಬೇಧ ಅಳೆದುದೇಶ ಒಂದೇ ಎನ್ನ ಬೇಕು ನೇಯ್ಗೆ ಕೃಷಿ ಗ್ರಾಮ ರಾಜ್ಯಬಾಪು ಕನಸಿನ ಭಾರತಭಗತ ಸಿಂಗರ ತ್ಯಾಗ ನೆಲದಬಾಬಾಸಾಹೇಬರ ಭಾರತ ದ್ವೇಷ ಮತ್ಸರ ಕರಗಿ ಹೋಗಲಿಮಮತೆ ಪ್ರೀತಿ ಅರಳಲಿಕೊಲೆ ಹಿಂಸೆ ಮಾಯವಾಗಿಸಮರಸವು ಮೂಡಲಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ” Read Post »

ಕಾವ್ಯಯಾನ, ಗಝಲ್

ಇಂದಿರಾ ಕೆ ಅವರ ಗಜಲ್

ಕಾವ್ಯ ಸಂಗಾತಿ ಇಂದಿರಾ ಕೆ ಗಜಲ್ ದೇಶ – ದೇಶ ನಡುವೆ ದ್ವೇಷ ಜ್ವಾಲೆ ಆರಿಸುವವರು ಯಾರಿಲ್ಲಿಮುಗಿಲು ಮುಟ್ಟಿದ ಅಳಲು ಆಕ್ರಂದನ ಆಲಿಸುವವರು ಯಾರಿಲ್ಲಿ ಯುದ್ಧ ರಣಾರ್ಭಟಕೆ ಬೆಚ್ಚಿ ಬಿದ್ದಿದೆ ಮನುಕುಲವುಜಗದಗಲ ಹರಡಿದ ಅಶಾಂತಿಯ ಅಳಿಸುವವರು ಯಾರಿಲ್ಲಿ ಬಲಿಷ್ಠತೆ ಮೆರೆದು ದೀನರಿಲ್ಲಿ ಬಲಿಪಶುಗಳಾದರುರಕ್ತ- ಸಿಕ್ತದಲಿ ಸಿಕ್ಕ ಹೆಣಗಳ ಎಣಿಸುವವರು ಯಾರಿಲ್ಲಿ ಅಸೂಯೆ ಅಹಂನ ಪ್ರದರ್ಶನ ಕರಾಮತ್ತೋಅಮಾಯಕರ ಜೀವ ಬೆಲೆ ತಿಳಿಸುವವರು ಯಾರಿಲ್ಲಿ ಕ್ರಾಂತಿ ಕಹಳೆ ಹೊತ್ತಿಸಿ ಕ್ಷಿಪಣಿಗಳ ಮಳೆಗೈಯುತಿವೆಹಲ್ಲೋಲ- ಕಲ್ಲೋಲ ಜಗತ್ತು ದಂಡಿಸುವವರು ಯಾರಿಲ್ಲಿ ಭಯದ ಭೀತಿ ಆವರಿಸಿದೆ ಅಳಿದುಳಿದ ಮನಗಳಲಿ  ವಿರಾಮವಿಲ್ಲದೆ ವಿರಾಜಿಸುತಿದೆ ವಿನಾಶ ಕದನ ತ್ಯಜಿಸುವವರು ಯಾರಿಲ್ಲಿ ವಿಶ್ವದಾದ್ಯಂತ ಶಾಂತಿ ಸ್ನೇಹ – ಭಾತೃತ್ವ ನೆಲೆಸಲೆಂದು ಪ್ರಾರ್ಥಿಸಿಬೇಕಿದೆ ಇಂದಿರೆದಾಳಿ – ಪ್ರತಿದಾಳಿಗೆ ನಲುಗಿದವರ ರಕ್ಷಿಸುವವರು ಯಾರಿಲ್ಲಿ ಇಂದಿರಾ ಕೆ

ಇಂದಿರಾ ಕೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಕಲ್ಪನಾ ಎಸ್‌ ಪಾಟೀಲ್‌ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ ಗಜಲ್ ತೆರೆದ ಎದೆಯ ಕದವ ಬಡೆಯುತಲೆ ಇದ್ದೆಅದಾವ ಊರ ಕನಸಿನೊಡೆಯನೊನೀನಾಗಿದ್ದೆ ಕನಸಲೆ ಕನಸುಗಳು ಬಹುದೂರದಿ ಸಾಗುತಲೆ ಇದ್ದವುನೀನು ಹೋದ ದೂರದೂರಿನ ದಾರಿಯಬೆನ್ನಟ್ಟಿಯೆ ಇದ್ದವು ನೀ ದಾರಿ ತಪ್ಪಿಸಿದರೂ ನೀನು ಕ್ರಮಿಸುವದಾರಿಯ ಮರೆಯದಂತೆ ಮಾಡಿದ್ದವು ಕನಸೆ ಗುರಿಯಾಗಿಸಿಕೊಂಡು ನಡೆದಿದ್ದೆ ನೀನುಆ ಕನಸೆ ಗುರಿಯ ತೀರ ತಲುಪಿಸಿದನು ಮರೆತೆ ಏನು ನನ್ನ ಕನಸೆ ನೀನು ನಿನ್ನ ಕನಸಿಗಾಗಿ ನಾನೆ ಎಂದೆನೀ ಬರಿ ಕನಸ ಕಂಡರೆ ಕಾವ್ಯಧರೆಗೆ ಕನಸೆ ನೀನಾಗಿದ್ದೆ ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ್‌ ಅವರ ಗಜಲ್ Read Post »

ಕಾವ್ಯಯಾನ

ಪ್ರಶಾಂತ್ ಬೆಳತೂರು ಅವರ ಕವಿತೆ ” ಅವ್ವನಂತಹ ಹುಡುಗಿ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ಅವ್ವನಂತಹ ಹುಡುಗಿ” pic̲:gemini ಇವಳ ಕುರಿತುಹೆಚ್ಚೇನೂ ಹೇಳಬೇಕಿಲ್ಲ…! ಅವ್ವನಂತಹ ಹುಡುಗಿಕಣ್ಣ ಬೊಗಸೆ ತುಂಬಾಪ್ರೀತಿ ಹೊತ್ತು ನಿಂತಿರುತ್ತಾಳೆ…! ಬೆಳ್ಳಂಬೆಳಗ್ಗೆ ಅವ್ವನೇಎಲ್ಲರಿಗಿಂತ ಮೊದಲೆದ್ದುಮನೆಯ ಉಸಾಬರಿ ವಹಿಸಲುಹಾಜರಾಗುವಂತೆರೂಮಿನ ಬಾಗಿಲು ತೆರೆದಾಗೆಲ್ಲಾಕಣ್ಮುಂದೆ ಕಾಣಿಸಿಕೊಳ್ಳುತ್ತಾಳೆಒಂಟಿ ದೋಣಿಯೊಂದುಯಾವುದೋ ದೂರ ತೀರಕೆಹಾತೊರೆದು ಹರಿಯುತ್ತಿರುವಂತೆ..! ನನ್ನೆದೆಯೊಳಗೂಒಮ್ಮೆಲೇ ರಭಸವಾಗಿ ನುಗ್ಗಿ ಬಿಡುತ್ತಾಳೆಅವ್ವನ ಪ್ರತಿರೂಪದಂತಾಗಿಹರಿದಾಡುತ್ತಾಳೆಮುಗ್ಧತೆಯಲ್ಲಿ ಮೂಗು ತಿರುವುತ್ತಾಒಳಗೊಳಗೆ ಅಸಹನೆಯಲ್ಲಿಉಕ್ಕುವ ಅಲೆಗಳಂತೆ ಸಿಡುಕಿತನ್ನಷ್ಟಕ್ಕೆ ತಾನೇ ತಣ್ಣಗಾಗುತ್ತಾಳೆಪ್ರೇಮಮಯಿ ಆಗಿಬಿಡುತ್ತಾಳೆ..! ಸಂತೈಸುತ್ತದೆ ನನ್ನನ್ನುಅವಳ ಒಂದು ನಿಷ್ಕಲ್ಮಶ ಮುಗ್ಧ ನಗು..!ಅವ್ವ ಮಗಳಾಗಿ ಬಂದಳೇನೋ ಎಂಬಅಚ್ಚರಿಯೊಂದು ಗೊತ್ತಾಗದಂತೆಹೃದಯದ ಭಾವವನ್ನುಲಯ ತಪ್ಪದಂತೆಮಧುರ ದನಿಯಲ್ಲಿ ಹೊತ್ತಿಸಿ ಬಿಡುತ್ತಾಳೆ..! ಅದ್ಯಾವ ಕಾಲದಲ್ಲಿಮಣ್ಣಲ್ಲಿ ಮಣ್ಣಾದ ನನ್ನವ್ವಈ ಅಪರಿಚಿತ ಹುಡುಗಿಯ ಕಂಗಳಲಿಮಳೆಯಾಗಿ ಜಿನುಗಿಬಿಟ್ಟಳು..!ತುಸು ಹಸುರಾಗಿಹೀಗೆ ಅರಿಯದಒಲವೊಂದನ್ನು ಚಿಗುರಿಸಿಬಿಟ್ಟಳು..! ತಿಳಿಯುತ್ತಿಲ್ಲ..ಇವಳ ಕುರಿತು ಹೆಚ್ಚೇನೂ..!ಆದರೆಅವ್ವನಂತಹ ಹುಡುಗಿಮೊನ್ನೆಮತ್ತೆ ತಿರುಗಿ ಬಂದಿದ್ದಳು..! ಬದುಕಿನ ಯುಗಾದಿಗಳೆಲ್ಲಾಮಂಕು ಕವಿದುಮುಗಿದು ಹೋಗುತ್ತಿರುವಾಗಬೆಳಕಾಗುವನನ್ನವ್ವನ ನೆನಪುಗಳನ್ನೆಲ್ಲಾಮರುಕಳಿಸುವಂತೆತನ್ನ ಹೋಳಿಗೆಯ ಡಬ್ಬಿಯಲ್ಲಿಜತನವಾಗಿ ತುಂಬಿಅಕ್ಕರೆಯಿಂದ ಕೈಗಿರಿಸುತ್ತಾತಾಯೊಡಲಿನ ಕನಸೊಂದುನಿಜವಾದಂತೆನಗುತ್ತಾ..ಅವ್ವನಾಗಿ ನಿಂತುಬಿಟ್ಟಿದ್ದಳು..! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ ” ಅವ್ವನಂತಹ ಹುಡುಗಿ” Read Post »

ನಿಮ್ಮೊಂದಿಗೆ

ಗೊರೂರು ಅನಂತರಾಜು ಅವರ ಕವಿತೆ ” ಕವಿ ಕಾಡಿಗೆ ಹೋದ”

ಕಾವ್ಯ ಸಂಗಾತಿ ಗೊರೂರು ಅನಂತರಾಜು ” ಕವಿ ಕಾಡಿಗೆ ಹೋದ” ಬಾರಯ್ಯ ಕವಿ ಕಾಡಿಗೆ ಈಗ ಬಂದೆಗ್ಯಾಸ್ ಮುಗಿದಿದೆಯೇಇಲ್ಲ ವನದೇವ ಸೌದೆ ಒಲೆಗೆ ಬೆಂಕಿ ಹಾಕಿ ಬಹಳ ದಿನಗಳಾದವುವಿಶ್ವ ಗುರುಗಳು ಯುದ್ಧಕ್ಕೆ ಅಲ್ಪ ವಿರಾಮ ಹಾಕಿದ್ದಾರೆರಾಮನಾಮ ಜಪಿಸುತ್ತಾ ವನವಾಸಕ್ಕೆ ಬಂದೆಮರ ಕಡಿಯಲು ಬಂದೆಯಾ ಮೂರ್ಖಹನುಮಂತನು ಲಂಕೆಗೆ ಬೆಂಕಿ ಇಟ್ಟನುಇವರು ಅಲ್ಲಿ ಬಾಂಬ್ ಬಿಟ್ಟರುಮನೆಯಲ್ಲಿ ಗ್ಯಾಸ್ ಟ್ರಬಲ್  ಮಕ್ಕಳು ಉಪವಾಸಹೆಂಡತಿ ಓಡಿಸಿದ್ದಾಳೆ ಅದಕ್ಕೆ ನಿನಗೆ ವನವಾಸಶ್ರೀಕೃಷ್ಣ ರಾಯಬಾರಿಗೆ ಪ್ರಾರ್ಥಿಸಿಕೊಅವರಿಗೆ ಭಗವದ್ಗೀತೆ ಬೋಧಿಸಿ ಯುದ್ಧ ನಿಲ್ಲಿಸಲಿ. ಗೊರೂರು ಅನಂತರಾಜು

ಗೊರೂರು ಅನಂತರಾಜು ಅವರ ಕವಿತೆ ” ಕವಿ ಕಾಡಿಗೆ ಹೋದ” Read Post »

ಪುಸ್ತಕ ಸಂಗಾತಿ

ಡಿ.ನಳಿನಾ ಅವರ ಅಂಕಣ ಬರಹಗಳ ಸಂಕಲನ “ಮನೋಮಂಥನ” ಕೃತಿಯ ಅವಲೋಕನ ಡಾ. ಅಶೋಕ ನರೋಡೆ ಅವರಿಂದ

ಪುಸ್ತಕ ಸಂಗಾತಿ ಡಾ. ಅಶೋಕ ನರೋಡೆ ಡಿ.ನಳಿನಾ “ಮನೋಮಂಥನ” ಕೃತಿಯ ಅವಲೋಕನ “ಮನೋಮಂಥನ ” ಡಿ.ನಳಿನಾ ಅವರ ವ್ಯಕ್ತಿತ್ವದ ವಿಕಸನದ ಕೃತಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಮಕ್ಕಳ ಮನೋ ವೈಜ್ಞಾನಿಕ ಅಂಕಣಗಳ ಸಂಕಲನ ಮೈಸೂರು ಆನಂದಿ ಪ್ರಕಾಶನವು ೨೦೨೫ ರಲ್ಲಿ ಪ್ರಕಟಿಸಿದೆ.” ಇಂದೀನ ಮಕ್ಕಳೆ ನಾಳಿನ ಪ್ರಜೆಗಳು. ಆರೋಗ್ಯವಂತ ಸಮಾಜ ರೂಪು ಗೊಳ್ಳಲು ಆರೋಗ್ಯವಂತ ಸಮಾಜ ತತ್ಪರವಾಗಿರಬೇಕು. ಅದಕ್ಕಾಗಿಯೇ ವೇದಗಳಾದಿಯಾಗಿ ಯೋಗಿಗಳು, ಋಷಿಮುನಿಗಳು, ಪ್ರಾಜ್ಞರು, ಪಂಡಿತರು, ಸಂಶೋಧಕರು, ವಿಜ್ಞಾನಿಗಳು, ಸಮಾಜಸುಧಾರಕರು, ಶಿಕ್ಷಕರು ನಿರಂತರ ದುಡಿಯುತ್ತಿದ್ದಾರೆ ಭಾರತೀಯ ಯೋಗ ಪರಂಪರೆಯ ಯಮ ನಿಯಮ  ಜನರ ಅಂತರಂಗ ಬಹಿರಂಗ ಶುದ್ಧಿಗೆ ಸಹಕರಿಸುತ್ತದೆ.” ಎಂಬುದು ಗಮನಾರ್ಹವಾಗಿದೆ. ಸುವಿಖ್ಯಾತ  ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರರ ಮೌಲಿಕ ಮುನ್ನುಡಿ  ಪುಸ್ತಕ ಕನ್ನಡಿಯಾಗಿದೆ. ಪ್ರಸ್ತುತ ಮನೋಮಂಥನ ಗ್ರಂಥದಲ್ಲಿ -ಜವಾಬ್ದಾರಿಯ ಮಕ್ಕಳು, ಕುಟುಂಬ ಮೌಲ್ಯಗಳು ಬೆಳೆಯಲಿ, ಮಕ್ಕಳ ಜಾಹೀರಾತು, ಮಕ್ಕಳನ್ನು ಬಯಲಿಗೆ ಒಡ್ಡಿ, ಮಕ್ಕಳಿಗೆ ಅವಮಾನ ಅನಿಸಿದರೆ ನಿಲ್ಲಿಸಿ, ಮಕ್ಕಳಿಗೆ ಕೋಟು ಹಾಕಿಸುವ ಪರಿಣಾಮ, ಮಕ್ಕಳಿಗೆ ವರ್ತನೆ ಕಲಿಸಿ, ಪಿರಿಯಡ್ಸ್ ಬಗ್ಗೆ ಅರಿವು ಮೂಡಿಸಿ, ಶಿಕ್ಷಕರು ಗೇಲಿ ಮಾಡಬಾರದು, ತಂದೆಗೆ ಇದು ಗೊತ್ತಿರಲಿ, ವಿವೇಚನೆಯೇ ಮದ್ದು, ಆರೋಗ್ಯಕರ ಸಂಬಂಧ ಬೆಳೆಸಿ, ಮಕ್ಕಳ ಸ್ನೇಹಿ ಪಾಲಕರಾಗಿ, ಮಕ್ಕಳಲ್ಲಿ ಮೌಲ್ಯ ಬೆಳೆಸೋಣ,ಮಕ್ಕಳ ಮನಸ್ಸು ಅರಿಯೋಣ, ಬೆಳೆವ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ, ಮಕ್ಕಳ ಮನೋಬಲ ವೃದ್ಧಿಸಿ, ಮಕ್ಕಳ ನ್ನು ಮುಕ್ತವಾಗಿ ಬೆಳೆಯಲು ಬಿಡಿ, ಮಕ್ಕಳೇ ಮನೆ ಬೆಳಕು, ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಿ, ಮಕ್ಕಳಿಗೆ ಬೇಕಿದೆ ಆಸರೆ, ಕುಟುಂಬದ ಸಾಮರ್ಥ್ಯವೇ ಸದಸ್ಯರ ನೈತಿಕ ಶಕ್ತಿ, ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು, ಮಕ್ಕಳ ಶ್ರಮ ಗೌರವಿಸಿ, ಮಕ್ಕಳ ಮನಸ್ಸನ್ನು ಗೆಲ್ಲಿ, ಮಕ್ಕಳಲ್ಲಿ ದ್ವೇಷ ಬಿತ್ತ ಬಾರದು, ಏಕಾಗ್ರತೆ ವಿದ್ಯಾರ್ಥಿ ಹಂತ ದಲ್ಲಿ ಬೆಳಕು, ಮಕ್ಕಳಲ್ಲಿನ ಕುತೂಹಲ ತಣಿಸಬೇಕು, ಮಕ್ಕಳಲ್ಲಿ ಎದೆಗಾರಿಕೆ ಬೆಳೆಸುವುದು ಹೇಗೆ?, ಪರೀಕ್ಷೆ ಬರೆಸೋಣ ಧೈರ್ಯವಾಗಿ, ಮಕ್ಕಳ ಮೇಲೆ ನಿಗಾ ಇರಲಿ, ಮಕ್ಕಳನ್ನು ಥಳಿಸದೇ ಕಲಿಸುವ ಜಾಣ್ಮೆ, ಮಕ್ಕಳ ಮೇಲೆ ಕರುಣೆ ಉಕ್ಕಲಿ, ಮಕ್ಕಳು ನಿರೀಕ್ಷಿಸುವ ಗುಣಗಳು ನಮ್ಮಲ್ಲಿ ಇರಲಿ,ಮಕ್ಕಳಿಗೆ ಸಾಹಿತ್ಯದ ಪುಸ್ತಕ ಓದಲು ಕಲಿಸಿ, ಆನಲೈನ್ ವಂಚನೆ ಮಕ್ಕಳನ್ನು ಬಾಧಿಸದಿರಲಿ, ಮಕ್ಕಳಲ್ಲಿ ಸಭಾಕಂಪನ ತೊಲಗಿಸಲು ಶ್ರಮಿಸಿ, ಮಕ್ಕಳನ್ನು ನೀರಿನೊಂದಿಗೆ ಚೆಲ್ಲಾಟಕೆ ಬಿಡಬೇಡಿ, ಮಕ್ಕಳು ಜೀವನ್ಮಖತೆ ಮೈಗೂಡಿಸಿಕೊಳ್ಳಲು ಸಹಕರಿಸಿ, ಶಾರ್ಟ್ ಕಟ್ – ಕಟ್ ಕಟ್, ಮಕ್ಕಳನ್ನು ಟಾರ್ಗೆಟ್ ಮಾಡಬಾರದು, ಮಕ್ಕಳಿಗೆ ಉಳಿತಾಯದ ಮಹತ್ವ ತಿಳಿಸಿ, ಮಕ್ಕಳಲ್ಲಿ ಪರೀಕ್ಷಾ ಭೀತಿ ತೊಲಗಿ ಸುವುದು ಹೇಗೆ ?, ಮಕ್ಕಳಿಗೆ ಶಾಲೆಯ ಸಾಮಾಜಿಕ ಜೀವನ ಅಗತ್ಯ, ಶಿಸ್ತು ಶಿಕ್ಷೆ ಆಗಬಾರದು,ಹಾರ್ಮೋನ್ಸ್ ಬದಲಾ ವಣೆ- ಬೇಕು ತಿಳುವಳಿಕೆ, ಮಕ್ಕಳಿಗೆ ಪಾಲಕರೆ ಆದರ್ಶ, ವಿಶೇಷ ಚೇತನರ ಮೇಲೆ ಗೌರವ- ಪ್ರೀತಿ ಅಚ್ಚಳಿಯ ದಂತಿರಲಿ,ಮಕ್ಕಳಿಗೆ ಸಂಸ್ಕೃತಿ ಕಲಿಸ ಲೇಬೇಕಾದ ಅನಿವಾರ್ಯತೆ, ಮಕ್ಕಳೆದುರು ಪಾಲಕರು ಮೋಬೈಲ್ ದೂರವಿರಿಸಿ,ಹುಡುಗಾಟದಿಂದ ಭವಿಷ್ಯ ಬಡಿದಾಟ,ಹರೆಯದ ವಿದ್ಯಾರ್ಥಿಗಳ ನಡುವೆ ಸಲುಗೆ ಸಲ್ಲ, ಮಕ್ಕಳಲ್ಲಿ ಕಲಾಭಿರುಚಿ, ಮಕ್ಕಳಿಗೆ ಕಣ್ಣೀರು ಹಾಕಿಸಬಾರದು, ಬೇಸಿಗೆ ರಜೆ ಹಾಯಾಗಿರಲಿ, ಬಿಸಿಲು ಜಾಗ್ರತೆ ಅವಶ್ಯ, ದೇಹ ರಕ್ಷಣಾ ಕೌಶಲ್ಯ ತರಬೇತಿ  ಅಗತ್ಯ, ಡ್ರಗ್ಸ್ ವಿಷವುಣಿಸುವ ವರಿದ್ದಾರೆ ಎಚ್ಚರ!, ಪರೀಕ್ಷೆ ದಿಟ್ಟತನ ದಿಂದ ಎದುರಿಸೋಣ, ಪರೀಕ್ಷಾ ಫೋಬೀಯಾ ಓಡಿಸಿ,ಮಕ್ಕಳ ಆದ್ಯತೆಗೆ ಗಮನವಿರಲಿ, ಮಕ್ಕಳನ್ನು ಗ್ರಾಮದ ಅನುಭವಗಳಿಗೆ ಒಡ್ಡಿ, ಮಕ್ಕಳಿಗೆ ವಿವೇಚನೆಯಿಂದ ತಿನ್ನಿಸಿ, ಮಕ್ಕಳು  ಫೇಲಾದರೆ ಅವರ ತಪ್ಪೇ ?, ಪಾಲಕರೆ ಅಪ್ರಾಪ್ತರಿಗೆ ವಾಹನ ನೀಡದಿರಿ, ಶಿಕ್ಷಣ ಉದ್ಯಮದೊಳಗೆ ಪಾಲಕರು ಕಂಗಾಲು ಮುಂತಾದ ಎಪ್ಪತ್ತೊಂದು ಸೊಗಸಾದ ಬರಹಗಳಿವೆ.”ಶ್ರೀಮತಿ ನಳಿನಾ ಅವರು ಮಕ್ಕಳ ಪುಟ್ಟ ಪುಟ್ಟ ಹೆಜ್ಜೆಗಳಂತೆ; ಪುಟ್ಟ ಪುಟ್ಟ ಲೇಖನಗಳ ಸರಮಾಲೆ ಯನ್ನು ಸಿದ್ದಪಡಿಸಿ, ಮನೋಮಂಥನ ಸುಂದರ  ಪುಸ್ತಕವನ್ನು ಕೈಗಿತ್ತಿದ್ದಾರೆ.” ಓದುವುದೇ ಚೇತೋಹಾರಿ ಅನುಭವ. ಬರವಣಿಗೆ ಸರಳ ಸಹಜ ಸುಂದರ ವಾಗಿ ಬಂದಿದೆ.ಮಕ್ಕಳು ಮಾತ್ರವಲ್ಲ, ಪಾಲಕರು, ಶಿಕ್ಷಕರು, ಅಧಿಕಾರಿ ವರ್ಗ, ಆಡಳಿತ‌ ಮಂಡಳಿಯವರು ಓದ ಲೇಬೇಕಾದ ಮಹತ್ವದ ಲೇಖನಗಳ ಗೊಂಚಲಿದು. ನಳಿನ ರಸವತ್ತಾಗಿ ಬರೆದಿದ್ದಾರೆ. ಘಟನೆಗಳು ಹೃದಯ ತಟ್ಟುತ್ತ್ತವೆ. ನಿರೂಪಣಾ ಶೈಲಿಯು ಚಿತ್ತಾಕರ್ಷಕವಾಗಿದೆ. ಪಾಲಕರ ಜವಾಬ್ದಾರಿ, ಶಿಕ್ಷಕರ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ವಿಕಾಸಕ್ಕೆ ರಹದಾರಿಯಾಗು ವಂತಹ ಕೃತಿ. “ಮನೋಮಂಥನ ಇಂದಿನ ಕಾಲದ ಪಾಲಕರ ಕೈಪಿಡಿಯಾಗಿ ರೂಪುಗೊಂಡಿದೆ. ವರ್ತಮಾನದಲ್ಲಿ ಪಾಲಕರು ವಿದ್ಯಾರ್ಥಿಗಳು, ಶಿಕ್ಷಕರು ತ್ರೀಕೋನೀ ಯ ಸಂಬಂಧಿತ ಸವಾಲುಗಳನ್ನು ಸಮಸ್ಯೆಗಳನ್ನು ಪರಿಹಾರಗಳನ್ನು ಬಹಳ ಆಪ್ತತೆಯ ದೃಷ್ಟಿಯಿಂದ ಮಾತೃ ವಾತ್ಸಲ್ಯದ ಕಕ್ಕುಲಾತಿಯಿಂದ ನೀಡ ಲಾಗಿದೆ.” ಎಂಬ ಯೋಗಿ ದೇವರಾಜ ಅವರ ಅಭಿಪ್ರಾಯವು ಪ್ರಸ್ತುತ ಪುಸ್ತಕದ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತದೆ.” ಕಳೆದ ಹದಿನೈದು ವರ್ಷಗಳ ಹಿಂದಿನಿಂದಲೂ ನಳಿನಾ ಅವರ ಬರಹಗಳು ಮಾನವೀಯ ಮೊರೆತವನ್ನು ಹೊಂದಿದ್ದು ಸಮಾಜದ ಒಳಿತಿಗಾಗಿ ತುಡಿಯುತ್ತಿವೆ.ಇಂತಹ ಸಕಾರಾತ್ಮಕ ಕೃತಿಗಳು ನಾಡಿನ ಪಾಲಕರ ಕೈಗೆ ತಲುಪಿ, ಮಕ್ಕಳ ಬದುಕು ಹಸನಾಗಲಿ” ಎಂದು ಹಾರೈಸಿದ್ದು ಸಮಂಜಸವಾಗಿದೆ.ಸದಾ ಲೋಕಕಲ್ಯಾಣದ ಚಿಂತನೆಗಳಿಂದ ಕೆಲಸ ಮಾಡುವ ಲೇಖಕಿ, ನಳಿನಾ ಅವರ ಮನೋಮಂಥನ ಮಕ್ಕಳ ಮನೋವಿಕಾಸಕೆ ರಹದಾರಿಯಾಗಲಿ.  ಡಾ. ಅಶೋಕ ನರೋಡೆ   ಡಾ. ಅಶೋಕ ನರೋಡೆ

ಡಿ.ನಳಿನಾ ಅವರ ಅಂಕಣ ಬರಹಗಳ ಸಂಕಲನ “ಮನೋಮಂಥನ” ಕೃತಿಯ ಅವಲೋಕನ ಡಾ. ಅಶೋಕ ನರೋಡೆ ಅವರಿಂದ Read Post »

ಇತರೆ

“ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಒಲಿದು ಬಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ” ಸುಭಾಷ್ ಹೇಮಣ್ಣಾ ಚವ್ಹಾಣ

ಸಾಹಿತಿ ಸಂಗಾತಿ “ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಒಲಿದು ಬಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ” ಸಮಾಜ ಮುಖಿ ಸಂವೇದನಾಶೀಲ ಲೇಖಕಿ ಡಾ. ಹೇಮಾ ಸಿ. ಪಟ್ಟಣಶೆಟ್ಟಿಯವರಿಗೆ ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಥ್ಯ (ಕೌಟುಂಬಿಕ ಜನತಾ ನ್ಯಾಯಾಲಯದ ಪ್ರಥಮ ಆಯೋಜಕಿ, ಸಾಹಿತ್ಯ ಮತ್ತು ಸಂಘಟನೆಯ ರಾಯಭಾರಿ, ಉತ್ತರ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆಯಾದಿಯಾಗಿ ಬಹುಶೃತ ಕಾರ್ಯಫಲದಾತೆ, ಅನನ್ಯ ಪ್ರಕಾಶನದ ಒಡತಿ, ಸಮರ್ಥ ಅನುವಾದಕಿ, 4೦ ವೈವಿಧ್ಯಮಯ ಕೃತಿತಾರೆಗಳ ಧಾರನಗರಿಯ ಹೆಸರಾಂತ ಲೇಖಕಿ, ರಂಗನಟಿ, ಸಮಾಜಮುಖಿ ಸಕ್ರಿಯ ಕಾರ್ಯಕರ್ತೆ, ಬಹುಭಾಷಾ ಕವಯತ್ರಿ, ಮನಃಶಾಸ್ತ್ರದ ಕನ್ನಡ ಉಪನ್ಯಾಸಕಿ, ಮಕ್ಕಳ ನಾಟಕ ರಚನಾಕಾರ್ತಿ, ಸಶಕ್ತ ಸಮಾಜದ ಸಂಸ್ಕೃತಿ ಚಿಂತಕಿ, ಸ್ತ್ರೀ ದೌರ್ಜನ್ಯದ ವಿಮೋಚಕಿ, ಸಬಲ ಮಹಿಳಾ ಲೋಕದ ಸಂಚಾಲಕಿ, ನೊಂದ ವನಿತೆಯರ ಸಾಂತ್ವನ ಸಮಾತಾ ಸಶಕ್ತ ಧ್ವನಿ, ದೇವದಾಸಿ ಪದ್ಧತಿ ನಿರ್ಮೂಲನಾ ಸಂಪನ್ಮೂಲ ವ್ಯಕ್ತಿ, ಧಾರವಾಡ ಹೈಕೋರ್ಟ್ ಪೀಠ ಸ್ಥಾಪನಾ ಉಪವಾಸ ಸತ್ಯಾಗ್ರಹಿ, ಸ್ತ್ರೀ ಮೀಸಲಾತಿಯ ಸ್ವಯಂ ಸೇವಕಿ, ಲಿಂಗ ಸಂವೇದನಾ ಜಾಗೃತಿಯ ರೂವಾರಿ, ವನಿತೆಯರ ಬಹುವಿಧ ಸಮಸ್ಯೆಗಳ ನಿವಾರಕಿ, ಮಾನವೀಯ ಸಂವೇದನೆಯ ಮಾತೃಹೃದಯಿ, ಹೆಣ್ಣು ಧಾರಕ ಬೀದಿ ನಾಟಕದ ರೂಪಕಿ, ಕಾವ್ಯ ಕಮ್ಮಟ, ಅನುವಾದ ಕಮ್ಮಟ, ಪ್ರಕಾಶನ ಕಮ್ಮಟ, ಕವಿಸಂಘದ ಉಪಾಧ್ಯಕ್ಷರು, ಹೆಣ್ಣು ಭ್ರೂಣ ಹತ್ಯೆಯ ಭೇದಕಿ, ವಿಚಾರ ಸಂಕಿರಣ, ಪರಿಸರ ವ ಜಲ ಸಂವರ್ಧಕಿ, ಖ್ಯಾತ ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಯವರ ಧರ್ಮಪತ್ನಿ ಡಾ. ಹೇಮಾ ಸಿದ್ಧಲಿಂಗ ಪಟ್ಟಣಶೆಟ್ಟಿ ಇವರ ಸಾಮಾಜಿಕ ಸೇವೆ – ಸಾಂಸ್ಕೃತಿಕ ಅನುಸಂಧಾನಕ್ಕಾಗಿ ಕರ್ನಾಟಕ ಘನ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2೦24 – ೨೫ನೇ ಸಾಲಿನ ಮಹಾಶರಣೆ ‘ಅಕ್ಕಮಹಾದೇವಿ ರಾಜ್ಯ ಮಟ್ಟದ ಪ್ರಶಸ್ತಿ’ ಪುರಸ್ಕೃತರಾದ ಡಾ. ಹೇಮಾ ಸಿದ್ದಲಿಂಗ ಪಟ್ಟಣಶೆಟ್ಟಿ ಯವರಿಗೆ ಧಾರವಾಡ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು,  30, 31 ಮಾರ್ಚ 2026ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜನೆಯಾಗಿದೆ ಸಕಾರಣ ಮಹನೀಯರ ಕನ್ನಡ ಸಾಹಿತ್ಯ ಸೇವೆ, ಸಮಾಜ ವ ಸಾಂಸ್ಕೃತಿಕ ಜೀವನ ಸಾಧನೆಯ ಮೇಲೆ ಬೆಳಕು ಚೆಲ್ಲುವ ಕಿರು ಲೇಖನ) *ಸಮತಾ ಸಮಾಜದ ಸಂಚಾಲಕಿ ಡಾ. ಹೇಮಾ ಪಟ್ಟಣಶೆಟ್ಟಿ ಅವರ ಬಾಲ್ಯ, ಶಿಕ್ಷಣ, ಪರಿವಾರ ವೃತ್ತಿ ಕುರಿತು ಕಿರು ಮಾಹಿತಿ* ವೈಚಾರಿಕ ನಿಲುವಿನ ಹೇಮಾರವರು 1954ರ ಫೆಬ್ರುವರಿ 10ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಚಂದ್ರಶೇಖರಸ್ವಾಮಿ ಹೊನ್ನಾಪುರಮಠರವರು ವಕೀಲರಾಗಿದ್ದರು. ತಾಯಿ ಗೌರಾಂಬಿಕಾ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು. ಸಾಹಿತ್ಯಿಕ ಪರಿವಾರದಿಂದ ಬಂದ ಹೇಮಾ ಅವರು ಎಂ. ಎ. (ಮನೋವಿಜ್ಞಾನ) ಮತ್ತು ಎಂ. ಎ. (ಕನ್ನಡ) ಸಾಧನೆಗಳ ಜೊತೆಗೆ ‘ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು’ ಎಂಬ ಮಹಾಪ್ರಬಂಧ ಮಂಡಿಸಿ ಪಿ. ಎಚ್. ಡಿ ಪದವಿಗೆ ಪಾತ್ರರಾದ ಇವರು ಮಹಿಳಾ ಸಶಕ್ತಿಕರಣದ ಸಂಕೇತವಾಗಿದ್ದಾರೆ. ಡಾ. ಹೇಮಾ ಪಟ್ಟಣಶೆಟ್ಟಿ ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಂತ ಲೇಖಕಿ. ಲೇಖನಗಳಲ್ಲದೆ ಅನುವಾದಕಿಯಾಗಿಯೂ, ರಂಗನಟಿಯಾಗಿಯೂ ಹಾಗೂ ಸಮಾಜ ಕಾರ್ಯಕರ್ತೆಯಾಗಿಯೂ ಪ್ರಸಿದ್ದರು. ಆರು ವರ್ಷ ಮನ:ಶಾಸ್ತ್ರದಲ್ಲೂ ನಾಲ್ಕು ವರ್ಷ ಕನ್ನಡಲ್ಲೂ ಉಪನ್ಯಾಸಕಿಯಾಗಿ ಧಾರವಾಡ ಕರ್ನಾಟಕ ಕಲಾ ಮಹಾವಿದ್ಯಾಲಯ ಮತ್ತು ಕಿತ್ತೂರಿನ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಮಂಗಳೂರಿನ ಆಕಾಶವಾಣಿಯಲ್ಲಿ ಪ್ರೊಡಕ್ಷನ್ಸ್ ಅಸಿಸ್ಟೆಂಟ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. “ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು -ಸ್ತ್ರೀವಾದಿ ದೃಷ್ಟಿಕೋನ” ಎಂಬುದು ಇವರ ಸಂಶೋದನಾ ಪ್ರಬಂಧ. ನೀನಾ ಕೃತಿ ಖ್ಯಾತಿಯ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಧರ್ಮ ಪತ್ನಿಯಾಗಿ ಹೂವೆಂಬ ಮಗಳು ಸಮುದ್ರವೆಂಬ ಮಗನನ್ನು ಪಡೆದಿರುವ ಇವರು ಸದಾ ಮಹಿಳಾ ಕಲ್ಯಾಣ ಮತ್ತು ಸಮಾಜೋದ್ಧಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.  *ಮಹಿಳಾ ದೌರ್ಜನ್ಯ ವಿಮೋಚಕಿ ಡಾ. ಹೇಮಾ ಪಟ್ಟಣಶೆಟ್ಟಿಯವರ ಅಸಾಧಾರಣ ಅಪರಿಮಿತ ಸಮಾಜಮುಖಿ ಕಾರ್ಯಕಲಾಪಗಳು* ಡಾ. ಹೇಮಾ ಪಟ್ಟಣಶೆಟ್ಟಿ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಠ್ಯ ರಚನಾ ಸಲಹಾ ಸಮಿತಿ ಸದಸ್ಯರಾಗಿ, ಕರ್ನಾಟಕ ಸರಕಾರದ ಜಲ ಸಂವರ್ಧನೆ ಯೋಜನಾ ಸಂಘದ ಆಡಳಿತ ಮಂಡಳಿ ಸದಸ್ಯರಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ರಾಷ್ಟ್ರೀಯ – ಅಂತಾರಾಷ್ಟ್ರೀಯ ಮಹತ್ವದ ಕಥಾ ಹಾಗೂ ಕಾವ್ಯ ಸಂಪುಟಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟಗೊಂಡಿವೆ. ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಬಹುಭಾಷಾ ಲೇಖಕಿಯರ ಸಂವಾದದ ಜೊತೆಗೆ ವಿಚಾರ ಮಂಡನೆ ಮಾಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಕೋಶಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ,‍ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ‘ರಂಗಭೂಮಿಕಾ’ ಹವ್ಯಾಸಿ ನಾಟಕ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.              ಹೇಮಾ ಪಟ್ಟಣಶೆಟ್ಟಿ ಅವರು ಮಹಿಳಾ ಸಂಬಂಧೀ ಕಾರ್ಯಗಳಲ್ಲಿ ರಾಷ್ಟ್ರಮಟ್ಟದ ‘ಜಾಯಿಂಟ್ ವಿಮೆನ್ಸ್ ಪ್ರೋಗ್ರಾಂ’ ಸಂಸ್ಥೆಯ ಉತ್ತರ ಕರ್ನಾಟಕದ ಸಂಚಾಲಕರಾಗಿ, ‘ಸಾಂತ್ವನ’ ಕೌಟುಂಬಿಕ ಸಲಹೆ – ಸಹಾಯ ಕೇಂದ್ರದ ನಿರ್ದೇಶಕರಾಗಿ,  ರಾಷ್ಟ್ರಮಟ್ಟದಲ್ಲಿ ಮಹಿಳೆ ಮತ್ತು ಬಾಲಕಿಯರ ಸಾಗಾಣಿಕೆ ತಡೆಗಟ್ಟುವ ಸಮಿತಿ ಸದಸ್ಯರಾಗಿ, ಮಹಿಳಾ ಜಾಗೃತಿ ವೇದಿಕೆ ಸ್ಥಾಪಕ ಕಾರ್ಯದರ್ಶಿಯಾಗಿ ಹೀಗೆ ಆನೇಕ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ದೇವದಾಸಿ ಮಹಿಳೆಯರ ಮೇಲೆ ಸರಕಾರಿ ನೀತಿ ಮತ್ತು ಯೋಜನಾ ಸೌಲಭ್ಯಗಳ ಪರಿಣಾಮ ಹಾಗೂ ಅವರ ಸ್ಥಾನಮಾನ ಕುರಿತು ಪುನರ್ಮೌಲ್ಯೀಕರಣ ಅಧ್ಯಯನ ಮಾಡಿದ್ದಾರೆ.‍ ಪೊಲೀಸ್ ಅಧಿಕಾರಿಗಳಿಗೆ ಲಿಂಗ ಸಂವೇದನಾ ಜಾಗೃತಿ ಕಾರ್ಯಾಗಾರವನ್ನು ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಸಂಘಟಿಸಿದ್ದಾರೆ. ಕೌಟುಂಬಿಕ ಜನತಾ ನ್ಯಾಯಾಲಯ ಆಯೋಜಿಸಿ – ಧಾರವಾಡ, ಬೆಳಗಾವ, ಅಥಣಿ – ನ್ಯಾಯಾಲಯಗಳಲ್ಲಿ ಉಳಿದು ಹೋದ ಪ್ರಕರಣಗಳಲ್ಲಿ 85 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ. ಅಮ್ಮಿನಭಾವಿ,  ಉಪ್ಪಿನಬೆಟಗೇರಿ, ಬ್ಯಾಹಟ್ಟಿ  ಗ್ರಾಮಗಳಲ್ಲಿ ಪ್ರತೀ ಗ್ರಾಮದಲ್ಲಿ 50 ಮಹಿಳೆಯರಿಗೆ ‘ಸಶಕ್ತೀಕರಣ’ದ ತರಬೇತಿಯನ್ನು 22 ತಿಂಗಳ ಕಾಲ ನೀಡಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ,  ಪ್ರತಿಭಟನಾ ಮೆರವಣಿಗೆ, ಉಪವಾಸ ಸತ್ಯಾಗ್ರಹಗಳಲ್ಲಿ ಭಾಗವಹಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಶ್ರಮಿಸಿದ್ದಾರೆ. *ಡಾ ಹೇಮಾರವರ ಅನನ್ಯ ಪ್ರಕಾಶನದಡಿಯಲ್ಲಿ ಜನಾರ್ಪಣೆಗೊಂಡ ಅವರ ಕೃತಿ ವೈವಿಧ್ಯ ನೋಟ* ೧೯೭೯ ರಲ್ಲಿ ‘ಅನನ್ಯ’ ಪ್ರಕಾಶನವನ್ನು ಸ್ಥಾಪಿಸಿ ಕನ್ನಡ ಖ್ಯಾತ ಲೇಖಕರ ೧೫೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ಸಾಹಿತ್ಯಿಕ ದ್ವೈ ಮಾಸಿಕ ‘ಸಂಕಲನ’ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.              ಹೇಮಾ ಪಟ್ಟಣಶೆಟ್ಟಿ ಅವರು ಇದುವರೆವಿಗೂ ಸುಮಾರು 40 ಸಾಹಿತ್ಯ ಕೃತಿಗಳನ್ನು ಮೂಡಿಸಿದ್ದಾರೆ. ಮುಸುಕಿದೀ ಮಬ್ಬಿನಲಿ ಅವರ ಕಥಾ ಸಂಕಲನ. ವಿರಹೋತ್ಸವ(೧೯೮೩), ಹೊಸ ಹಾಡು(೧೯೮೬), ಕಣ್ಣುಗಳಲಿ ಕನಸು ತುಂಬಿ(೧೯೯೩), ಉಸಿರ ಬದುವಿನ ಗುಂಟ(೨೦೦೭), ಬಾಳೆ ಗರ್ಭದಲಿ (೨೦೧೧) ಅವರ ಕಾವ್ಯ ಸಂಕಲನಗಳು. ತುಂಟ ಮಕ್ಕಳ ತಂಟೆ, ಬಗಾಟ ಬಗರಿ, ಹೆಣ್ಣು ಹೆಜ್ಜೆ, ಚೆಕಾವ್ ಟು ಶಾಂಪೇನ್ ಮಕ್ಕಳ ನಾಟಕಗಳು. ಅವರ ವೈಚಾರಿಕ  ಕೃತಿಗಳಲ್ಲಿ ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ, ರಂಗದಂಗಳ, ಆಕಲನ, ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ, ರಂಗ ವೃತ್ತಾಂತ,ಅಕ್ಕರದ ಸುಯಿಧಾನ ಸೇರಿವೆ. ಪ್ರಸನ್ನ, ಸಾಲಿ ರಾಮಚಂದ್ರರಾಯ ಇವರು ರಚಿಸಿದ ಜೀವನ ಚರಿತ್ರೆಗಳು.  ಹೊನ್ನಪುರ, ಕತೆಗಳು; ನನ್ನ ಅವ್ವ ನನ್ನ ಅಪ್ಪ -೧, ನನ್ನ ಅವ್ವ ನನ್ನ ಅಪ್ಪ-೨, ನನ್ನ ಶಾಲಾ ಗುರುಗಳು ಇವರ‍ ಸಂಪಾದನೆಗಳು. ಡಾ. ಲೋಹಿಯ, ಅದೃಶ್ಯ ವ್ಯಕ್ತಿಯ ಆತ್ಮಹತ್ಯೆ, ವಾತ್ಸಲ್ಯ ವಿಷ, ಮಾಡು ಸಿಕ್ಕದಲ್ಲಾ, ಜಾತಿಯವನೇ ಬೇಕು, ಅಪ್ಪಾಜಿ ಕಳೆದು ಹೋಗಿದ್ದಾರೆ, ಬೆವರು! ಬೆವರು!, ಬಾಬಿ, ಸೀಗಲ್, ಪೇಶಂಟ್ ಪಾರ್ಕಿಂಗ್, ಅನಿವಾಸಿ ಭಾರತೀಯರು, ತೆಂಡುಲಕರ ಮಕ್ಕಳ ನಾಟಕಗಳು, ರಕ್ತ ಪುಷ್ಪ,  ಹೋಳಿ ಮುಂತಾದವು ಇತರ ಭಾಷೆಗಳಿಂದ ಮೂಡಿ ಬಂದ ಇವರ ಅನುವಾದ ಕರತಿಗಳು. ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿ ವಿಫುಲ ಅನುಭವ ಗಳಿಸಿದ್ದಾರೆ. *ಡಾ ಹೇಮಾರವರ ಸಂಸ್ಕೃತಿ ಚಿಂತನೆ ಮಹಿಳಾ ಹೋರಾಟ ಸಾಹಿತಿಕ ಸೇವೆಗೆ ಸಂದಿರುವ ಪ್ರಶಸ್ತಿ, ಪುರಸ್ಕಾರ, ಗೌರವಾಧಾರ, ಮಾನ – ಸನ್ಮಾನಗಳು*    ​       2007ರಲ್ಲಿ ಡಾ. ಹೇಮಾ ಪಟ್ಟಣಶೆಟ್ಟಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ (ಮುಸಕಿದೀ ಮಬ್ಬಿನಲಿ), ಮುದ್ದಣ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ವಿರಹೋತ್ಸವ), ಎರಡು ಸಲ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಅನುಲೇಖ), ರತ್ನಮ್ಮ ಹೆಗ್ಗಡೆ ಬಹುಮಾನ (ಹೊಸ ಹಾಡು, ಕಣ್ಣುಗಳಲಿ ಕನಸು ತುಂಬಿ, ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ, ಉಸಿರ ಬದುವಿನ ಗುಂಟ ಕೃತಿಗಳಿಗೆ) ಮಹಿಳಾ ಪ್ರಕಾಶಕ ಪ್ರಶಸ್ತಿ- ಕರ್ನಾಟಕ ಲೇಖಕಿಯರ ಸಂಘದ ಪ್ರೇಮಾ ಭಟ್ ಪ್ರಕಾಶಕ ಪ್ರಶಸ್ತಿ, ಮಹಿಳಾ ಸಾಧಕರ ಪ್ರಶಸ್ತಿ – ಸಾಹಿತ್ಯ ಪ್ರತಿಷ್ಠಾನ – ಬೆಳಗಾವಿ, ಸೀತಾಸುತ ಸಾಹಿತ್ಯ ಪ್ರಶಸ್ತಿ, ಕೀರಂ ಪ್ರಶಸ್ತಿ, ಹೊಸ ಹಾಡು ಕೃತಿಗೆ ೧೯೮೩ ರ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ ದೊರೆತಿದೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮಕ್ಕಳ ಚಂದಿರ ಪ್ರಶಸ್ತಿ, ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಇವರು ಕೊಡಮಾಡುವ ಅಕ್ಕ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಧಾರವಾಡ ತಾಲ್ಲೂಕು ಸಾಹಿತ್ಯ ಸಮ್ಮೇಳನ-7 ರ ಸರ್ವಾಧ್ಯಕ್ಷತೆ, ದಸರಾ ಕವಿಗೋಷ್ಠಿ ಅಧ್ಯಕ್ಷತೆ, ಧಾರವಾಡ ಜಿಲ್ಲಾ ಉತ್ಸವ-೮ ಸಾಂಸ್ಕೃತಿಕ ಸಮಿತಿ ಅಧ್ಯಕ್ಷತೆ, ದಸರಾ ವಿಶಿಷ್ಟ ಕವಿಗೋಷ್ಠಿ ಅಧ್ಯಕ್ಷತೆ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಧಾರವಾಡದ ಇನ್ನರ್ ವ್ಹೀಲ್ ಕ್ಲಬ್ ಇವರಿಗೆ ಉತ್ಕೃಷ್ಟ ಸಮಾಜ ಕಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.               ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕೀರ್ಣ ಕಾರ್ಯಗಾರ ಪ್ರತಿಭಟನಾ ಮೆರವಣಿಗೆ ಉಪವಾಸ ಸತ್ಯಾಗ್ರಗಳಲ್ಲಿ ಭಾಗವಹಿಸಿರುವ ಹೇಮಾ ರವರ ಸಾಧನೆ ಅವಿಸ್ಮರಣೆಯ ಅವುಗಳಲ್ಲಿ ಮುಖ್ಯವಾದವು ಬೆಳಗಾವಿ ನಮ್ಮದು – 1970, ಜೆ. ಪಿ ಚಳುವಳಿ -1975, ಧಾರವಾಡದ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ – 1995, 33 ಪರ್ಸೆಂಟ್ ಮಹಿಳಾ ಮಿಸಲಾತಿಗಾಗಿ ದಿಲ್ಲಿ ಸಂಸತ್ ಭವನದ ಎದುರು ಧರಣಿ – 1998, ಮಂತಾದ ಚಳುವಳಿಗಳಲ್ಲಿ ಭಾಗವಹಿಸಿ ನಾಡಿನ ಕಲ್ಯಾಣಕ್ಕಾಗಿ ಅವಿರತ ಹೋರಾಟ ಮಾಡಿದ್ದಾರೆ. ೨೦೧೩ರಲ್ಲಿ ನಡೆದ ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದ ಡಾ.ಹೇಮಾ ಪಟ್ಟಣಶೆಟ್ಟಿ ಅವರಿಗೆ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಲಭಿಸಲಿ, ಇವರ ಸಾಮಾಜಿಕ ಹಾಗೂ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಅರಸಿಬಂದಿವೆ. ಪ್ರಸ್ತುತ ಕರ್ನಾಟಕ ಘನ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2024 – 25ನೇ ಸಾಲಿನ ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿಯನ್ನು 3 ಮಾರ್ಚ್ 2೦25ರಂದು ಪ್ರದಾನ ಮಾಡಿರುವುದು ಅಭಿಮಾನದ ಸಂಗತಿಯೂ ಹೌದು ಮಹಿಳಾ ಸಬಲೀಕರಣಕ್ಕೆ ಸಂಧ ಗೌರವವು ಹೌದು. ಆದಾಗ್ಯೂ ಇವರ ಸಮಾಜಮುಖಿ ಸಂಘಟನೆ, ಸಂಸ್ಕೃತಿ ಚಿಂತನೆ, ಅಮೂಲ್ಯ ಸಾಹಿತ್ಯ ಸೇವೆಗೆ ಪದ್ಮಶ್ರೀ ಗೌರವ, ನಾಡೋಜ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಒಲಿದು ಬರಲಿ. ಗೌರವ ಡಾಕ್ಟರೇಟ್ ಪದವಿಗಳು ಸೇರಿದಂತೆ ಇನ್ನೂ ಮುಂತಾದ ಗೌರವ ಪ್ರಶಸ್ತಿ – ಪುರಸ್ಕಾರಗಳು ಇವರ ಅವಿಸ್ಮರಣೀಯ ನಾಡ ಸೇವೆಗೆ ಭೂಷಣಪ್ರಾಯವಾಗಲಿ ಎಂದು ಶುಭ ಹಾರೈಸುವೆನು. ಡಾ ಹೇಮಾ ಪಟ್ಟಣ ಶೆಟ್ಟಿಯವರ ಸಾಹಿತ್ಯ ಕೃಷಿ, ಸಮಾಜ ಸೇವೆ, ಸಂಸ್ಕೃತಿ ಸಂಘಟನೆಗಳ ಅಮೋಘ ಸೇವೆ

“ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಒಲಿದು ಬಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ” ಸುಭಾಷ್ ಹೇಮಣ್ಣಾ ಚವ್ಹಾಣ Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ–32 ನಮ್ಮ ಆಫೀಸಿನ ಮುಂದಿನ ರಸ್ತೆಯಲ್ಲಿಯೇ ಒಂದು ಎಂಟು ನಿಮಿಷ ನಡೆದರೆ ಸಂತೆ ನಡೆಯುವ ಸಂತೆ ಮಾಳ ಅಥವಾ ಬಯಲು. ನಾವು ಮಧ್ಯಾಹ್ನ ಭೋಜನ ವಿರಾಮ ವೇಳೆಯಲ್ಲಿ ಬೇಗ ಬೇಗ ಊಟ ಮುಗಿಸಿ ಸಂತೆಗೆ ಹೋಗುತ್ತಿದ್ದೆವು. ಸಾಮಾನ್ಯವಾಗಿ ನಾನು ಇಂದುಮತಿ ಮತ್ತು ಶಶಿಕಲಾ ಹೋಗುತ್ತಿದ್ದೆವು.. ನಂತರ ಗಂಗಾ ಮತ್ತು ಫಾತಿಮಾ ವರ್ಗವಾಗಿ ಬಂದಮೇಲೆ ಅವರೂ ಬರುತ್ತಿದ್ದರು.ಮೊದಲಿಗೆ ಸಂತೆಯಲ್ಲಿದ್ದ ಮೂರು ನಾಲ್ಕು ಸಾಲುಗಳನ್ನು ಒಂದು ಬಾರಿ ಕಣ್ಣಾಡಿಸಿ ಬರುವುದು. ನಂತರ ಎಲ್ಲಿ ಚೆನ್ನಾಗಿದೆಯೋ ಹಾಗೂ ಬೆಲೆ ಕಡಿಮೆ ಇರುತ್ತದೆಯೋ ಅಲ್ಲಿ ತೆಗೆದುಕೊಳ್ಳುವುದು.. ನಾನು ಅಮ್ಮನ ಮನೆಗೂ ಸೇರಿಸಿ ತರಕಾರಿ ತೆಗೆದುಕೊಂಡು ಬರುತ್ತಿದ್ದೆ .ಸಾಮಾನ್ಯ ನನ್ನ ಬ್ಯಾಗ್ ತೂಕವಾಗಿ ಇರುತ್ತಿತ್ತು. ಈಗಾದರೆ ಅಷ್ಟು ಭಾರ ಹೊತ್ತು ಎಂಟು ನಿಮಿಷ ನಡೆಯಲು ಆಗುತ್ತಿತ್ತೋ ಇಲ್ಲವೋ ಹಾಗಂತು ನಿರಾಯಾಸವಾಗಿ ತೆಗೆದುಕೊಂಡು ಬರುತ್ತಿದ್ದೆವು. ಸಂಜೆ ಮಾತ್ರ ಆಟೋ ಹಿಡಿದು ಹೋಗುತ್ತಿದ್ದೆವು. ಸಾಮಾನ್ಯ ಅಲ್ಲಿ ತರಕಾರಿ ಬೆಳೆದವರೇ ತಂದು ಮಾರುತಿದ್ದುದರಿಂದ ತುಂಬಾ ತಾಜಾ ಆಗಿಯೂ ಇರುತ್ತಿತ್ತು ಅಲ್ಲದೆ ಮೈಸೂರಿಗಿಂತ ಬಹಳ ಕಡಿಮೆ ದರದಲ್ಲಿಯೇ ಸಿಗುತ್ತಿದ್ದುದಿ ಒಂದು ಕಾರಣ. ಸೊಪ್ಪಂತೂ ತುಂಬಾ ಚೆನ್ನಾಗಿರುತ್ತಿತ್ತು. ಆದರೆ ನಾವು ಸಂತೆಯಲ್ಲಿ ಸೊಪ್ಪನ್ನು ತೆಗೆದುಕೊಳ್ಳುತ್ತಿರಲಿಲ್ಲ. ಮಧ್ಯಾಹ್ನ ತೆಗೆದುಕೊಂಡು ಸಂಜೆಯ ವೇಳೆಗೆ ಬಾಡಿ ಹೋಗುತ್ತದೆ ಎನ್ನುವುದು ಒಂದು ಕಾರಣವಾದರೆ ರೈಲ್ವೆ ಸ್ಟೇಷನ್ ಪಕ್ಕದಲ್ಲಿಯೇ ಒಂದು ತರಕಾರಿ ಮಾರುಕಟ್ಟೆ ಇತ್ತು. ಅಲ್ಲಿ ತುದಿಯಲ್ಲಿಯೇ ಒಂದು ಅಜ್ಜಿ ಸೊಪ್ಪು ಮಾರುತ್ತಾ ಕುಳಿತಿರುತ್ತಿತ್ತು. ಸಾಮಾನ್ಯ ಆಕೆಯ ಬಳಿಯೇ ತೆಗೆದುಕೊಂಡು ರೈಲು ಹತ್ತುತ್ತಿದ್ದುದು. ಅದು ಶುಕ್ರವಾರ ಮಾತ್ರ ಸೊಪ್ಪು ತೆಗೆದುಕೊಳ್ಳದೆ ಬೇರೆ ದಿನಗಳಲ್ಲಿ ತೆಗೆದುಕೊಳ್ಳುತ್ತಿದ್ದೆವು.. ಕಸಿ ಮಾಡಿದ ದೊಡ್ಡ ಗಾತ್ರದ ಬದನೆಕಾಯಿ ಒಳಗೆ ಒಂದು ಬೀಜವು ಇರದೆ ಬೆಣ್ಣೆಯಂತೆ ಕರಗಿ ಹೋಗುತ್ತಿತ್ತು. ಎಳೆ ಹುರಳಿ ಕಾಯಿ ಗೋರಿಕಾಯಿ ಹೀರೆಕಾಯಿಗಳು ನೋಡಿದರೆ ತಿನ್ನುವಷ್ಟು ಆಸೆ ಆಗುತ್ತಿತ್ತು. ಕ್ಯಾರೆಟ್ ಸಹ ಚೆನ್ನಾಗಿಯೇ ಸಿಗುತ್ತಿತ್ತು. ಹೀಗಾಗಿ ಎಲ್ಲ ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಅವರೇ ಕಾಯಿ ಮತ್ತು ಸೊಪ್ಪು ಮಾತ್ರ ರೈಲ್ವೆ ಸ್ಟೇಷನ್ ಬಳಿಯಲ್ಲಿಯೇ ತೆಗೆದುಕೊಳ್ಳುತ್ತಿದ್ದು ಹೊತ್ತುಕೊಂಡು ಹೋಗಬೇಕಲ್ಲ ಎನ್ನುವುದು ಒಂದಾದರೆ ಅಲ್ಲೂ ಸಹ ಇದೇ ದರದಲ್ಲಿ ಸಿಗುತ್ತಿದ್ದುದು ಮತ್ತೊಂದು ವಿಶೇಷ. ಮತ್ತೊಂದು ಬಾರಿ ವರ್ಗಾವಣೆ ಚಕ್ರ ಉರುಳಿತು. ಈ ಬಾರಿ ಸುಲೋಚನಾ ಅವರಿಗೆ ಚಾಮರಾಜನಗರದಿಂದ ನಂಜನಗೂಡಿಗೆ ವರ್ಗ ಸಿಕ್ಕಿತ್ತು .ಅದರ ಜೊತೆಯಲ್ಲಿ ಈ ಮೊದಲು ನನ್ನ ಜೊತೆ ವಿಭಾಗೀಯ ಕಚೇರಿಯಲ್ಲಿ ಇದ್ದ ಸುಮಾ ಸಹ ಕೆಆರ್ ಪೇಟೆಯಿಂದ ನಂಜನಗೂಡಿಗೆ ವರ್ಗವಾಗಿ ಬಂದಳು. ನಮ್ಮ ರೈಲಿನಲ್ಲಿ ಓಡಾಡುವ ಬಳಗಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಯಿತು. ಫಾತಿಮಾ ಹಾಗೂ ವೈದೇಹಿ ಅವರು ಅದರ ಮುಂದಿನ ಸುತ್ತಿನಲ್ಲಿ ವರ್ಗವಾಗಿ ಬಂದರು. ಅವರಿಬ್ಬರೂ ಬಸ್ ನಲ್ಲಿ ಓಡಾಡುತ್ತಿದ್ದರು.ಸುಲೋಚನ ಬಂದದ್ದು ಒಂದು ಅನುಕೂಲ ಏನಾಯಿತೆಂದರೆ ಮೈಸೂರಿನಿಂದ ನೀರು ಹೊತ್ತುಕೊಂಡು ಹೋಗುವುದು ತಪ್ಪಿತು. ಅವರ ಮನೆಯಿಂದ ಆಟೋದಲ್ಲಿ ಬರುತ್ತಿದ್ದುದರಿಂದ  ದಿನಾ ನಾನೇ ನೀರು  ತರುತ್ತೇನೆ ಎಂದು ಹೇಳಿದ್ದರು. ರಜೆ ತೆಗೆದುಕೊಳ್ಳದ ಚಿಕ್ಕ ಪುಟ್ಟ ಹಬ್ಬಗಳು ನಂಜನಗೂಡಿನ ದೊಡ್ಡ ಜಾತ್ರೆ ಇಂತಹ ದಿನಗಳೆಲ್ಲ ಅವರ ಮನೆಗೆ ಆಟೋದಲ್ಲಿ ಹೋಗಿ ಊಟ ಮಾಡಿ ಬರುತ್ತಿದ್ದೆವು. ಅವರಿಗೆ ಕಚೇರಿ ಸೇವಾ ವಿಭಾಗವನ್ನು ಕೊಟ್ಟಿದ್ದರು. ಸುಮಾಗೆ ಲೆಕ್ಕ ಪತ್ರ ವಿಭಾಗ. ಈ ಸುತ್ತಿನಲ್ಲಿ ನನಗೆ ಮೊದಲೇ ಹೇಳಿದಂತೆ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಕೊಟ್ಟರು .ಅಲ್ಲಿ ನಾನು ಲೋನ್ಸ್ ಅಂದರೆ ಸಾಲ ವಿಭಾಗಕ್ಕೆನಿಯುಕ್ತಳಾದೆ. ಅಲ್ಲಿ ಆಗ ನಾರಾಯಣಸ್ವಾಮಿ ಅವರು ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದರು. ಆಗೆಲ್ಲ ಒಂದೇ ಸಾವಿರದ ಒಳಗೆ ಸಾಲ ಇದ್ದಾಗ ಅದನ್ನು ನಗದು ರೂಪದಲ್ಲಿಯೇ ಕೊಡುತ್ತಿದ್ದರು .ಹಾಗಾಗಿ ಒಂದು ರೀತಿಯ ಒತ್ತಡದಲ್ಲಿಯೇ ಕೆಲಸ ಮಾಡಬೇಕಿತ್ತು ಆದರೂ ಖುಷಿ ಕೊಡುತ್ತಿತ್ತು. ತುಂಬಾ ಅನಿವಾರ್ಯ ಸ್ಥಿತಿಯಲ್ಲಿ ಸಾಲ ಬೇಕಾದವರಿಗೆ ತಕ್ಷಣ ಮಾಡಿಕೊಟ್ಟಾಗ ಅವರು ತೋರಿಸುತಿದ್ದ ಕೃತಜ್ಞತಾ ಭಾವ ಸಾರ್ಥಕ ಭಾವನೆ ಮೂಡಿಸುತ್ತಿತ್ತು. ಹೋದ ಕೆಲವು ದಿನಗಳಲ್ಲೇ ಅಲ್ಲಿನ ನಿಯತಕಾಲಿಕೆಗಳ ವಿತರಣೆ ಕೆಲಸ ಮತ್ತೆ ಈ ಶಾಖೆಯಲ್ಲಿಯೂ ನನ್ನನ್ನೇ ಅರಸಿ ಬಂದಿತ್ತು ಅದು ತುಂಬಾ ಇಷ್ಟದ ಕೆಲಸವಾದ್ದರಿಂದ ಒಪ್ಪಿಕೊಳ್ಳಲು ನಿರಾಕರಿಸಲಿಲ್ಲ.  ಆಗ ಪಾಲಿಸಿ ಸೇವಾ ವಿಭಾಗದಲ್ಲಿನ ನಮ್ಮ ತಂಡ ತುಂಬಾ ಚೆನ್ನಾಗಿತ್ತು ನಾಗಮಣಿ ಗಿರಿಜಾ ಮತ್ತು ನಾನು ಉನ್ನತ ದರ್ಜೆ ಸಹಾಯಕಿಯರು.  ಈ ಸಮಯದಲ್ಲಿ ತುಂಬಾ ದುಃಖಕರ ಘಟನೆ ಒಂದು ನಡೆಯಿತು .ಹೊಸ ವ್ಯವಹಾರ ವಿಭಾಗದಲ್ಲಿ ನನ್ನ ಜೊತೆಗೆ ಸಹಾಯಕರಾಗಿ ಇದ್ದ ಮಹಾದೇವನ್ ಅವರ ಆಘಾತಕಾರಿ ಸಾವು. ಉತ್ತರ ಭಾರತಕ್ಕೆ ಪತ್ನಿಯೊಂದಿಗೆ ಪ್ರವಾಸ ಹೋಗಿದ್ದಾಗ ಗಂಗಾನದಿಯ ನೀರಿನ ಸೆಳೆತಕ್ಕೆ ಅವರ ಪತ್ನಿ ಕೊಚ್ಚಿ ಹೋದರು .ಅವರನ್ನು ಹಿಡಿಯಲು ಇವರು ಅವರ ಹಿಂದೆಯೇ ಧುಮುಕಿದರು. ಬೇರೆ ನುರಿತ ಈಜುಗಾರರು ಅವರಿಬ್ಬರನ್ನು ದಡಕ್ಕೆ ಎಳೆದು ತರುವಷ್ಟರ ಮಹದೇವನ್ ಅವರ  ಪ್ರಾಣ ಹೋಗಿಬಿಟ್ಟಿತ್ತು. ನಂತರ ಅವರ ಪತ್ನಿಗೆ ಅವರ ಕೆಲಸ ಸಿಕ್ಕಿತು ಇತ್ತೀಚೆಗೆ ಅವರ ಮಗಳ ಮದುವೆಯೂ ಆಯಿತು. ಆದರೂ ಬಹಳ ದಿನಗಳ ಕಾಲ ಕಾಡಿದ ಸಾವು ಅದು. ಮತ್ತೆ ಸಂತೆಯ ವಿಷಯಕ್ಕೆ ಬರುತ್ತೇನೆ. ಈ ಮೊದಲೇ ಹೇಳಿದಂತೆ ಹುಲ್ಲಹಳ್ಳಿ ಸರ್ಕಲ್ ನಿಂದ ಸಂತೆಗೆ ಹೋಗುವ ದಾರಿಯಲ್ಲಿ ಮಧ್ಯೆ ನಮ್ಮ ಆಫೀಸ್ ಇರುವುದು. ಸಂತೆ ನಡೆಯುತ್ತಿರುವುದು ಶುಕ್ರವಾರ. ನಮ್ಮ ಶಾಖೆಯಲ್ಲಿ ಮಹಿಳೆಯರ ಶೌಚಾಲಯ ಕ್ಯಾಶ್ ಕೌಂಟರ್ ನ ಎದುರಿಗೆ ಎಲ್ಲರ ಕಣ್ಣಿಗೆ ಬೀಳುವಂತೆಯೇ ಇತ್ತು .ಸಂತೆಯ ದಿನ ಸಂತೆಗೆ ಹೋಗುವ ಹೆಂಗಸರು ಸಂತೆಯ ಮಾರಾಟಗಾರ್ತಿ ಹೆಂಗಸರು ಎಲ್ಲರಿಗೂ ನಮ್ಮ ಶಾಖೆಯ ಶೌಚಾಲಯ ಒಂದು ಸಾರ್ವಜನಿಕ ಶೌಚಾಲಯದ ತರಹ ಆಗಿ ಹೋಗಿತ್ತು. ಸದಾ ತೆರೆದೇ ಇರುತ್ತಿದುದರಿಂದ ಮುಂಬಾಗಿಲಿನಿಂದ ಪ್ರವೇಶಿಸಿ ನೇರ ಅಲ್ಲಿಗೆ ಹೋಗಿ ಬಿಡುತ್ತಿದ್ದರು .ಪ್ರವೇಶ ನಿಷೇಧ ಎಂಬ ಬೋರ್ಡ್ ಹಾಕಿಸಿದರೂ ಪ್ರಯೋಜನವಾಗಲಿಲ್ಲ. ಮಕ್ಕಳನ್ನು ಕರೆದುಕೊಂಡು ಬಂದು ತುಂಬಾ ಗಲೀಜು ಮಾಡಿ ಇಡೀ ಮಧ್ಯಾಹ್ನ ನಮಗೂ ಅದನ್ನು ಉಪಯೋಗಿಸಲು ಸಾಧ್ಯವಾಗದೆ ಮಹಡಿಯ ಮೇಲಿದ್ದ ಬೇರೊಂದು ಶೌಚಾಲಯವನ್ನು ನಾವು ಸಿಬ್ಬಂದಿಯವರು ಉಪಯೋಗಿಸಿಬೇಕಾಗಿತ್ತು. ಮಾರನೆಯ ದಿನ ಬಂದ ಸ್ವಚ್ಛತಾ ಸಿಬ್ಬಂದಿಯವರು ಶಾಖಾಧಿಕಾರಿಗಳ ಬಳಿ ಅದನ್ನು ಹೇಳಿ ನಂತರದಲ್ಲಿ ಅಲ್ಲಿಗೆ ಬೀಗ ಹಾಕಿ ಬೀಗದ ಕೈ ಸಿಬ್ಬಂದಿಗಳಿಗೆ ಮಾತ್ರ ಗೊತ್ತಿರುವ ಜಾಗದಲ್ಲಿ ಇಡಿಸಲಾಯಿತು .ಒಂದೆರಡು ಮೂರು ವಾರ ಬಂದವರು ಮುಚ್ಚಿದ ಬಾಗಿಲನ್ನು ನೋಡಿ ನಮ್ಮನ್ನು ಕೇಳಿದರು .ಆದರೆ ಅದು ಎಲ್ಲರ ಉಪಯೋಗಕ್ಕೆ ಅಲ್ಲ ಎಂದು ತಿಳಿದ ಮೇಲೆ ನಂತರದಲ್ಲಿ ಜನ ಹಾಗೆ ಬರುವುದು ಕಡಿಮೆಯಾಯಿತು. ಆದರೆ ನಾನು ವಾಪಸ್ ಮೈಸೂರಿಗೆ ಬರುವವರೆಗೂ ಶುಕ್ರವಾರದ ದಿನ ಅದಕ್ಕೆ ಬೀಗ ಹಾಕಿಯೇ ಇಡುತ್ತಿದ್ದೆವು.ಅದು ತಪ್ಪು ನಾವು ಹಾಗೆ ಮಾಡಬಾರದಿತ್ತು ಎಂದೆನಿಸಿದರೂ ಬಂದವರು ಕನಿಷ್ಠ ಸ್ವಚ್ಛತೆಯ ನಿಯಮಗಳನ್ನು ಪಾಲಿಸದೆ ತುಂಬಾ ಗಲೀಜು ಮಾಡಿ ಬಿಡುವುದರಿಂದಲೂ, ಮಧ್ಯಾಹ್ನದ ವೇಳೆ ನಾವು ಆ ಮಹಿಳಾ ಕೊಠಡಿಯಲ್ಲಿ ಊಟ ಮಾಡಬೇಕಾಗಿದ್ದರಿಂದ ಆ ಕೊಳಕನ್ನು ಸಹಿಸಲು ಸಾಧ್ಯವಾಗದಿದ್ದುದು ಈ ನಡೆಗೆ ಕಾರಣವಾಗಿತ್ತು .‌ನಂತರ ಸ್ವಚ್ಛತಾ ಸಿಬ್ಬಂದಿ ವಿರೋಧ ಬಂದ ಮೇಲಂತೂ ನಮ್ಮ ಅಪರಾಧಿ ಮನೋಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ನಾವು ಮಹಿಳಾ ಬೋಗಿಯಲ್ಲೇ ದಿನ ಓಡಾಡುತ್ತಿದ್ದುದು ಎಂದು ಹೇಳಿದೆನಲ್ಲ ಅಲ್ಲಿ ನಮಗೆ ಬೇರೆ ಬ್ಯಾಂಕಿನ ಮತ್ತು ರಾಜ್ಯ ಸರ್ಕಾರಿ ನೌಕರಿಯ ಗೆಳತಿಯರು ಸಿಕ್ಕಿದರು. ಕೆನರಾ ಬ್ಯಾಂಕಿನ ನನ್ನದೇ ಹೆಸರಿನ ಸುಜಾತ ಎನ್ನುವವರು ಅಲ್ಲದೆ ಕಮರ್ಷಿಯಲ್ ಟ್ಯಾಕ್ಸ್ ಆಫೀಸಿನ ಗೀತಾ ಮತ್ತು ಸರಸ್ವತಿ ರಾಜ್ಯ ಸರ್ಕಾರದ ನೌಕರಿಯಲ್ಲಿದ್ದ ಉಮಾ ಮತ್ತು ಇನ್ನೊಬ್ಬರು ಹೆಸರು ಮರೆತು ಹೋಗಿದೆ. ಮತ್ತೆ ಕಡ ಕೊಳದ ಹಿಟ್ಟಿನ ಕಾರ್ಖಾನೆಯಲ್ಲಿ ಕೆಲಸದಲ್ಲಿದ್ದ ಪೂರ್ಣಿಮಾ ಮತ್ತು ಅನಿತಾ  ನಾವೆಲ್ಲ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು. ಉಮಾ ಅವರ ಮನೆಯಲ್ಲಿ ಜಾಜಿ ಹೂ  ಬಿಡುತ್ತಿದ್ದುದರಿಂದ ಅವರು ತರುತ್ತಿದ್ದರು. ಆದರೆ ಕಟ್ಟಲು ಸಮಯವಾಗುತ್ತಿರಲಿಲ್ಲ . ದಿನಾ ರೈಲಿನಲ್ಲಿ ನಾನೇ ಕಟ್ಟಿಕೊಡುತ್ತಿದ್ದೆ . ನನಗೂ  ಅದರಲ್ಲಿ ಪಾಲು ಇರುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ನಾನು ಮನೆಯಲ್ಲಿ ತಿನ್ನಲು ಸಮಯವಾಗದಿದ್ದದರಿಂದ ಹಾಗೂ ಬೇಗ ಆಗುತ್ತಿದುದರಿಂದ ತಿಂಡಿಯನ್ನು ಸಹ ರೈಲಿನಲ್ಲಿ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದೆ. ಆ ಸಮಯದಲ್ಲಿ ಪೂರ್ಣಿಮಾ ಅವರು ಗರ್ಭಿಣಿಯಾಗಿದ್ದರು. ಅವರಿಗೆ ನಮ್ಮ ಮನೆಯ ಮೆಂತ್ಯದ ಹಿಟ್ಟಿನ ಗೊಜ್ಜು ಹಾಗೂ ಹುಳಿ ಅನ್ನ ತುಂಬಾ ಇಷ್ಟವಾಗುತ್ತಿತ್ತು. ಸಾಮಾನ್ಯ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅವರು ಹೆರಿಗೆ ರಜೆ ಹೋಗುವ ಮೊದಲು ನಾವು ನಮ್ಮ ಬೋಗಿಯಲ್ಲಿ  ಅವರಿಗೆ ಒಂದು ಸೀರೆ ಬಳೆ ಮಲ್ಲಿಗೆ ಹೂವು ಕೊಟ್ಟು ಅಂದಿನ ದಿನ ಸಿಹಿ ತಿನಿಸು ಮಾಡಿ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು. ಆನಂತರದಲ್ಲಿ ಅವರು ನನ್ನ ತಂಗಿಯ ಪತಿ ಮುರಳಿ ಅವರ ಸಂಬಂಧಿ ಎಂದು ತಿಳಿಯಿತು. ಈಗಲೂ ಅವರ ಸಂಪರ್ಕ ಇದೆ ಸರಸ್ವತಿ ಅವರ ಮಗನ ಮದುವೆಗೆ ಆಹ್ವಾನಿಸಿದ್ದರು. ಅದಕ್ಕೂ ಹೋಗಿದ್ದೆ .ಈಗ ಅವರು ಎಲ್ಲ ನಿವೃತ್ತರಾಗಿರಬಹುದು. ಇತ್ತೀಚೆಗೆ ನನ್ನ ಗೆಳತಿ ಸಹೋದ್ಯೋಗಿ ಮಂಗಳಾಂಬ ಅವರ ಮಗನ ಮದುವೆಯಲ್ಲಿ ಉಮಾ ಮತ್ತು ಪರಮೇಶ್ವರ ಅವರು ಸಿಕ್ಕಿದ್ದರು. ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡೆವು ಈಗ ಅವರು ಸಹ ಸಂಪರ್ಕದಲ್ಲಿ ಇದ್ದಾರೆ.ತುಂಬಾ ಚೆನ್ನಾಗಿ ಬಾಂಧವ್ಯ ಇತ್ತು. ರೈಲಿನಲ್ಲಿ ಓಡಾಡುವುದೆಂದರೆ ತುಂಬಾ ಸಂತೋಷವಾಗುತ್ತಿತ್ತು. ಗೆಳತಿಯರು ಅಷ್ಟೇ ಅನ್ಯೋನ್ಯವಾಗಿದ್ದೆವು. ಅದನ್ನೆಲ್ಲ ನೆನೆದರೆ ತುಟಿ ಅಂಚಿನಲ್ಲಿ ಮುಗುಳ್ನಗೆ ಬಿರಿಯುತ್ತದೆ. ಖುಷಿಯ ಕ್ಷಣಗಳು ನೆನಪಾಗುತ್ತದೆ. ಸವಿ ನೆನಪುಗಳು ಬೇಕು ಸವಿಯಲೀ ಬದುಕು ಅಲ್ಲವೇ?(ಮುಂದುವರೆಯುವುದು) ಸುಜಾತಾ ರವೀಶ್

Read Post »

ಪುಸ್ತಕ ಸಂಗಾತಿ

ಡಾ. ನೀ. ಗೂ ರಮೇಶ್ ಅವರ “ಗಾಂಧೀಮರ” ಕೃತಿಯ ಅವಲೋಕನ ಶೋಭಾ.ಬಿ ಅವರಿಂದ

ಪುಸ್ತಕ ಸಂಗಾತಿ ಶೋಭಾ.ಬಿ ಡಾ. ನೀ. ಗೂ ರಮೇಶ್ “ಗಾಂಧೀಮರ” ನಿರಾಶ್ರಿತ ಮನಗಳಿಗೆ ನೆರಳನ್ನು ನೀಡುವ ಗಾಂಧೀಮರ   ಡಾ. ನೀ. ಗೂ ರಮೇಶ್ ಅವರ ಗಾಂಧೀಮರ ಕವಿತೆಯು ಜಗತ್ತಿಗೆ ಗಾಂಧಿ ತತ್ವಗಳ ಅವಶ್ಯಕತೆಯನ್ನು ತನ್ನೊಳಗೆ ಬಹಳ ಗೌಣವಾಗಿಸಿಕೊಂಡು ಸಹೃದಯನ ಚಿತ್ತವನ್ನು ಹಿಡಿದಿಟ್ಟುಕೊಳ್ಳುವ ಒಂದು ಕವಿತೆ. ಶೀರ್ಷಿಕೆಯೇ ನಮ್ಮನ್ನು ಹಲವಾರು ಚಿಂತನೆಗಳಿಗೆ ಒಳಪಡುವಂತೆ ಮಾಡುತ್ತದೆ. ಹಾಗೆಯೇ ಗಾಂಧೀಮರ ಕೃತಿಯೂ ಕೂಡ ವಿವಿಧ ಶೀರ್ಷಿಕೆಗಳ ಕವಿತೆಗಳ ರಸದೌತಣವನ್ನು ಉಣಬಡಿಸುತ್ತದೆ. ಕಾವ್ಯ ಎನ್ನುವುದು ಕವಿಯ ಸುಪ್ತಭಾವಗಳ ಅಕ್ಷರ ರೂಪದ ಅಭಿವ್ಯಕ್ತಿ. ಭಾವಗಳು ಕೇವಲ ಭಾವನಾತ್ಮಕವಾದವುಗಳಲ್ಲ ಅಥವಾ ವೈಯಕ್ತಿಕ ಪ್ರೀತಿ ಪ್ರೇಮದ ಕಾವ್ಯಗಳಲ್ಲ. ಅವು ಸಮಾಜಮುಖಿಯೂ ಆಗಿರಬೇಕು. ಅಂತಹ ಅಮೂಲ್ಯವಾದ ಸಮಾಜದ ಓರೆಕೋರೆಗಳಿಗೆ ಕೈಗನ್ನಡಿಯಂತಿವೆ ಗಾಂಧೀಮರ ಕೃತಿಯಲ್ಲಿನ ಕವನಗಳು. ಇದರಲ್ಲಿರುವ ೭೭ ಕವಿತೆಗಳು ಒಂದಕ್ಕೊAದು ವಿಭಿನ್ನ ಚಿತ್ರಣವನ್ನು ನೀಡುತ್ತವೆ. ಇದರ ಮೂಲಕ ಡಾ. ನಿ ಗೂ ರಮೇಶ್ ಅವರ ಕಾವ್ಯ ಪ್ರತಿಭೆಯು ಉತ್ತುಂಗಕ್ಕೇರಿದೆ.  ಇವರ ಗಾಂಧೀಮರ ಕವಿತೆಯಲ್ಲಿಯೇ ಗುಲಾಮಗಿರಿಯಿಂದ ಭಾರತವನ್ನು ತಪ್ಪಿಸಲು ಮಹಾತ್ಮರ ಅವಶ್ಯಕತೆ ಎಷ್ಟಿತ್ತು , ಮಹಾತ್ಮರ ಹೆಮ್ಮರದ ನೆರಳು ದೇಶದಗಲ ಹರಡಿ ಶಾಂತಿ, ಅಹಿಂಸೆಗಳಿAದ ಹಾರಾಡುತ್ತಿದ್ದ ಸ್ವಾತಂತ್ರದ ಹಕ್ಕಿಯು ದೇಶಕ್ಕೆ ಬಿಡುಗಡೆಯ ಸನ್ಮಾನವನ್ನು ಸಲ್ಲಿಸಿದ ಗಾಂಧಿಯ ಅವಶ್ಯಕತೆ ಎಷ್ಟಿತ್ತು ಎನ್ನುವುದನ್ನು ಬಿಂಬಿಸುವ ಕವನವಾಗಿದೆ. ಅದೇ ರೀತಿ ಆ ಗಾಂಧಿಮರದ ಬುಡಕ್ಕೆ ಕೋವಿಯ ಕೊಡಲಿಯಿಟ್ಟು ಭಾವೈಕ್ಯತೆಯ ಭಾವ ಕೆರಳಿಸಿ ಜಗ ಮರುಗುವಂತೆ ಮಾಡಿದ್ದನ್ನು ಕಣ್ಣಿನ ಮುಂದೆ ಕಟ್ಟಿಡುತ್ತದೆ ಈ ಕವನ ಹಾಗೆಯೇ ಕೆಳಗುರುಳಿದರೂ ಅಂತಹ ಎಷ್ಟೋ ಗಾಂಧಿಮರಗಳು ಪಸರಿಸಿದರೂ ಮರಗಳನ್ನು ಉರುಳಿಸುವ ಪ್ರಯತ್ನ ಮಾತ್ರ ನಿಲ್ಲುತ್ತಿಲ್ಲ ಎನ್ನುವ ವಿಷಾದ ಕಾವ್ಯದಲ್ಲಿ ಅಡಗಿದೆ.ಹಾಗೆಯೇ ಸಹೃದಯನನ್ನು ಸೆಳೆಯುವ ಹಲವು ಕವನಗಳು ಇಲ್ಲಿವೆ. ಬೇಲಿ ಹಾಕಬೇಡಿಮಹಾಚೇತನಗಳಿಗೆಜಾತಿ, ಮತ, ಧರ್ಮಗಳೆಂಬಇದ್ದತೆಯೇ ಇರಲಿ ಬಿಡಿಹೇಗೆ ಇದ್ದರೂಅವು ದೀಪ ಸ್ತಂಭ ಇಂದು ಜಗತ್ತು ಎಷ್ಟೇ ಅಬಿವೃದ್ಧಿ ಹೊಂದುತ್ತಿದ್ದರೂ ಸಹ ಸಾಧಕನ ಸಾಧನೆಯನ್ನಷ್ಟೇ ಪುರಸ್ಕರಿಸದೆ ಅವನ ಜಾತಿ ಧರ್ಮವನ್ನು ಹಿಡಿದು ಜರಿಯುವುದರ ವಿರುದ್ಧ ಧ್ವನಿ ಇದಾಗಿದೆ. ಕಿಟಕಿ ಮತ್ತು ಕನ್ನಡಿ ಕವಿತೆಯಲ್ಲಿಈ ನಾಡಿಗೊಂದು ಕಿಟಕಿ ಇದೆಭಾಷೆ ಗಡಿ ಗೋಡೆಗಳ ಕಟ್ಟಿ ಬೀಗಲುಇರುವ ಕಿಟಕಿಯ ಮುಚ್ಚಿಧರ್ಮ ಜಾತಿಗಳ ಬೇರು ಹುಡುಕಲುಕತ್ತಲಲ್ಲಿ ಕಣ್ಣು ಕಟ್ಟಿಗೌಪ್ಯವಾಗಿ ಗುದ್ದಾಡಲು ಎನ್ನುವ ಸಾಲುಗಳಲ್ಲಿ ಮತ್ತೆ ಮತ್ತೆ ಜಾತಿಧರ್ಮಗಳ ಬಗೆಗೆ ಜಗತ್ತಿನ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇಂದು ಹಸುಳೆಗಳ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಹತ್ತಿಕ್ಕಲು,  ಅಲ್ಪ ಸುಖಕ್ಕಾಗಿ ಅಡ್ಡದಾರಿಗಳನ್ನು ಹುಡುಕುತ್ತಿರುವ ಜನರನ್ನು ಬದಲಿಸಲು ಹೊಸ ಕಿಟಕಿಯೊಂದು ಬೇಕಾಗಿದೆ. ಅದಕ್ಕಾಗಿ ನಾನೇಒಂದು ಕಿಟಕಿಯಾಗಬೇಕಾಗಿದೆ ಎನ್ನುವ ಕವಿಯ ಕಾಳಜಿ ನಿಜಕ್ಕೂ ಶ್ಲಾಘನೀಯವಾದದ್ದು.ಹಾಗೆಯೇ ಕ್ಷಮಿಸಿ ಬಿಡಿ ಬಸವಣ್ಣ ಕವಿತೆಯಲ್ಲಿ ಲೋಕದ ಡೊಂಕು ತಿದ್ದಿಸಮತೆಯ ಕನಸು ಬಿತ್ತಿಎಚ್ಚರಿಸಿದ ನುಡಿ ಕಿಡಿಗಳುಕಪಟಭಕ್ತನ ಸರಕಾದವು! ಎನ್ನುತ್ತಾ ಕವಿಯು ಬಸವ ತತ್ವವನ್ನು ಜನತೆ ತಪ್ಪಾಗಿ ಅರ್ಥೈಸಿಕೊಂಡಿರುವ ಜನತೆಯ ಪರವಾಗಿ ಬಸವಣ್ಣನಲ್ಲಿ  ಕ್ಷಮೆಯನ್ನು ಯಾಚಿಸಿದ್ದಾರೆ. ನಮಗೇನೂ ಅನಿಸುವುದೇ ಇಲ್ಲ ಕವಿತೆಯಲ್ಲಿ ದೇವರಿಗಿಂತ ಪೂಜಾರಿಯ ನಂಬಿಮಣ್ಣಿಗಿಂತ ಮಾರುಕಟ್ಟೆಯ ನಂಬಿಆಹಾರಕ್ಕಿಂತ ಔಷಧಿಯ ನಂಬಿನೆಮ್ಮದಿ ಕಳೆದುಕೊಳ್ಳುತ್ತೇನೆನಮಗೇನೂ ಅನಿಸುವುದೇ ಇಲ್ಲ! ಎನ್ನುತ್ತಾ ಇಂದಿನ ಜನರ ಮನಸ್ಥಿತಿಯನ್ನು ಇಡೀ ಕವಿತೆಯಲ್ಲಿ ಅರ್ಥಪೂರ್ಣವಾಗಿ ಹೆಣೆದಿದ್ದಾರೆ. ಜಗತ್ತಿನಲ್ಲಿ ಅಕ್ರಮ ಅತ್ಯಾಚಾರ, ಕೊಲೆ ಸುಲಿಗೆ ಮೋಸ ಮಾಡಿದವರನ್ನೇ ಮೆರೆಸುವವರಿಗೆ ಶಾಲು ಸುತ್ತಿ ಹೊಡೆದಂತೆ ಬಡಿದೆಚ್ಚರಿಸಿದ್ದಾರೆ. ಸಮಾಜದಲ್ಲಿ ಆಗುವ ಅಥವಾ ನಡೆಯುವ ಅದೆಷ್ಟೋ ಸಂಗತಿಗಳಿಗೆ, ಅಪಘಾತ ಅವಘಡಗಳಿಗೆ ತಲೆಕೆಡಿಸಿಕೊಳ್ಳದೇ ವ್ಯವಸ್ಥೆಯನ್ನೇ ಕಾನೂನನ್ನೇ ನಿಂದಿಸುವವರನ್ನು ಹೀಗಳೆದು ವಿಡಂಬಿಸಿದ್ದಾರೆ.ಇAತಹ ಅದೆಷ್ಟೋ ವಿಚಾರಗಳನ್ನು ಹೊತ್ತ ಗಾಂಧೀಮರ ಕೃತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ಕೊಡುಗೆಯಾಗಿದೆ. ಈ ಕೃತಿಯನ್ನು ಕನ್ನಡಿಗರ ಚಿಂತನಾ ಲೋಕಕ್ಕೆ ಅರ್ಪಿಸಿದ್ದಕ್ಕಾಗಿ ಅಪ್ರತಿಮ ಕವಿಗಳಾದ ಡಾ. ನಿ.ಗೂ ರಮೇಶ್ ಅವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶೋಭಾ ಬಿ

ಡಾ. ನೀ. ಗೂ ರಮೇಶ್ ಅವರ “ಗಾಂಧೀಮರ” ಕೃತಿಯ ಅವಲೋಕನ ಶೋಭಾ.ಬಿ ಅವರಿಂದ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ‌ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ‌ ಗಜಲ್ ಚಂದ್ರ,ತಾರೆಗಳು ನಾ ಕೈ ಚಾಚಿದರೇ ಸಿಕ್ಕಿ ಬಿಡುವಷ್ಟು ಹತ್ತಿರದಲ್ಲಿರಬೇಕಿತ್ತುನಿದಿರೆಯು ರೆಪ್ಪೆ ಮುಚ್ಚುವ ಮುನ್ನ ಕಣ್ಣ ಸೇರುವಷ್ಟು ಹತ್ತಿರದಲ್ಲಿರಬೇಕಿತ್ತು ಪೂರ್ವದಿಂದ ಪಶ್ಚಿಮದೆಡೆಗೆ,ಬೆಳಕಿನೊಂದಿಗೆ  ದಿನವೂ ರವಿಯ ಪಯಣಗೂಡುಗಳು,ರೆಕ್ಕೆ ದಣಿಯುವುದರೊಳಗೆ ಸಿಗುವಷ್ಟು ಹತ್ತಿರದಲ್ಲಿರಬೇಕಿತ್ತು ಬಾನಂಗಳದಿ ಚೆಲ್ಲಿದ ಬೆಳದಿಂಗಳದು ನಗುವಿನ ನೆಮ್ಮದಿಯ ಮಡಿಲಿನಂತಿದೆಹುಣ್ಣಿಮೆಯು,ಹಗಲಾಗುವುದರೊಳಗೆ ನಾ ಮುಟ್ಟುವಷ್ಟು ಹತ್ತಿರದಲ್ಲಿರಬೇಕಿತ್ತು ಜಗದ ಸಂತೆಯಲಿ ಅತೀ ಬೇಡಿಕೆಯ,ಮಾರಾಟಕ್ಕಿಡದ ಮೋಹವೊಂದೂ ಇದೆಪ್ರೀತಿಯು,ನಾ ನಗುತ ಕಣ್ಣೆತ್ತಿ ನೋಡಿದರೇ ಕಾಣುವಷ್ಟು ಹತ್ತಿರದಲ್ಲಿರಬೇಕಿತ್ತು ವಾಣಿಯ ಜೀವ,ಜೀವನದ ಜಂಜಾಟಗಳೆದುರು ನಿಡುಸುಯ್ಯುತ ಬಿಕ್ಕುತಿದೆಶಿವನ ಸಂತೈಕೆ,ನಾ ಸೋಲುವುದರೊಳಗೆ ಸೋಕುವಷ್ಟು ಹತ್ತಿರದಲ್ಲಿರಬೇಕಿತ್ತ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ‌ ಅವರ ಗಜಲ್ Read Post »

You cannot copy content of this page

Scroll to Top