ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ-“ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ” ದೇಶವುಕಂಡ ಅಪರೂಪದ ಶ್ರೇಷ್ಠ ನೀರಾವರಿ ತಜ್ಞ ಕರ್ನಾಟಕಕ್ಕೆ ನೀರಿನ ಹಕ್ಕಿನ ಹಕ್ಕಿನ. ಬಗ್ಗೆ ನಿರಂತರ ಹೋರಾಟ ಮಾಡುತ್ತಲೆ ನ್ಯಾಯ ಒದಗಿಸುತ್ತಿದ್ದ ಉತ್ತರ ಕರ್ನಾಟಕದ ಬೆಳಗಾವಿ ಮೂಲದ ಲಿಂಗೈಕ್ಯ ಶ್ರೀ ಎಸ್ ಜಿ ಬಾಳೆಕುಂದ್ರಿ ಅವರು. ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿ ಎಸ್. ಜಿ. ಬಾಳೆಕುಂದ್ರಿಯವರು ಕರ್ನಾಟಕದ ಶ್ರೇಷ್ಠ ನೀರಾವರಿ ತಜ್ಞ ಇಂಜನಿಯರರು. ತಮ್ಮ ಬುದ್ದಿಮತ್ತೆ,ದಕ್ಷತೆ, ಪರಿಶ್ರಮ ಹಾಗು ಪ್ರಾಮಾಣಿಕ ಸೇವೆ ಇವುಗಳಿಗಾಗಿ ಬಾಳೆಕುಂದ್ರಿಯವರು ಕರ್ನಾಟಕದಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದಾರೆ  ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ನೀರಾವರಿ ತಜ್ಞರಲ್ಲಿ ನೆನಪಿಗೆ ಬರುವ ಒಂದೇ ಒಂದು ಹೆಸರೆಂದರೆ ಸರ್ ಎಂ ವಿಶ್ವೇಶ್ವರಯ್ಯನವರದು. ಆದರೆ ಅವರಷ್ಟೇ ಸಮರ್ಥರಾದ ಇಂಜಿನಿಯರೊಬ್ಬರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರೇ ಎಸ್ ಜಿ ಬಾಳೆಕುಂದ್ರಿ.  ಉತ್ತರ ಕರ್ನಾಟಕದ ಮಹಾದಾಯಿಯ ಬಗ್ಗೆ ಕೂಡ ಆಲೋಚನೆ ಅಧ್ಯಯನ ಮಾಡಿದ್ದರು. ಜನನ ಶಿವಪ್ಪ ಬಾಳೆಕುಂದ್ರಿಯವರು 1922  ಮೇ 5 ರಂದು ಬೆಳಗಾವಿಯಲ್ಲಿ ಜನಿಸಿದರು. ಇವರ ತಾಯಿ ಲಕ್ಷ್ಮೀದೇವಿ; ತಂದೆ ಗುರುಸಿದ್ದಪ್ಪ. ಶಿಕ್ಷಣ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಅಕ್ಕಿಹೊಂಡದ ಮುನಿಸಿಪಾಲಿಟಿ ಕನ್ನಡ ಶಾಲೆಯಲ್ಲಿ ಮುಗಿಸಿ, ಕೊಪ್ಪೀಕರ ಪ್ರೌಢಶಾಲೆಯಲ್ಲಿ ಎರಡು ವರ್ಷ ಕಲಿತು, ತರವಾಯ ಬೆಳಗಾವಿಯ ಸರದಾರ ಹೈಸ್ಕೂಲ್ ಸೇರಿದರು.  ಲಿಂಗರಾಜ ಕಾಲೇಜಿನಿಂದ ಇಂಟರ ಸಾಯನ್ಸ್ ವಿಷಯದ ಮೇಲೆ ಅಧ್ಯಯನ ನಡೆಸಿ ತೇರ್ಗಡೆಯಾದರು. ಆ ಬಳಿಕ ಪುಣೆಯಲ್ಲಿದ್ದ ಸರಕಾರಿ ಇಂಜನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದು 1944 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. 1947 ರಲ್ಲಿ ಎಡಿನ್ಬರೊ ವಿಶ್ವವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಪದವಿ ಸಂಪಾದಿಸಿಕೊಂಡರು. ವೃತ್ತಿ ಮತ್ತು ಉದ್ಯೋಗ 1945 ರಲ್ಲಿ ಆಗಿನ ಮುಂಬಯಿ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜನಿಯರ ಆದರು. ಮುಂಬಯಿ ಸರಕಾರ ಇವರನ್ನು ನೀರಾವರಿ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಡಿನ್ಬರೊ ವಿಶ್ವವಿದ್ಯಾಲಯಕ್ಕೆ ಕಳುಹಿಸಿತು. ಅನಂತರ ಹಾಲಂಡ್, ಸ್ವಿಡನ್, ಮತ್ತು ಇತರ ಕೆಲವು ಬಾಲ್ಟಿಕ್ ರಾಜ್ಯಗಳನ್ನು ಸಂದರ್ಶಿಸಿದರು. ವಿದೇಶದಿಂದ ಹಿಂದಿರುಗಿದ ನಂತರ ಪುಣೆ ವಿಭಾಗದ ನೀರಾವರಿ ಕಾಲುವೆಗಳ ಕೆಲಸವನ್ನುನಿರ್ವಹಿಸಿದರು. ನಂತರ ನಾಸಿಕ ಬಳಿ ನಿರ್ಮಾಣವಾಗುತ್ತಿದ್ದ ಗಂಗಾ ಆಣೆಕಟ್ಟಿನ ಉಸ್ತುವಾರಿ ಮಾಡಿದರು. ಆ ಬಳಿಕ ಧೂಲಿಯಾ ಆಣೆಕಟ್ಟು ಮತ್ತು ಅಹ್ಮದ ನಗರ ವಿಭಾಗದ ಉಸ್ತುವಾರಿ ನಿರ್ವಹಿಸಿದರು. 1956 ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯ ನಂತರ ಕರ್ನಾಟಕಕ್ಕೆ ಬಂದ ಬಾಳೆಕುಂದ್ರಿಯವರು ಕೆಲಕಾಲ ಉಪಪ್ರಧಾನ ಇಂಜನಿಯರ ಆಗಿ ಸೇವೆ ಸಲ್ಲಿಸಿದರು. ಆ ನಂತರ ಇವರ ಸೇವೆಯನ್ನು ಕೇಂದ್ರ ಸರಕಾರಕ್ಕೆ ಎರವಲು ನೀಡಲಾಯಿತು. ಅಲ್ಲಿ ಇವರು ಭಾರತ ಸರಕಾರದ ಪ್ಲ್ಯಾನಿಂಗ್ ಕಮಿಶನ್ “ನೀರಾವರಿ ಮತ್ತು ಚೈತನ್ಯ” ತಂಡದ ಸಹಾಯಕರಾಗಿಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯವನ್ನು ಬಾಳೆಕುಂದ್ರಿಯವರು ಗಮನಿಸಿ ಕರ್ನಾಟಕದ ಲೋಕಸಭಾ ಸದಸ್ಯರ ಗಮನಕ್ಕೆ ತಂದರು. ಇದರಿಂದ ಪ್ರಭಾವಿತರಾದ ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ಬಿ.ಡಿ.ಜತ್ತಿಯವರು ಬಾಳೆಕುಂದ್ರಿಯವರನ್ನು ರಾಜ್ಯಕ್ಕೆ ಮರಳಿ ಕರೆಯಿಸಿಕೊಂಡರು. 1959 ರಲ್ಲಿ ಮರಳಿ ರಾಜ್ಯಕ್ಕೆ ಬಂದ ನಂತರ ಅಂತರರಾಜ್ಯ ನದಿ ವಿವಾದ ವಿಷಯದ ಹೊಣೆ ಹೊತ್ತುಕೊಂಡ ಬಾಳೆಕುಂದ್ರಿಯವರು ಕರ್ನಾಟಕದ ನ್ಯಾಯಬದ್ಧ ಹಕ್ಕಿಗಾಗಿ ಸಮರ್ಥವಾಗಿ ಹೋರಾಡಿದರು. 1964 ರಲ್ಲಿ ಮುಖ್ಯ ಇಂಜನಿಯರ ಆಗಿ ಪದೋನ್ನತಿ ಪಡೆದು, ಬೃಹತ್ ನೀರಾವರಿ ಯೋಜನೆಗಳ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1967 ರಿಂದ 1972 ರ ವರೆಗೆ ನೀರಾವರಿ ಇಲಾಖೆಯ ಉತ್ತರ ವಿಭಾಗದ ಮುಖ್ಯ ಇಂಜನಿಯರ ಎಂದು ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಬಾಳೆಕುಂದ್ರಿಯವರು ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ನಿರ್ಮಾಣಗಳಲ್ಲಿ ಮಹತ್ವದ ಪಾತ್ರ ವಹಿಸಿದರು. 1974 ರಿಂದ 1976 ರ ವರೆಗೆ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿಯಾಗಿ ಹಾಗು 1976 ರಿಂದ 1977ರ ವರೆಗೆ ನೀರಾವರಿ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, 1977 ಮೇದಲ್ಲಿ, ಅಂದರೆ ತಮ್ಮ 55 ನೆಯ ವಯಸ್ಸಿನಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾದರು. ನಿವೃತ್ತಿಯ ನಂತರವೂ, ತುಂಗಭದ್ರಾ ಯೋಜನೆಯ ಮಾರ್ಪಾಡಿನ ತಜ್ಞ ಸಲಹಾ ಸಮಿತಿಯ ಅಧ್ಯಕ್ಷ, ಬಾಗಲಕೋಟೆ ಪುನರ್ನಿರ್ಮಾಣ ಮತ್ತು ಪುನರ್ವಸತಿ ಪರಿಶೀಲನಾ ಸಮಿತಿ ಅಧ್ಯಕ್ಷ, ಬೃಹತ್ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಳದ ಅಧ್ಯಕ್ಷ ಕರ್ನಾಟಕದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ನೇಮಿಸಿದ ಏಕಸದಸ್ಯ ಸಮಿತಿ ಅಧ್ಯಕ್ಷ ಹೀಗೆ ವಿವಿಧ ಸಾಮರ್ಥ್ಯಗಳಲ್ಲಿ ಕರ್ನಾಟಕಕ್ಕೆ ಸೇವೆಸಲ್ಲಿಸಿದರು. (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 1-4-1998 ರಲ್ಲಿ ಸಾಕಾರಗೊಂಡಿತು). ದುರಂತ ಮರಣ ದಿನಾಂಕ 4-1-1993 ರಂದು ಸಂಜೆ ಬಾಳೆಕುಂದ್ರಿಯವರು ವಾಯುವಿಹಾರಕ್ಕೆ ಹೋದ ಸಮಯದಲ್ಲಿ ಬೇಜವಾಬ್ದಾರಿ ಆಟೊ ಚಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮವಾಗಿ ಪ್ರಜ್ಞಾಹೀನ ಅವಸ್ಥೆಯಲ್ಲಿ ಅಸ್ಪತ್ರೆಗೆ ಸೇರಿಸಲ್ಪಟ್ಟರು. 1993 ಜನೆವರಿ 8 ರಂದು ಅದೇ ಅವಸ್ಥೆಯಲ್ಲಿಯೆ ಬಾಳೆಕುಂದ್ರಿಯವರು ಕೊನೆಯುಸಿರೆಳೆದರು. ಬಡ ವಿದ್ಯಾರ್ಥಿಗಳಿಗಾಗಿ ಶಿವಕಮಲ ಟ್ರಸ್ಟ್ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ, ವಿಶೇಷತಃ ತಾಂತ್ರಿಕ ಶಿಕ್ಷಣದಲ್ಲಿ ಧನಸಹಾಯ ಮಾಡಲು ಒಂದು ಟ್ರಸ್ಟ ಅನ್ನು ರೂಪಿಸುವದು ಶ್ರೀ ಬಾಳೆಕುಂದ್ರಿ ಹಾಗು ಶ್ರೀಮತಿ ಬಾಳೆಕುಂದ್ರಿಯವರ ಕನಸಾಗಿತ್ತು. ಶ್ರೀಬಾಳೆಕುಂದ್ರಿಯವರ ನಿಧನದ ನಂತರ ಶ್ರೀಮತಿ ಕಮಲಾ ಬಾಳೆಕುಂದ್ರಿಯವರು “ ಶಿವಕಮಲ ಟ್ರಸ್ಟ್ ” ಸ್ಥಾಪಿಸುವ ಮೂಲಕ ತಮ್ಮೀರ್ವರ ಕನಸನ್ನು ನನಸಾಗಿಸಿದರು. ಗೌರವ ಸನ್ಮಾನ ತಮ್ಮ ಪ್ರತಿಭೆ, ದಕ್ಷತೆ ಹಾಗು ಸಚ್ಚಾರಿತ್ರ್ಯದಿಂದ ಬಾಳೆಕುಂದ್ರಿಯವರು ಕರ್ನಾಟಕದ ನೀರಾವರಿ ಯೋಜನೆಗಳಿಗೆ ಮಹತ್ವಪೂರ್ಣ ಕಾಣಿಕೆ ನೀಡಿದ್ದಾರೆ ಹಾಗು ಕರ್ನಾಟಕ ನೀರಾವರಿ ಇಲಾಖೆಯಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದು ಹೆಸರಾಗಿದ್ದಾರೆ. ಮಲಪ್ರಭಾಎಡದಂಡೆಕಾಲುವೆಗೆಬಾಳೆಕುಂದ್ರಿಕಾಲುವೆಎಂದುಹೆಸರಿಟ್ಟುಸರಕಾರಇವರನ್ನುಗೌರವಿಸಿದೆ. 1987 ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು. 1998 ರಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಸಂಸ್ಥೆಯ ಎದುರಿನ ವೃತ್ತಕ್ಕೆ ಬಾಳೆಕುಂದಿ ವೃತ್ತ ಎಂದು ನಾಮಕರಣ ಮಾಡಲಾಯಿತು. 1999ರಲ್ಲಿಘಟಪ್ರಭಾಜಲಾಶಯದಲ್ಲಿಬಾಳೆಕುಂದ್ರಿಯವರಪ್ರತಿಮೆಯನ್ನುಅನಾವರಣ ಮಾಡಲಾಯಿತು. 2004 ರಲ್ಲಿ ಧಾರವಾಡದ ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಸಂಸ್ಥೆಯ ಮುಂದಿನ ರಸ್ತೆಗೆ ಎಸ್.ಜಿ.ಬಾಳೆಕುಂದ್ರಿ ಮಾರ್ಗ ಎಂದು ಹೆಸರಿಡಲಾಯಿತು. ಕರ್ನಾಟಕಸರಕಾರವು 2001 ರಿಂದ ಪ್ರತಿ ವರ್ಷನೀರಾವರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇಲಾಖೆಯ ಇಂಜನಿಯರರಿಗೆ ಬಾಳೆಕುಂದ್ರಿಯವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. 5 ಮೇ , 2006 ರಂದು ಅಂದರೆ ಬಾಳೆಕುಂದ್ರಿಯವರ 85 ನೆಯ ಜನ್ಮದಿನದಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಆಣೆಕಟ್ಟಿನ ವೃತ್ತದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ಆಣೆಕಟ್ಟು ನಿರ್ಮಾಣದಲ್ಲಿ ಶ್ರೀ ಎಸ್ ಜಿ ಬಾಳೆಕುಂದ್ರಿ ಅವರ ಪಾತ್ರ ಬಹಳ ದೊಡ್ದದು. ಸಮಗ್ರಹಸಿರುಕ್ರಾಂತಿಯಹರಿಕಾರನೀರಾವರಿಯತಜ್ಞಸಾಮಾಜಿಕಚಿಂತಕಎಸ್ಜಿಬಾಳೆಕುಂದ್ರಿ ಅವರಿಗೆ ನಮ್ಮ ನೂರು ನಮನಗಳು. ________________________ *ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಸಾವಿಲ್ಲದ ಶರಣರು ಮಾಲಿಕೆ-“ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಇತರೆ

ಹಾಸ್ಯಬರಹ ಗೊರೂರು ಅನಂತರಾಜು ಅವರ ಲೇಖನಿಯಿಂದ “ನಿಮ್ಮಪ್ಪ ಏನಂತಾ ಕರೀತಾರೆ..ಈಡಿಯಟ್..ಸ್ಟುಪಿಡ್..!”

ಹಾಸ್ಯ ಸಂಗಾತಿ ಗೊರೂರು ಅನಂತರಾಜು “ನಿಮ್ಮಪ್ಪ ಏನಂತಾ ಕರೀತಾರೆ.. ಈಡಿಯಟ್..ಸ್ಟುಪಿಡ್..!” ಮುದ್ದಣ್ಣ: ಮನೋರಮೆ, ನೀನು ಯುಗಾದಿ ಹಬ್ಬಕ್ಕೆ ಮಾಡಿರುವ ಪಾಯಸ ತುಂಬಾ ರುಚಿಯಾಗಿದೆ ಕಣೆ.ಮನೋರಮೆ: ಅದಕ್ಕೆ ಬೆಕ್ಕು ಬಾಯಿ ಹಾಕಿರದೆ ಇದ್ದಿದ್ರೇ..ಚೆನ್ನಾಗಿರುತ್ತಿತ್ತು. ಮು: ರಾತ್ರಿ ಒಂಭತ್ತು ಗಂಟೇಲಿ ಎಲ್ಲಿಗ್ಹೊರಟೆ..?ಮ: ನರಕಕ್ಕೆ.. ಇಲ್ಲಿ ಮೂರ‍್ಹೊತ್ತು ನಿಮ್ಮತ್ರ ಜಗಳ ಆಡ್ಕೊಂಡು ಇರೋದಕ್ಕಿಂತ ಅಲ್ಲಿ ಇರೋದೆ ವಾಸಿ.ಮು: ನರಕದಲ್ಲಿರುವ ನಿನ್ನ ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು. ಸದ್ಯ ಸರ್ಕಾರದ ಉಚಿತ ಬಸ್ಸಿನಲ್ಲಿಯೇ ಸಾವಕಾಶವಾಗಿ ಹೋಗಿ ಬಾ. ಮ: ರೀ, ನೀವು ಈ ರೀತಿ ಜಗಳ ಆಡ್ತಿದ್ರೆ ಅಕ್ಕಪಕ್ಕ ಮನೆಯವರಿಗೆ ಕೇಳಿಸುತ್ತೆ..ಮು: ಸರಿ ಹಾಗಾದ್ರೇ, ಬೇರೆ ಯಾವ ರೀತಿ ಜಗಳ ಆಡಬೇಕು ಅಂತ ನೀನೇ ಹೇಳು. ದಿನಾ ರಾತ್ರಿ ಬಿಗ್ ಬಾಸ್ ಹಾಕ್ಕೊಂಡು ನೋಡ್ತ ಇರ‍್ತಿಯಲ್ಲಾ.. ಅದು ಅಕ್ಕಪಕ್ಕ ಮನೆಗೆ ಹಾಗೇ ಕೇಳಿಸುತ್ತೇ ತಾನೇ.. ಮ: ರೀ, ನಾನು ಮುಂದೆ ದಪ್ಪ ಆದ್ರೂ ನೀವು ಇದೇ ರೀತಿ ಪ್ರೀತಿ ಮಾಡ್ತೀರಾ..?ಮು: ಅದ್ಹೇಗೆ ಸಾಧ್ಯ..?ಮ: ತಾಳಿ ಕಟ್ಟುವ ವೇಳೆ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದ್ರಿ..!ಮು: ನಿನ್ನ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದಷ್ಟೇ ಪ್ರಮಾಣ ಮಾಡಿದ್ದೇನೆ. ಆದರೆ ನೀನು ದಪ್ಪ ಆಗುವ ವಿಚಾರದಲ್ಲಿ ಮಾತು ಕೊಟ್ಟಿಲ್ಲ..ದಯವಿಟ್ಟು ಒಂದ್ಹೊತ್ತು ಊಟ ಬಿಟ್ಟು ಡಯಾಟ್ ಮಾಡು. ಐದು ವರ್ಷದಲ್ಲಿ ನೀನು ಗ್ಯಾರಂಟಿ ತೆಳ್ಳಗಾಗ್ತಿಯಾ.. ಮ: ರೀ, ನೀವು ಪಿಹೆಚ್‌ಡಿ ಮಾಡಿದ್ರಲ್ಲಾ. ನಿಮ್ಮನ್ನೀಗ ಡಾಕ್ಟರ್ ಅಂತ ಕರಿಲೋ ಫ್ರೊಫೆಸರ್ ಅಂತ್ಲೇ ಕರಿಲೋ..?ಮು: ನಿನ್ನಿಷ್ಟ ಬಂದಾಗೆ ಕರಿ..ಮ: ನಿಮ್ಮಪ್ಪ ಏನಂತ ಕರೀತಾರೆ..?ಮು: ಈಡಿಯಟ್.. ಸ್ಟುಪಿಡ್..! ಮ: ಏಳ್ರೀ ಹತ್ತು ಗಂಟೆಗ ಗೊರಕೆ ಹೊಡಿತ್ತಿದ್ದೀರಾ..ಮು: ಯಾಕೆ ನನ್ನನ್ನು ಎಬ್ಬಿಸಿದೆ..?ಮ: ರಾತ್ರಿ ಹತ್ತು ಗಂಟೆಗೆ ಸರಿಯಾಗಿ ನಿದ್ರೆ ಮಾತ್ರೆ ಕೊಡಿ ಅಂತ ಡಾಕ್ಟರ್ ಹೇಳಿದ್ರಲ್ಲಾ..! ಮು: ಇದೇ ತಿಂಗಳು ಇಪ್ಪತ್ತಕ್ಕೆ ನನ್ನ ಫ್ರೆಂಡ್ ಮಗನ ಮದುವೆ ಇದೆ. ನಾವಿಬ್ರೂ ಹೋಗಲೇಬೇಕು. ನನಗೆ ಅವರು ಆತ್ಮೀಯ ಮಿತ್ರರು. ಮರೆಯದೆ ನೆನಪು ಮಾಡು.ಮ: ಇವತ್ತು ತಾರೀಖು ಇಪ್ಪತ್ತೆರೆಡು..!ಮು: ಹಾಗಾದರೇ ನಾವು ಮದುವೆ ಫಂಕ್ಷನ್ ಮಿಸ್ ಮಾಡ್ಕೊಂಡ್ವಿ ಅಲ್ಲವಾ..?ಮ: ನೀವು ನಾನು ಮೊನ್ನೆ ಮದುವೆಗೆ ಹೋಗಿ ಗಡದ್ದಾಗಿ ತಿಂದು ಬಂದಿಲ್ವಾ..! ಮ: ಇದೇನ್ರೀ ಮನೆಗೆ ಇಷ್ಟು ಬೇಗ ಬಂದ್ರೀ..?ಮು: ನಮ್ಮ ಬಾಸ್ ನರಕಕ್ಕೆ ಹೋಗು ಅಂತ ಬೈದ್ರು.. ಅದಕ್ಕೆ ಇಲ್ಲಿಗೆ ಬಂದೆ. ಮ: ರೀ, ಒಂದು ನಿಮಿಷ ಬಂದು ಬಿಡ್ತಿನಿ. ಮನೇಲಿರಿ.ಮು: ಎಲ್ಲಿಗೆ ಹೋಗ್ತಿದ್ದಿಯಾ..?ಮ: ಪಕ್ಕದ್ಮನೆ ಪದ್ಮಕ್ಕನ ಮನೆಗೆ ಸಕ್ಕರೆ ಸಾಲ ತರ‍್ಲಿಕ್ಕೆ..ಮು: ಸಾಲ ಯಾಕೆ ತರಬೇಕು. ನಿನ್ನೆ ತಾನೇ ೨ ಕೆಜಿ ಸಕ್ಕರೆ ತಂದಿದ್ದೀನಲ್ಲ.ಮ: ಈಗ ನಾನು ಹೋಗ್ದೆ ಇದ್ರೇ ಅವಳೇ ಸಾಲ ಕೇಳ್ಕೊಂಡು ಇಲ್ಲಿಗೆ ಬಂದುಬಿಡ್ತಾಳೆ..! ಮ: ರೀ, ನೀವು ನನಗೆ ಮುತ್ತಿನ ಹಾರ ಕೊಡಿಸುತ್ತಿದ್ದಂತೆ ಕನಸು ಬಿತ್ತು.ಮು: ಹೌದಾ..! ಅದನ್ನು ಭದ್ರವಾಗಿ ಬೀರುನಲ್ಲಿ ಇಡು. ಮ: ರೀ, ನಮಗೆ ಮಕ್ಕಳಿಲ್ಲ. ಅದಕ್ಕೆ ನನ್ನ ತಾಯಿ ಮನೆಯಿಂದ ಕೊಟ್ಟ ಮನೆಯನ್ನು ಯಾರಾದ್ರೂ ಸನ್ಯಾಸಿಗೆ ಮಾರಿಬಿಡೋಣವೆಂದುಕೊಂಡಿದ್ದೇನೆ..ಮು: ಬಾಗಿಲು ತೆಗಿಮ: ಎಲ್ಲಿಗೆ ಹೋಗ್ತಿರಾ..?ಮು: ಸನ್ಯಾಸಿಯಾಗಲಿಕ್ಕೆ..! ಮ: ರೀ, ನಾಳೆ ನಿಮ್ಮ ಹ್ಯಾಪಿ ಬರ್ತಡೆ. ಏನ್ ಗಿಫ್ಟ್ ಕೊಡ್ಲಿ..?ಮು: ಡ್ಯೆವೋರ್ಸ್ ಕೊಟ್ಟುಬಿಡು.. ಗೊರೂರು ಅನಂತರಾಜು,

ಹಾಸ್ಯಬರಹ ಗೊರೂರು ಅನಂತರಾಜು ಅವರ ಲೇಖನಿಯಿಂದ “ನಿಮ್ಮಪ್ಪ ಏನಂತಾ ಕರೀತಾರೆ..ಈಡಿಯಟ್..ಸ್ಟುಪಿಡ್..!” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-14 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅನಲ ಅಳಿಯನಾದ ಬಗೆ ಹೀಗೆ ಅನಲ ಅಳಿಯನಾದ ಬಗೆ ಹೀಗೆ‘ಮೇಧಾಶ್ವವನ್ನು ಯಾವ ಕಾರಣಕ್ಕೂ ಬಿಡಲಾರೆ. ನನ್ನ ಜೊತೆಗೆ ಹೋರಾಟ ಮಾಡಿಯೇ ಕುದುರೆಯನ್ನುಕರೆದೊಯ್ಯಬೇಕು ನೀನು. ಇದು ಖಚಿತ’ ಎಂಬ ನೀಲಧ್ವಜ ಉದ್ಘೋಷಿತ ಸಂದೇಶ ನನ್ನನ್ನು ಬಂದು ತಲುಪಿತು.ನನಗಾದದ್ದು ಅಚ್ಚರಿ.ಅಗ್ನಿಯ ಮಾತಿನಂತೆ ಯುದ್ಧವನ್ನು ನಿಲ್ಲಿಸಿದ್ದವನು ನೀಲಧ್ವಜ. ಕುದುರೆಯನ್ನವನು ಬಿಟ್ಟುಕೊಡುತ್ತಾನೆಎನ್ನುವುದು ನನಗಿದ್ದ ಸರಳ ಸಹಜ ಅಂದಾಜು. ಆದರೆ ಇದ್ದಕ್ಕಿದ್ದಂತೆಯೇ ಅವನು ಮನಸ್ಸು ಬದಲಾಯಿಸಿದ್ದ.ಮಾಹಿಷ್ಮತಿಯರಸನ ಮನ ತಕ್ಷಣ ಬದಲಾದುದಕೆ ಏನದು ಕಾರಣ ಎಂಬ ಮೂಲ ಮರ್ಮಲತೆಯನ್ನು ಹುಡುಕಿಹೊರಟನನಗೆ ತಿಳಿದುಬಂದದ್ದು ಜ್ವಾಲೆಯೆಂಬವಳ ಮಾತು.ಜ್ವಾಲೆ, ನೀಲಧ್ವಜನ ಪ್ರೀತಿಯ ರಾಣಿ. ಅರ್ಜುನನ ಕುದುರೆಯನ್ನು ಬಿಟ್ಟು ಕಳುಹಿಸಬೇಕು ಎಂದು ಮಂತ್ರಿಗಳಲ್ಲಿನೀಲಧ್ವಜ ಮಾತನಾಡುತ್ತಿದ್ದುದು ಅವಳಿಗೆ ತಿಳಿಯಿತಂತೆ. ಅವಳಿಗದು ಮೆಚ್ಚುಗೆಯಾಗಲಿಲ್ಲ. “ಹೆದರಿಕೆ ಅದೇತಕೆ!ಬಿಡದಿರು ಕುದುರೆಯನ್ನು. ನಿಲ್ಲಿಸದಿರು ಯುದ್ಧವನ್ನು. ಅರ್ಜುನನಿಗೆದುರಾಗಿ ನಿಂತು ಕದನವ ಮಾಡು” ಎಂಬ ಸಲಹೆಇತ್ತಳಂತೆ ತನ್ನೊಡೆಯನಿಗೆ. ಅದಾವ ಮಾಯೆಯಲ್ಲಿ ಅವಳ ಮಾತಿನ ಸುಳಿಗೆ ಸಿಲುಕಿದನೋ ಆ ನೀಲಧ್ವಜ! ಹಯವಬಿಟ್ಟುಕೊಡದಿರುವ ಛಲವ ಹೊತ್ತುಮೆರೆಯುತಿಹ ಸಂದೇಶವ ನನಗೆ ಕಳುಹಿಸಿಕೊಟ್ಟ.ಜ್ವಾಲೆಯ ಮನೋಭೂಮಿಕೆ ಹೊಸದೆನಿಸಿತು ನನಗೆ. ಸಾಮಾನ್ಯವಾಗಿ ಕ್ಷಾತ್ರಪುರುಷರು ಕಲಹದೆಡೆಗೆಕುತೂಹಲಿಗಳಾಗಿರುತ್ತಾರೆ. ಅವರ ಆಸಕ್ತಿಯದು ಸಹಜ. ಹೆಂಗಳೆಯರು ಯುದ್ಧ ಬೇಡವೆಂದು ಗಂಡಂದಿರನ್ನು ತಡೆಯುವಪ್ರಯತ್ನ ಮಾಡುತ್ತಾರೆ. ಕದನವಾದರೆ ತನ್ನವನಿಗೆ ಅದೇನಾದೀತೋ ಎಂಬ ಆತಂಕ ಅವರಲ್ಲಿರುತ್ತದೆ. ಆದರೆ ಈ ಜ್ವಾಲೆಯುದ್ಧದಿಂದ ವಿಮುಖನಾಗಿ ಶಾಂತಿಯೆಡೆಗೆ ಮನಸ್ಸು ಮಾಡಿದ ರಮಣನ ಮನಸ್ಸನ್ನು ಮತ್ತೆ ಕ್ರಾಂತಿಯೆಡೆಗೆ ಸೆಳೆಯುವಮನಸ್ಸು ಮಾಡಿದ್ದಳು. ರಮಣನ ಪ್ರಾಣದೆಡೆಗೆ ಅವಳಿಗೆ ಮಮಕಾರ ಭಾವ ಇರಲಿಲ್ಲವೇ?! ಗೊತ್ತಿಲ್ಲ.ಅವಳಿಗೆ ನನ್ನ ಮೇಲೇನಾದರೂ ದ್ವೇಷವಿತ್ತೇ! ನನಗೆ ಅರಿವಿಲ್ಲ. ನಾನ್ಯಾವತ್ತೂ ಅವಳಲ್ಲಿ ಮಾತನಾಡಿದ್ದಿಲ್ಲ.ಜಗಳ ಆಡಿದ್ದಿಲ್ಲ. ಹಾಗಿರುವಾಗ ನನ್ನ ಮೇಲೆ ಅವಳಿಗೆ ದ್ವೇಷ ಇರಲು ಸಾಧ್ಯವೇ! ತಿಳಿಯಲಿಲ್ಲ.ಇನ್ನೊಂದು ಬಗೆಯ ಯೋಚನೆ ಮೂಡಿತು ನನಗೆ ಆ ಕ್ಷಣದಲ್ಲಿ. ಯುದ್ಧ ಸಂಧಾನಕಾರನಾಗಿ ನಡೆದುಕೊಂಡವನುಅಗ್ನಿ. ಅವನು ನೀಲಧ್ವಜನ ಅಳಿಯ. ಮಾಹಿಷ್ಮತಿಯಲ್ಲಿಯೇ ನೆಲೆನಿಂತು ಆ ನಗರದ ಅಳಿಯನಂತೆ ಗುರುತಿಸಿಕೊಂಡವನು.ಮಗಳನ್ನು ಮದುವೆಯಾದ ಅಳಿಯನ ಮೇಲೇನಾದರೂ ಕೋಪ ಇರಬಹುದೇ ಜ್ವಾಲೆಗೆ?! ಎಂಬ ಆಲೋಚನೆ ನನ್ನಲ್ಲಿಉದಯಿಸಿತು.ಈ ಬಗೆಯ ಚಿಂತನೆ ನನ್ನಲ್ಲಿ ಮೂಡುವುದಕ್ಕೆ ಸಕಾರಣವಿತ್ತು. ನೀಲಧ್ವಜನ ಮಗಳು ಅಗ್ನಿಯನ್ನು ಪ್ರೀತಿಸಿಮದುವೆ ಆದವಳು.ನೀಲಧ್ವಜ ಜ್ವಾಲೆಯರ ಮಗಳು ಅಪ್ರತಿಮ ರೂಪವತಿಯಾಗಿದ್ದಳು. ಗುಣಶೀಲೆ ಎನಿಸಿಕೊಂಡಿದ್ದಳು. ಹೀಗಿದ್ದಚೆಲುವೆ ಯೌವ್ವನಾವಸ್ಥೆಯನ್ನು ತಲುಪಿದಾಗ ನೀಲಧ್ವಜನಲ್ಲಿ ಮಗಳ ಮದುವೆಯ ಯೋಚನೆ ಮೂಡಿತು. ಮೂರೂ ಲೋಕಗಳಲ್ಲಿ ಖ್ಯಾತಿ ಗಳಿಸಿದ, ವೀರರೆಂದು ಹೆಸರು ಪಡೆದ, ಸಿರಿವಂತರೆAದು ಗುರುತಿಸಿಕೊಂಡ ಪುರುಷರ ಚಿತ್ರವನ್ನುಅವಳೆದುರು ಹಿಡಿದು, “ಇವರಲ್ಲಿ ನಿನ್ನ ಪತಿಯಾಗುವವರು ಯಾರೆಂದು ನೀನೇ ಹೇಳು ಮುದ್ದು ಮಗಳೇ” ಎಂದ.ತಂದೆಯ ಮಾತಿನಂತೆ ಚಿತ್ರಪಟದೆಡೆಗೆ ಹರಿಣಿನೇತ್ರವನ್ನು ಹರಿಸಿದ ಸುಂದರಿಗೆ ಚೆಲುವನಾಗಿ ಕಂಡದ್ದು ಅಗ್ನಿದೇವ.ತಂದೆ ತಂದು ಕೈಗಿಟ್ಟಿದ್ದ ಚಿತ್ರಪಟದಲ್ಲಿ ಅಗ್ನಿ ಗಂಧರ್ವ ಯಕ್ಷ ದೇವತೆಗಳನ್ನು ತನ್ನ ಚೆಲುವಿನಿಂದಲೇ ಅಪಹಾಸ್ಯ ಮಾಡಿನಗುತ್ತಿದ್ದ. ಸಕಲ ಭೂಮಂಡಲದ ರಾಜಾಧಿರಾಜರನ್ನು ಮೀರುವಂತೆ ತೋರುತ್ತಿದ್ದ. ಮನ್ಮಥರಾಜ ವಸಂತರಾಜರನ್ನೂಮೀರಿದ ಸೌಂದರ್ಯವನ್ನು ಆವಾಹಿಸಿಕೊಂಡು ಕುಳಿತಿದ್ದ. ತಕ್ಷಣವೇ ನೀಲಧ್ವಜಕುವರಿಯ ಚಿತ್ತ ಚಿತ್ರಪಟದಲ್ಲಿದ್ದಅಗ್ನಿದೇವನ ಹೃದಯವನ್ನು ಕೂಡಿಕೊಂಡಿತು. “ಎನಗಿನ್ನು ಇವನೇ ರಮಣ” ಎಂದಳು ತಂದೆಯಲ್ಲಿ, ನಸುನಾಚಿಕೆತೋರುತ್ತ.ನಡೆಯಲಾರದ್ದರೆಡೆಗೆ, ಸಾಧ್ಯವಾಗದ್ದರ ಕಡೆಗೆ ಮಗಳು ಮನಸ್ಸು ಹರಿಸಿದ್ದಾಳೆ ಎನಿಸಿತು ನೀಲಧ್ವಜನಿಗೆ.ಅದನ್ನೇ ತನುಜೆಗೆ ಹೇಳಿದ. ತಂದೆಯ ಮಾತು ಅಪಥ್ಯವಾಯಿತು ಆ ಚೆಲುವೆಗೆ. ಜನಕನನ್ನು ಜರಿದವಳು ಅರಮನೆಯನ್ನುತೊರೆದುಹೋದಳು.ತಾರುಣ್ಯವೆಂದರೆ ಹಾಗೆಯೇ. ಹೃದಯ ಏನನ್ನು ಬಯಸುತ್ತದೆಯೋ ಅದು ದಕ್ಕದಾದಾಗ ನಿರಾಸೆ ಮೂಡುತ್ತದೆ;ಹಠ ಕುಡಿಯೊಡೆಯುತ್ತದೆ. ಪಡೆಯದಿರಲಾರೆ ಮನ ಬಯಸಿದ ಅನಲನನ್ನು ಎಂದುಕೊಂಡಳು ನೀಲಧ್ವಜಸುತೆ.ಅರಮನೆಯನ್ನು ತೊರೆದವಳು ನರ್ಮದಾ ತೊರೆಯ ತೀರವನ್ನು ಸೇರಿದಳು, ತೀರದಾಸೆಯನ್ನು ಎದೆಯಲ್ಲಿಹೊತ್ತುಕೊಂಡು. ನಾನಾ ವಿಧಗಳಲ್ಲಿ ಅಗ್ನಿದೇವನನ್ನು ಅರ್ಚಿಸಿದಳು.ಅವಳ ಪೂಜೆಯ ಸೊಗಸದು ಅಗ್ನಿಗೆ ಮೆಚ್ಚುಗೆಯಾಯಿತು. ಅವಳನ್ನು ಮದುವೆಯಾಗುವ ಇಚ್ಛೆ ಅವನಲ್ಲಿಯೂಮೂಡಿತು.ಬ್ರಾಹ್ಮಣ ವೇಷವನ್ನು ತಾಳಿದ ಅನಲ ಕಾಣಿಸಿಕೊಂಡದ್ದು ನೀಲಧ್ವಜನ ಆಸ್ಥಾನದಲ್ಲಿ. ಸಭೆಗೆ ಬಂದಭೂಸುರನನ್ನು ಸ್ವಾಗತಿಸಿದ ನೀಲಧ್ವಜ. ಬಂದ ಕಾರಣವನ್ನು ನಯವಾಗಿ ಕೇಳಿದ. “ಕನ್ಯೆಯನ್ನು ಬಯಸಿ ಬಂದಿದ್ದೇನೆ.ನಿನ್ನ ಸುತೆಯನ್ನು ಕೊಡು ಎನಗೆ. ರಾಜನಾಗಿರುವ ನೀನು ಬ್ರಾಹ್ಮಣನಾದ ನನಗೆ ಮಗಳನ್ನು ಮದುವೆಮಾಡಿಕೊಡಬಹುದು. ಶಾಸ್ತçದ ಅಭ್ಯಂತರವಿಲ್ಲ” ಎಂದ ಬ್ರಾಹ್ಮಣ ವೇಷದ ಅನಲ.ಮಗಳು ಅಗ್ನಿಯನ್ನು ಮದುವೆಯಾಗುವ ಮನಸ್ಸು ಮಾಡಿದ್ದಾಳೆ. ಏನು ಮಾಡಲಿ! ಎಂದು ಅಸಹಾಯಕತೆತೋರಿದ ನೀಲಧ್ವಜ. ತಕ್ಷಣವೇ ತಾನೇ ಅಗ್ನಿ ಎಂಬ ಸತ್ಯವನ್ನು ಅರುಹಿದ ಅನಲ.ನೀಲಧ್ವಜನ ಆಪ್ತಮಂತ್ರಿ ಪರೀಕ್ಷಿಸಿದ. ಅವನು ಅಗ್ನಿಯೆನ್ನುವುದು ಸಾಬೀತಾಯಿತು. ನೀಲಧ್ವಜನ ಸತಿಯೂಪರೀಕ್ಷೆ ಮಾಡಿದಳು. ವಿಪ್ರ ವೇಷವದು ನಕಲು. ನಿಜವಾಗಿಯೂ ಅಗ್ನಿಯವನು ಎನ್ನುವುದವರ ಅರಿವಿಗೆ ಬಂತು. ನೀಲಧ್ವಜಅಗ್ನಿಯಲ್ಲಿ “ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ಇದೇ ನಗರದಲ್ಲಿ ಇರಬೇಕು” ಎಂದ. ಅಗ್ನಿಒಪ್ಪಿದ. ಅನಲ ನೀಲಧ್ವಜನ ಅಳಿಯ ಎನಿಸಿಕೊಂಡ.ಹೀಗೆ ಅಳಿಯನಾದ ಅಗ್ನಿಯ ಮೇಲೆ ರಾಣಿ ಜ್ವಾಲೆಗೆ ಏನಾದರೂ ಅಸಮಾಧಾನ ಇತ್ತೋ ಏನೋ! ಈಕಾರಣದಿಂದಲೇ ಅವನು ಏರ್ಪಡಿಸಿದ ಸಂಧಾನವದು ಅವಳಿಗೆ ಸಹ್ಯವಾಗಲಿಲ್ಲವೋ ಏನೋ! ನೀಲಧ್ವಜ ಸೇನೆಯೊಡನೆ ಮತ್ತೆ ಕದನ ಹೂಡುವುದೀಗ ಅನಿವಾರ್ಯವಾಗಿಬಿಟ್ಟಿತ್ತು ನಮಗೆ. ಕುದುರೆಯಕಾಲುಗಳು ಮಾಹಿಷ್ಮತಿ ನಗರವನ್ನು ತೊರೆದು ಮುಂದೆ ಚಲಿಸಬೇಕಾದರೆ ನಮ್ಮ ಕಾಲುಗಳು ಕದನರಂಗಕ್ಕಿಳಿಯಬೇಕಿತ್ತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ನಿಮ್ಮೊಂದಿಗೆ

ಪರವಿನಬಾನು ಯಲಿಗಾರ ಅವರ ಕವಿತೆ”ಪ್ರೀತಿ”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಪ್ರೀತಿ” ಪ್ರೀತಿ ಎಂದರೆ ಅಂಬರ ,ಅಲ್ಲಿ ಮೇಘದ ತಂಪು ಸಿಂಚನ ,ಜೊತೆಗೆ ಗುಡುಗು , ಕೋಲ್ಮಿಂಚಿನಅಬ್ಬರವು ಇದೆ….. ಪ್ರೀತಿ ಎಂದರೆ ಇಳೆ ,ಕರುಣೆಯ ಹಸಿರು ಇದೆ ,ಬದುಕು ಕಸಿಯುವ ಜ್ವಾಲೆಯಕಂಪನವೂ ಇದೆ….. ಪ್ರೀತಿ ಎಂದರೆ ಸಾಗರ ,ವಡಲಿನಲ್ಲಿ ಮುತ್ತು ಮಾಣಿಕ್ಯ ಇವೆ ,ರಕ್ಕಸ ರೂಪದ ಅಲೆಗಳಆರ್ಭಟದ ಸುನಾಮಿ ಇದೆ….. ಪ್ರೀತಿ ಎಂದರೆ  ಗಾಳಿ ,ಉಸಿರು ಕಟ್ಟುವ ಬಿರುಗಾಳಿ ಇದೆ,ಜೀವ ಕೊಡುವ ಪ್ರಾಣವಾಯುವು ಹೌದು  ….. ಪ್ರೀತಿ ಎಂದರೆ  ಬೆಂಕಿ ,ಬೆಳಗುವ ನಂದಾ ದೀಪವು ಆಗುವುದು,ಸರ್ವನಾಶಕ್ಕೆ ಚಾಚುವಕೆನ್ನಾಲಿಗೆಯೂ ಇದೆ …. ಪರವಿನಬಾನು ಯಲಿಗಾರ.

ಪರವಿನಬಾನು ಯಲಿಗಾರ ಅವರ ಕವಿತೆ”ಪ್ರೀತಿ” Read Post »

ಇತರೆ, ಶಿಕ್ಷಣ

“ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ನಾಗರತ್ನ. ಹೆಚ್ ಗಂಗಾವತಿ

ವಿದ್ಯಾರ್ಥಿ ಸಂಗಾತಿ ನಾಗರತ್ನ. ಹೆಚ್ ಗಂಗಾವತಿ “ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ಪರೀಕ್ಷೆಗಳು ವಿದ್ಯಾರ್ಥಿಗಳ ಜ್ಞಾನ ಕೌಶಲ್ಯ ಮತ್ತು ವಿಷಯದ ಆಳವಾದ ತಿಳುವಳಿಕೆಯನ್ನು ಅಳೆಯುವ ಪ್ರಮುಖ ಶೈಕ್ಷಣಿಕ ಮೌಲ್ಯಮಾಪನ ಸಾಧನವಾಗಿದೆ ಇವು ಶಿಸ್ತು ,ಸಮಯ, ನಿರ್ವಹಣೆ ಮತ್ತು ಕಠಿಣ ಪರಿಶ್ರಮವನ್ನು ಉತ್ತೇಜಿಸುತ್ತವೆ. ವೈಯಕ್ತಿಕ ಬೆಳವಣಿಗೆಗೆ ಮತ್ತು ಮುಂದಿನ ಹಂತದ ಶಿಕ್ಷಣದ ಅಗತ್ಯವಾದ ತಾರ್ಕಿಕ ಚಿಂತನೆಗಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತವೆ ಅಷ್ಟೇ ಅಲ್ಲದೆ ಇದು ಕಲಿಕೆಯ ಪ್ರಕ್ರಿಯೆ ಪ್ರಮುಖ ಭಾಗವಾಗಿದೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಪ್ರಮುಖ ಸಾಧನವಾಗಿದೆ. ಪರೀಕ್ಷೆಗಳು ವಿದ್ಯಾರ್ಥಿ ಒಂದು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ವಿಷಯವನ್ನು ಕಲಿತಿದ್ದಾನೆ ಮತ್ತು ವಿಷಯವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ನಿರ್ಣಯಿಸುವುದು ಹಾಗೂ ಕೇವಲ ಅಂಕ ಗಳಿಗಾಗಿ ಅಲ್ಲ ಬದಲಿಗೆ ವಿಷಯದ ಮೇಲಿನ ಹಿಡಿತವನ್ನು ಪರೀಕ್ಷಿಸುತ್ತದೆ. ಹಾಗೂ ಪರೀಕ್ಷೆಗಳು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದಷ್ಟೇ ಅಲ್ಲದೆ ಅವನ ಜ್ಞಾನವನ್ನು ಅಳೆಯುವಂತಹ ಒಂದು ಸಾಧನವು ಕೂಡ ಹೌದು. ಮತ್ತು ವಿದ್ಯಾರ್ಥಿಗೆ ಸಮಯವನ್ನು ಹಾಗೂ ಬರವಣಿಗೆ ಕೌಶಲ್ಯವನ್ನು ಯಾವ ರೀತಿ ಉಪಯೋಗ ಸುವಂತಹ ಕಲೆಯನ್ನ ಬಳಸುತ್ತದೆ ಮತ್ತು ಎಷ್ಟೇ ಸವಾಲುಗಳು ಇದ್ದರೂ ಸಹ ಪರೀಕ್ಷೆಯಲ್ಲಿ ಉತ್ತಮ ಬರೆಯಬೇಕು ಎಂಬ ಛಲವನ್ನ ಮೂಡಿಸುತ್ತದೆ. ಹಾಗೂ ವಿಷಯದ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ . ವೈಯಕ್ತಿಕ ಬೆಳವಣಿಗೆಗೆ ಮತ್ತು ಮುಂದಿನ ಹಂತದ ಶಿಕ್ಷಣಕ್ಕೆ ಅಗತ್ಯವಾದ ಜ್ಞಾನವನ್ನು ಬೆಳೆಸುತ್ತದೆ. ಕಲಿಕೆಯ ಗುಣಮಟ್ಟ ಮತ್ತು ವಿಷಯದ ಜ್ಞಾನದ ಮಟ್ಟವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪರೀಕ್ಷೆಗಳು ಸಹಾಯ ಮಾಡುತ್ತವೆ. ಓದಲು ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವುದಷ್ಟೇ ಅಲ್ಲದೆ ಪ್ರೇರಣೆಯನ್ನು ಒದಗಿಸುತ್ತದೆ ಪರೀಕ್ಷೆಯು ಕೇವಲ ಅಂಕಗಳಿಗಾಗಿ ಅಲ್ಲ ಬದಲಾಗಿ ಜ್ಞಾನವನ್ನು ಅಭಿವೃದ್ಧಿಪಡಿಸುವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ. ಹಾಗೂ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವುದರಿಂದ ತಪ್ಪದೇ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಅಷ್ಟೇ ಮುಖ್ಯವಾಗಿರುತ್ತದೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಹಾಗಾಗಿ ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ ಹಾಗೂ ಪರೀಕ್ಷೆಗಳು ವಿದ್ಯಾರ್ಥಿಯ ಜೀವನದಲ್ಲಿ ಮಹತ್ವವಾದಗಳು *ಉದಾಹರಣೆಗೆ*ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ನೋಡುವುದಾದರೆ ಹೀಗೆ ಒಂದು ಊರಿನಲ್ಲಿ ಗಿರೀಶ ಮತ್ತು ಹರೀಶ್ ಎನ್ನುವ ಇಬ್ಬರು ಗೆಳೆಯರಿದ್ದರು.ಇಬ್ಬರೂ ಓದಿದಲ್ಲಿ ಅಷ್ಟೇ ಜಾಣನಿದ್ದರೂ ಕೂಡ ಗಿರೀಶನಿಗೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಯಲ್ಲಿ ಹಾಜರಾಗದೆ ಹಿಂದುಳಿದ ತೊಡಗಿದ ಆಗ ಹರೀಶನು ಆತನಿಗೆ ಉತ್ತಮ ಅಂಕ ಗಳಿಸಲು ತನಗೆ ತಿಳಿದಂತಹ ಎಲ್ಲಾ ಸಲಹೆಗಳನ್ನು ನಿತ್ಯವೂ ಹೇಳುತ್ತಾ ಬಂದನು ಆಗ ಆತನು ಕೂಡ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮತ್ತು ಅವರಿಬ್ಬರು ಕೂಡಿ ತಮ್ಮ ಗ್ರಾಮದಲ್ಲಿ ಇರುವಂತಹ ಅನಕ್ಷರಸ್ಥರನ್ನು ಸೇರಿಸಿನಿತ್ಯವೂ ಸಂಜೆ ಸಮಯದಲ್ಲಿ ಅವರುಗಳಿಗೆ ಉತ್ತಮ ಜ್ಞಾನವನ್ನು ನೀಡುತ್ತಾ ಬಂದರು ಆಗ ಊರಿಗೆ ಊರೇ ಸಾಕ್ಷರತಾ ಗ್ರಾಮವಾಗಿ ಪರಿವರ್ತನೆಗೊಂಡಿತು.ಅದಕ್ಕೆ ಹೇಳುವುದು *ವಿದ್ಯೆ ಕದಿಯಲಾರದ ಸಂಪತ್ತು*ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪರೀಕ್ಷೆಗಳು ಅವರ ಜೀವನವನ್ನೇ ಬದಲಾಯಿಸುವಂತಹ ಮಹತ್ವದ ಪಾತ್ರವನ್ನು ವಹಿಸುತ್ತವೆ ಹೀಗಾಗಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಕೇವಲ ಅಂಕಗಳಿಗಾಗಿ ಅಷ್ಟೇ ಅಲ್ಲದೆ ಜ್ಞಾನಕ್ಕಾಗಿ ಓದುವುದು ಅಷ್ಟೇ ಮುಖ್ಯ ಸಮಯವನ್ನು ವ್ಯರ್ಥ ಮಾಡದೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪರೀಕ್ಷೆಗಳು ಪ್ರಮುಖ ಸಾಧನಗಳಾಗಿವೆ. ನಾಗರತ್ನ. ಹೆಚ್ ಗಂಗಾವತಿ

“ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ನಾಗರತ್ನ. ಹೆಚ್ ಗಂಗಾವತಿ Read Post »

ಅಂಕಣ ಸಂಗಾತಿ, ವೀಣಾ-ವಾಣಿ

ಅಂಕಣ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್‌ ಗೌಡ ಪಾಟೀಲ್ ಬದುಕಿನ ಪಯಣ ಬದುಕು ಒಂದು ರೀತಿಯ ರೈಲು ಗಾಡಿಯ ಪಯಣ ಇದ್ದಂತೆ. ರೈಲುಗಾಡಿಯಲ್ಲಿ ಹತ್ತಿ ಕುಳಿತುಕೊಳ್ಳುವ  ನಾವುಗಳು ಮಾರ್ಗ ಮಧ್ಯದಲ್ಲಿ ಹತ್ತುವ-ಇಳಿಯುವ, ನೂರಾರು ಜನರೊಂದಿಗೆ ಸ್ನೇಹ ಸಂಬಂಧಗಳನ್ನು ಬೆಳೆಸುತ್ತೇವೆ ಅವರವರ ನಿಲ್ದಾಣ ಬಂದಾಗ ಅವರವರು ಇಳಿದು ಹೋಗುತ್ತಾರೆ….. ಅಂತೆಯೇ ನಾವು ಕೂಡನಮ್ಮ ಬದುಕಿನ ಪಯಣ ಕೂಡ ಹಾಗೆಯೇ…. ಆದರೆ ಈ ಪಯಣ ಅನಿರೀಕ್ಷಿತ ಸಂತೆಗಳ ಆಗರ.ಇದಮಿತ್ಥಂ ಎಂದು ಹೇಳುವ ಹಾಗೆಯೇ ಇಲ್ಲ. ನಮ್ಮ ಮುಂದಿನ ನಿಲ್ದಾಣ ಯಾವುದು ಎಂಬುದು ನಮಗೆ ಗೊತ್ತಿರುವುದಿಲ್ಲ.ತಂದೆ ತಾಯಿಯ ಕೈ ಹಿಡಿದು ಬದುಕಿನ ಪಯಣವನ್ನು ಆರಂಭಿಸುವ ನಾವು ನಮ್ಮ ಜೀವಿತದ ಕೊನೆಯವರೆಗೂ ಅವರು ನಮ್ಮೊಂದಿಗೆ ಇರುತ್ತಾರೆ ಎಂಬ ಭರವಸೆಯ ಜೊತೆಗೆ ಜೀವಿಸುತ್ತೇವೆ…. ಆದರೆ ತಮ್ಮ ಪ್ರಯಾಣ ಪೂರೈಸುವ ಅವರು ಯಾವ ಘಳಿಗೆ ಯಲ್ಲಾದರೂ ನಮ್ಮನ್ನು ಬಿಟ್ಟು ಹೊರಟು ಹೋಗಬಹುದು ಹಾಗೂ ಅವರಿಲ್ಲದೆ ನಾವು ನಮ್ಮ ಬದುಕಿನ ಪಯಣವನ್ನು ಮುಂದುವರಿಸಬೇಕು ಎಂಬ ನಿಷ್ಟುರ ಸತ್ಯದ ಅರಿವಿದ್ದು ಕೂಡ ಅರಿವಿಲ್ಲದ ರೀತಿಯಲ್ಲಿ ನಾವು ಬಾಳುತ್ತೇವೆ.ಆದರೂ ಕೂಡ ಯಾವುದೇ ಸೀಟುಗಳು ಖಾಲಿ ಉಳಿಯುವುದಿಲ್ಲ. ನಮಗೆ ಸ್ವಲ್ಪ ಹಿಂದು ಮುಂದಾಗಿ ನಮ್ಮ ಒಡಹುಟ್ಟಿದವರು, ಸ್ನೇಹಿತರು, ಸಂಬಂಧಿಗಳು ಹಾಗೂ ನಾವು ಪ್ರೀತಿಸುವ ಬದುಕಿನಲ್ಲಿ ನಮ್ಮೊಂದಿಗೆ ಇರಲಿ ಎಂದು ಬಯಸುವ ಹತ್ತು ಹಲವು ಸಂಗತಿಗಳು ನಮ್ಮೊಂದಿಗೆ ಬದುಕಿನ ಪಯಣದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ.  ತಮ್ಮ ತಮ್ಮ ಪಯಣ ಮುಗಿಸಿ ಕೆಲವರು ನಿರೀಕ್ಷಿತ ಸಮಯಕ್ಕೆ ಇಳಿದು ಹೊರಟು ಹೋದರೆ ಮತ್ತೆ ಕೆಲವರು ನಮ್ಮ ಬದುಕಿನ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುವ ನಮ್ಮಲ್ಲಿ ಖಾಲಿತನವನ್ನುಹುಟ್ಟು ಹಾಕುವ ರೀತಿಯಲ್ಲಿ ಕಣ್ಮರೆಯಾಗುತ್ತಾರೆ…. ಮತ್ತೆ ಕೆಲವರ ನಿರ್ಗಮನ ಅದೆಷ್ಟು ಅನಿರೀಕ್ಷಿತವಾಗುತ್ತದೆ೦ದರೆ ಅದನ್ನು ಅರಗಿಸಿಕೊಳ್ಳುವುದು ಬಹಳವೇ ಕಷ್ಟ .ಈ ಪಯಣವು ಸುಖ ದುಃಖಗಳ ಏರಿಳಿವುಗಳ ಮೇಲೆ ತೂಗುಯ್ಯಾಲೆಯಂತೆ ಭಾಸವಾಗುತ್ತದೆ. ಕೆಲ ಭೇಟಿಗಳು ಮನಸ್ಸನ್ನು ಪ್ರಫುಲ್ಲಗೊಳಿಸಬಹುದು ಎಷ್ಟೋ ಬಾರಿ ಭರವಸೆಗಳು ಹುಸಿಯಾಗಬಹುದು…. ವಿದಾಯಗಳು ಎದೆಯ ಭಾರವನ್ನು ಹೆಚ್ಚಿಸಬಹುದು ಕೆಲವರ ಜೊತೆಯು ಸಂತಸವನ್ನು ಉಂಟುಮಾಡಿದರೆ ಮತ್ತೆ ಕೆಲವರ ಸಾಂಗತ್ಯ ರೇಜಿಗೆಯನ್ನುಂಟು ಮಾಡಬಹುದುಬದುಕಿನಲ್ಲಿ ಪಯಣದಲ್ಲಿ ಚೆನ್ನಾಗಿ ಬದುಕುವುದು ಎಂದರೆ ನಮ್ಮ ಜೊತೆಗಿರುವ ಸಹ ಪ್ರಯಾಣಿಕರ ಕುರಿತು ಒಳ್ಳೆಯ ಅರಿವನ್ನು ಹೊಂದಿರಬೇಕು. ಉತ್ತಮ ಸಂವಹನವನ್ನು ಹೊಂದಿರಬೇಕು…. ಅದರಲ್ಲೂ ಮುಖ್ಯವಾಗಿ ನಮ್ಮ ಬದುಕಿನ ಹೊರೆಗಳನ್ನು ಹಂಚಿಕೊಂಡಿರುವವರೊಂದಿಗೆ ಅತ್ಯಂತ ಆತ್ಮೀಯವಾದ  ಸಂಬಂಧವನ್ನು ಮುಂದುವರಿಸಬೇಕು  ಜೀವನದ ಪಯಣದಲ್ಲಿ ನಮ್ಮ ಪಯಣದ ಆರಂಭದ ಸಮಯದಲ್ಲಿ ನಮಗೆ ನೀಡಲಾದ ಟಿಕೇಟಿನಲ್ಲಿ ಆರಂಭಿಸಿದ ಸಮಯ ದಿನ, ತಿಂಗಳು ವಾರ ಮತ್ತು ವರ್ಷಗಳನ್ನು ನಮೂದಿಸುತ್ತದೆ ನಿಜ ಆದರೆ ಯಾವಾಗ ನಾವು ಜೀವನದ ಪಯಣ ಮುಗಿಸಿ ಇಳಿಯಬಹುದು ಎಂಬ ಸಣ್ಣ ಸುಳಿವು ಕೂಡ ನಮಗೆ ಇರುವುದಿಲ್ಲ. ನಮ್ಮ ಪಯಣದ ಹಾದಿಯನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಬದುಕಿನ ಗುಣಮಟ್ಟವನ್ನು ಅಳೆಯಬಹುದು.. ನಾವು ದೇವರನ್ನು ಪ್ರೀತಿಸಬೇಕು ಅತ್ಯಂತ ಸರಳವಾಗಿ ಕ್ಷಮಿಸಬೇಕು ಜೊತೆಗೆ ನಮ್ಮ ನೈಜತೆಯನ್ನು ಹೊರ ಹಾಕಬೇಕು.ಅಂತಿಮ ಪಯಣದ ಸಮಯದಲ್ಲಿ ನಮಗೆ ದೊರೆಯುವ ಸಂಜ್ಞೆಗಳನ್ನು ಗುರುತಿಸಿ ಮೆಲ್ಲಗೆ ಹೊರಟು ಬಿಡಬೇಕು. ಮರದ ಗೊಂಬೆಯನ್ನು ಆಶ್ರಯಿಸಿದ ಹಕ್ಕಿ ಒಂದೇ ಏಟಿಗೆ ರೆಕ್ಕೆಗಳನ್ನು ಅಗಲಿಸಿ ಹಾರಿ ಹೋಗುವಂತೆ ನಾವು ಕೂಡ ಬದುಕಿನ ಈ ಪಯಣವನ್ನು ಮುಗಿಸಿ ಹೊರಟು ಬಿಡಬೇಕು.. ಉಳಿದವರ ಬದುಕಿನ ಅತ್ಯಂತ ಸುಂದರ ನೆನಪಾಗಿ ನಾವು ಉಳಿದುಕೊಳ್ಳಬೇಕೆ ಹೊರತು ಅವರ ಚಿತ್ತವನ್ನು ಕಲಕಿ ಮಾನಸಿಕ ಸ್ವಾಸ್ಥ್ಯವನ್ನು ಕದಡುವ, ನಮ್ಮ ನೆನಪು ಅವರಲ್ಲಿ ಬೇಸರ ಹುಟ್ಟಿಸುವ ರೀತಿಯಲ್ಲಿ ಬದುಕಬಾರದು.ಬದುಕಿನ ಪ್ರಯಾಣದಲ್ಲಿ ಸಂತೋಷ, ತೃಪ್ತಿ,ನೆಮ್ಮದಿ ಇಂತಹ ಹಗುರವಾದ ಭಾವಗಳನ್ನು ನಮ್ಮ ಲಗೇಜ್ ಗಳನ್ನಾಗಿ ಕೊಯ್ಯಬೇಕೇ ಹೊರತು ಮನಸ್ಸನ್ನು ಭಾರವಾಗಿಸುವ ನೋವು ನಿರಾಶೆ ಅತೃಪ್ತಿ ಆ ಸಂತೋಷಗಳೆಂಬ ಭಾರವಾದ ವಸ್ತುಗಳನ್ನು ಅಲ್ಲಲ್ಲಿಯೇ ಬಿಟ್ಟು ಮುಂದೆ ಹೊರಡಬೇಕು.ಲೆಸ್ ಲಗೇಜ್ ಮೋರ್ ಕಂಫರ್ಟ್ ಎಂಬ ಮಾತು ಬದುಕಿನ ಪಯಣಕ್ಕೂ ಸೂಕ್ತವಾಗಿದೆ.ನಮ್ಮ ಬದುಕಿನಲ್ಲಿ ನಾವು ಬಹು ದೂರ ಸಾಗಬೇಕಾದ ಪರಿಸ್ಥಿತಿಯಲ್ಲಿ ನಮ್ಮೊಂದಿಗೆ ಹೆತ್ತವರು, ಒಡಹುಟ್ಟಿದವರು, ಸಂಗಾತಿ, ಮಕ್ಕಳುಸಂಬಂಧಿಗಳು ಸ್ನೇಹಿತರು ಜೊತೆ ಇರಬೇಕು. ನಮ್ಮ ಹೆಗಲ ಮೇಲೆ ನಾವು ಮಲಗಲು ಸಾಧ್ಯವಿಲ್ಲ…. ನಮ್ಮ ಮನದ ಭಾವನೆಗಳನ್ನು ಹಂಚಿಕೊಂಡು ಹಗುರವಾಗಲು ನಮಗೆ ಬೇರೊಬ್ಬರ ಹೆಗಲು ಬೇಕೇ ಬೇಕು.ನಮ್ಮ ಬದುಕಿನ ಉದ್ದೇಶ ಮತ್ತು ಗುರಿಗಳು ಸ್ಪಷ್ಟವಾಗಿದ್ದು ತಲುಪುವ ಗಮ್ಯದ ಅರಿವು ನಮಗಿರಬೇಕು….. ಅಂದರೆ ನಮ್ಮ ಪಯಣ ಅತ್ಯಂತಸುರಕ್ಷಿತ ಹಾಗೂ ತೃಪ್ತಿದಾಯಕವಾಗಿರುತ್ತದೆ. ಏನಂತೀರಾ ಸ್ನೇಹಿತರೇ?….. ನೀವು ಕೂಡ ನಿಮ್ಮ ಬದುಕಿನ ಪಯಣವನ್ನು ಅತ್ಯಂತ ಸರಳ ಹಾಗೂ ಸುಂದರವಾದ ಬದುಕಿನ ಪಯಣ ನಿಮ್ಮದಾಗಿರಲಿ ವೀಣಾ ಹೇಮಂತ್ ಗೌಡ ಪಾಟೀಲ್ 

Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ನೀಲಿ ಆಕಾಶ – ನೀನೇ ನನ್ನ ಹಾಡು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ನೀಲಿ ಆಕಾಶ – ನೀನೇ ನನ್ನ ಹಾಡು” ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯ ಹೇಳಿದೆನಿನ್ನ ನನ್ನ ಪ್ರೀತಿಯ ಹಾಡು. ನಿನ್ನ ಕಣ್ಣೊಳಗೆನೋಡುವ ಕನಸು,ನನ್ನ ಉಸಿರಲ್ಲೇನಿನ್ನ ಸುಗಂಧದ ಸೊಗಸು. ಎದೆ ಬಡಿತ ಎನ್ನುವಹೃದಯದ ಸದ್ದು,ಪ್ರತಿ ಕ್ಷಣ ಹೇಳುತ್ತದೆಪ್ರೀತಿ ಒಂದು ಮದ್ದು. ಓ ನಲ್ಲೆ, ನೀನುಆ ತೀರದ ನಕ್ಷತ್ರ,ನಾನು ಈ ತೀರದಒಂಟಿ ಯಾತ್ರಿಕ.ನಡುವೆ ನದಿ ಹರಿಯುತ್ತದೆಜುಳು ಜುಳು ಧ್ವನಿ,ನಿನ್ನ ನೆನಪಲ್ಲಿನಿಂತುಹೋಗುತ್ತದೆ ನನ್ನ ಪಯಣ. ಸುಪ್ರಿಯಾ, ನಾನುದೂರದಲ್ಲಿದ್ದರೂ,ನಿನ್ನ ಧ್ವನಿಯಲ್ಲೇಹತ್ತಿರವಾಗುತ್ತೇನೆ ನೋಡು.ನೀನು “ಬಾ ನಲ್ಲ” ಎಂದರೆಹೃದಯ ನಗುತ್ತದೆ,ಕೇಳಿಸದ ಮಾತನ್ನೂಮನಸ್ಸು ಅರಿತುಕೊಳ್ಳುತ್ತದೆ. ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯದಲ್ಲಿನೀನೇ ಆ ಪ್ರೀತಿಯ ಹಾಡು. ನೀಲಿ ಆಕಾಶದ ಮೋಡಎಲ್ಲಿ ಮಳೆಯಾಗುತ್ತವೋ,ನನ್ನ ಕಣ್ಣಿನ ಮೋಡನಿನ್ನ ನೆನಪಲ್ಲೇ ಕರಗುತ್ತವೋ.ಸ್ವಪ್ನದಲ್ಲಿ ಬಂದವನೇಮೌನದ ಸಂಗೀತ,ನಿನ್ನ ಸ್ಪರ್ಶವೇಮನಸ್ಸಿಗೆ ಸಿಹಿ ಸಂಪ್ರಿತ ಕೋಗಿಲೆ ಕೂಗುವಾಗನಿನ್ನ ನೆನಪು,ನಿನ್ನ ನಗುವೇನನ್ನ ಬದುಕಿನ ಹೊನಪು ನಿನ್ನ ಮಾತು ಕೇಳಿದರೆಮರೆತುಹೋಗುತ್ತದೆ ನೋವು,ನಿನ್ನ ಪ್ರೀತಿ ಸಾಕುನನ್ನ ಜೀವನದ ಔಷಧಿ ಅದು. ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯದಲ್ಲಿನೀನೇ ಆ ಪ್ರೀತಿಯ ಹಾಡು. ಸಮುದ್ರದ ಮುಂದೆ ನಿಂತುಅಲೆಗಳನ್ನು ನೋಡಿದರೆ,ನಿನ್ನ ಭಾವನೆಗಳುಅಲೆ ಅಲೆಯಾಗಿ ಬರುವುದು ನನಗೆ. ದೂರದಲ್ಲಿದ್ದರೂ ನೀನುಹತ್ತಿರವೇ ಕಾಣಿಸುವೆ,ನನ್ನ ಮನಸ್ಸಿನೊಳಗೆಪ್ರತಿ ಕ್ಷಣ ನಗಿಸುವೆ. ಮರೆಯಲು ನೋಡಿದರೂಮರೆಯಲಾಗದ ಕಮಾನು,ಬಣ್ಣದ ಚಿಟ್ಟೆಗಳಂತೆಮನಸಲ್ಲಿ ಹಾರಾಡು ನೀನು. ಕಾಲ ತಿರುಗಿದರೂಪ್ರೀತಿ ತಿರುಗದು,ಉಸಿರು ಇರುವವರೆಗೆಈ ಬಾಂಧವ್ಯ ಮುರಿಯದು.ಮತ್ತೊಂದು ಜನ್ಮ ಬಂದರೂಮತ್ತೆ ನೀನೇ ಸಾಕು,ಪ್ರೀತಿಯ ಹಾಡಾಗಿಯೇನಮ್ಮ ಕಥೆ ಇರಬೇಕು. ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯದಲ್ಲಿನೀನೇ ನನ್ನ ಜೀವದ ಹಾಡು. ಕೊನೆಯ ಉಸಿರಿರುವವರೆಗೆಹೇಳುತ್ತೇನೆ ನಿನ್ನ ಹೆಸರು,ನೀನು ಎಲ್ಲಿದ್ದರೂನನ್ನ ಪ್ರೀತಿ ನಿನ್ನತ್ತಲೇ ಹರಿದು ಹೋಗು. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ನೀಲಿ ಆಕಾಶ – ನೀನೇ ನನ್ನ ಹಾಡು” Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ “ನೀ ನನಗೆ ನಾ ನಿನಗೆ”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ ನೀ ನನಗೆ ನಾ ನಿನಗೆ” ದತ್ತ ಪದ :- ಪ್ರಿಯ ನೀ ನನಗಾಗಿ..ಶೀರ್ಷಿಕೆ:- ನೀ ನನಗೆ ನಾ ನಿನಗೆ ನಿನಗೆಂದೆ ಕಾಯ್ದು ಕುಳಿತೆ ಆ ಇರುಳಲಿಮಾಮರವು ಜೊತೆಯಾಗಿ ಮೌನದಲಿಬಂದೆ ಬರುವನೆಂಬ ಭರವಸೆ ಮನದಲಿನೀ ಕೊಟ್ಟ ಮಾತು ನೆನೆದು ನಗುತಲಿ ಪ್ರಿಯ ನೀ ನನಗಾಗಿ ಮೊಳ ಮಲ್ಲಿಗೆಯತಂದೆ ತರವೆ ಎನ್ನುವ ಆಸೆಯತರದೆ ಇದ್ದರೆ ತೋರೆ ನಾ ನಿರಾಸೆಯಬಲ್ಲೆ ನಾ ನಿನ್ನ ಅಂತಃಕರಣದ ಪ್ರೀತಿಯ ತೇಲಿದೆ ಮನ ನಿನ್ನ ನಾಮವ ಆಲಿಸೆಹಾರಿದೆ ಹಕ್ಕಿಯಾಗಿ ಆಗಸ ಚುಂಬಿಸೆಬಲ್ಲೆ ಏನು ಮಿಡಿವ ಹೃದಯದ ಒತ್ತಾಸೆಆಗುವಾಸೆ ನಿನ್ನ ಮಡಿಲೊಳು ನಾ ನಿನ್ನ ಕೂಸೆ ನೀ ನನಗೆ ನಾ ನಿನಗೆ ಜೊತೆಯಾಗುವದುಂಬಿಯಂತಾಗಿ ಮಕರಂದ ಹೀರುವಹೊಸೆದು ಬೆಸೆಯೋಣ ಮಧುರ ಬಂಧವಬೆರೆಯೋಣ ಮರೆತು ಈ ಜಗವ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ “ನೀ ನನಗೆ ನಾ ನಿನಗೆ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಹೂವೆಂದು ಕೈಗೆತ್ತಿಕೊಂಡೆ ಮುಳ್ಳಾಗಿ ಚುಚ್ಚಿತುಬಳ್ಳಿಯೆಂದು ನೀರೆರೆದೆ ಹಾವಾಗಿ ಮೇಲೆರಗಿತು!! ಹೇಗೆ ತೋರಲಿ? ಹಸಿಯಾದ ಹೃದಯದ ಗಾಯವನುಕರುಣೆಗಾಗಿ ಕೈಮುಗಿದೆ ಕಠೋರವಾಗಿ ಎದೆಗಿರಿಯಿತು!! ನಂಬಿಸಿ ಅನಾಯಾಸವಾಗಿ ಗಿಚ್ಚಬಹುದೇ ಹೀಗೆ ಮುತ್ತಿಟ್ಟು ಕೆನ್ನೆಯನು,ಗಲ್ಲವನು ಜೋರಾಗಿ ಕಿರುಚಿ ಹೇಳಿದೆ..ಕಿವುಡಾಗಿ ಕಚ್ಚಿತು!! ಮಾಯಾವಿ ಮಾತುಗಳು ಮನಸ್ಸಿಗಿಳಿದವು..ಈ ಯುದ್ಧ ಸಾಕು ಬೇಡವೆಂದೇ,ಮೋಹವಾಗಿ ಪಾಶವಾಯ್ತು!! ದೀಪಾವಳಿಯ ರಾತ್ರಿ ಕತ್ತಲೆಯಿತ್ತು..ಬೆಳಕಿನ ಜೊತೆ ಸರಸಬೇಡವೆಂದೇ..ಬೀಜವಾಗಿ  ಸಸಿಯಾಯಿತು!! ಬಾಳ ಕದ್ದವನಿನ್ನೂ ಸಿಕ್ಕಿಬಿದ್ದಿಲ್ಲಾ,,ಬಗಲಲ್ಲಿ ಕಂದ ನಗುತ್ತಿಲ್ಲಾಹುಡುಕಾಡಿದೆ ಬದುಕೇ ಮರಳುಗಾಡಾಗಿ ಭಾಸವಾಯ್ತು!! ಮರುಕವಷ್ಟೇ ಹುಟ್ಟೀತು,ನಷ್ಟವನು ಯಾವುದರಿಂದ ತುಂಬಲಿ ಜಯ?ಅಮೃತವೆಂದು ಸೇವಿಸಿದೆ ವಿಷವಾಗಿ ಕೊಂದಿತು!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಅನುವಾದ

ಶೀಲಾ ಸುಭದ್ರಾದೇವಿಯವರ ತೆಲುಗು ಕವಿತೆ “ಸ್ನೇಹವೆಂಬ ಬಣ್ಣದ ವಿಷ” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್

ಅನುವಾದ ಸಂಗಾತಿ “ಸ್ನೇಹವೆಂಬ ಬಣ್ಣದ ವಿಷ” ತೆಲುಗು ಮೂಲ: ಶೀಲಾ ಸುಭದ್ರಾದೇವಿಕನ್ನಡಕ್ಕೆ: ಕೋಡೀಹಳ್ಳಿ  ಮುರಳೀ ಮೋಹನ್ ಇಪ್ಪತ್ತು ವರ್ಷಗಳ ಹಿಂದೆ ಒಂದು ಸ್ನೇಹದ ಕೂಟದಲ್ಲಿಸ್ನೇಹವೆಂಬ ಬಣ್ಣದ ವಿಷಸ್ನೇಹದ ಲೇಪ ಹಚ್ಚಿದ ಒಮ್ಮೆಗಿನ ಮಾತುಕತೆ –ಅದು ಮಾತುಕತೆ ಅಲ್ಲಮರೆಯಾಗದ ಗಾಯಕ್ಕೆ ಸವರಿದ ಉಪ್ಪುಕಣ್ಣುಗಳಲ್ಲಿ ಸುಳಿದಾಡಿದ ಸುಡಿಗುಂಡಿಗಳು ಹತ್ತು ವರ್ಷಗಳ ಹಿಂದೆಒಂದು ಮದುವೆ ಮಂಟಪದಲ್ಲಿಮದುವೆಯ ಸಂಭ್ರಮ ತುಟಿಗಳ ನಗುವಾದಾಗಸ್ನೇಹದ ನಗುವಿನೊಂದಿಗೆ ಒಮ್ಮೆಗಿನ ಮಾತುಕತೆಅದು ಮಾತುಕತೆ ಅಲ್ಲವಾಸಿಯಾದ ಪುಣ್ಣಿನ ಮೇಲೆ  ಕಾರದ ಮಳೆ ಐದು ವರ್ಷಗಳ ಹಿಂದೆ ಬಜಾರಿನಲ್ಲಿಹರಟೆಗಳ ಗಾಳಿಪಟಗಳನ್ನು ಹಾರಿಸುತ್ತಿದ್ದಾಗಗಾಳಿಯ ಹೊಡೆತದಂತೆ ಒಮ್ಮೆಗಿನ ಮಾತುಕತೆಅದು ಮಾತುಕತೆ ಅಲ್ಲಪಟಕ್ಕನೆ ಮಂಜಾ ದಾರಿಯನ್ನು ಕತ್ತರಿಸಿಕುತ್ತಿಗೆಗೆ ಸುತ್ತಿದ ವಿಷದ ನಗು ನಿನ್ನೆ ಮೊನ್ನೆಯ ರಾತ್ರಿಕನಸಿನಲ್ಲಿ ಕಣ್ಣು ಮುಚ್ಚಲೊಡನೆಕರೆ ಮಾಡಿ ಬಂದುಕುಣಿಯುತ್ತಿದ್ದ ಕನಸುಗಳನ್ನುನೆಟ್ಟಗೆ ಸುಟ್ಟುಹಾಕಿತುಅವಳು ಯಾರೇ ಆಗಿರಲಿ;ಸ್ನೇಹದ ಲೇಪ ಹಚ್ಚಿದ ಕಟುವಾದ ಮುಳ್ಳಿನಿಂದಗುಣವಾಗುತ್ತಿದ್ದ ಹೃದಯಗಾಯವನ್ನು ಕೆದಕಿದಾಗಆ ಕಣ್ಣುಗಳಲ್ಲಿ ಎಷ್ಟು ಮಿನುಗು!ಅವಳೋ  ಅಥವಾ ಅವನೋ  ಯಾರಾದರೇನು?ನಮ್ಮ ಸುತ್ತಲೂ ಅಂಥವರು ಎಷ್ಟು ಜನವೋ! ತೆಲುಗು ಮೂಲ: ಶೀಲಾ ಸುಭದ್ರಾದೇವಿಕನ್ನಡಕ್ಕೆ: ಕೋಡೀಹಳ್ಳಿ  ಮುರಳೀ ಮೋಹನ್

ಶೀಲಾ ಸುಭದ್ರಾದೇವಿಯವರ ತೆಲುಗು ಕವಿತೆ “ಸ್ನೇಹವೆಂಬ ಬಣ್ಣದ ವಿಷ” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್ Read Post »

You cannot copy content of this page

Scroll to Top