ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ

ಪುಸ್ತಕ ಸಂಗಾತಿ ವಿಜಯನಾಗ್‌ ಜಿ. “ಜಪಾನಿನ ಸಾಹಿತ್ಯ ಚರಿತ್ರೆ” ಆರ್. ದಿಲೀಪ್ ಕುಮಾರ್ ಪ್ರಿಯ ವಿಜಯ್ ನೀವು ಶ್ರದ್ಧೆ ಶ್ರಮಗಳಿಂದ ಅಧ್ಯಯನ ನಡೆಸಿ ರಚಿಸಿರುವ ‘ಜಪಾನಿನ ಸಾಹಿತ್ಯ ಚರಿತ್ರೆ’ ಕೃತಿಯನ್ನು ಓದಿದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ದಾಖಲಿಸುವಾಗ ನೆಲ, ಭಾಷೆ, ಸಾಹಿತ್ಯ ಕೃತಿಗಳ ಬಗೆಗೆ ಅಭಿಮಾನದಷ್ಟೇ, ಒಂದು ಅಂತರವನ್ನು ಕಾಯ್ದುಕೊಂಡು ರಚಿಸಬೇಕೆನ್ನುವ ಪರಂಪರೆಯನ್ನು ಒಪ್ಪುವವರು ಮಾತ್ರ ಹೀಗೆ ಬರೆಯಲು ಸಾಧ್ಯ. ಒಂದು ಅಂತರವನ್ನು ಕಾಯ್ದುಕೊಳ್ಳದೆ ಚರಿತ್ರೆಯನ್ನು ದಾಖಲಿಸುವ ಕೆಲಸವು ಸದ್ಯದಲ್ಲಿ ಕೆಡುಕಿನ ಬೀಜಗಳನ್ನು ಬಿತ್ತುತ್ತದೆ. ಅಂತರ ಕಾಯ್ದಕೊಳ್ಳದ ಚರಿತ್ರೆಯ ದಾಖಲೀಕರಣ ಪ್ರಕ್ರಿಯೆಯು ಅಕ್ಷರವಂತರು ಬದುಕುತ್ತಿರುವ ಸಮಾಜಕ್ಕೆ ಕೊಡುವ ಕೆಟ್ಟ ಕೊಡುಗೆಯಾಗುತ್ತದೆ. ಎಂದು ಬಲವಾಗಿ ನಂಬಿರುವ ನಿಮ್ಮಂತಹವರು ಸಾಹಿತ್ಯ ಚರಿತ್ರೆಯನ್ನು, ಅದು ನಿರ್ಮಾಣವಾಗಲು ಬುನಾದಿಯಾದ ಭೌಗೋಳಿಕ, ರಾಜಕೀಯ, ಭಾಷಿಕ ಪರಿಸರಗಳನ್ನು ಹೀಗೆ ಕಟ್ಟಿಕೊಟ್ಟಿರುವುದು ಯಥೋಚಿತವಾಗಿದೆ. ಬುದ್ಧ ಗುರುವಿನ ಆದಿಯಾಗಿ ಮನುಜಕುಲದೊಳಗಿನ ಕೆಡುಕಿನ ಬೇರನ್ನು ಕತ್ತರಿಸುವ, ಕತ್ತರಿಸಿ‌ ಆ ಬೇರನ್ನು ಸೂರ್ಯನ ಬಿಸಿಲಿಗೆ ಎತ್ತಿ ಹಿಡಿದು ಮತ್ತೆಂದೂ ಚಿಗುರದಂತೆ ಮಾಡುವ ಕೆಲಸವನ್ನು ಮಾಡಿದ್ದಾರೆಂದು ಹೇಳುವ ನಾವು, ಬದಲಾಗುತ್ತಿಲ್ಲವೆಂಬುದಕ್ಕೆ ಸದ್ಯದಲ್ಲಿ ಸಾಕ್ಷಿಯಾಗಿ ನಡೆ, ನುಡಿಗಳ ಹೆಜ್ಜೆಗುರುತುಗಳನ್ನು ಬಿಡುತ್ತಲೇ ಇದ್ದೇವೆ. ಆ ಕಾರಣದಿಂದ ಸದ್ಯದ ನಮ್ಮ ಬದುಕು ‘ನರನ ದುರಿತಾಂಕುರದ ಬೇರಿನ ಬೇಗೆ’ ಎಂದು ಕುಮಾರವ್ಯಾಸ ಹೇಳುತ್ತಾನಲ್ಲ, ಆ ಬೇಗೆಯನ್ನು ಸಂತಸವಾಗಿಟ್ಟುಕೊಂಡು ನಡೆಸುತ್ತಿರುವ ‘ಅನುದಿನದ ದಂದುಗ’ ಅನಿಸುತ್ತಿದೆ. ಇದು ಬದಲಾಗಬೇಕೆಂದರೆ ಚರಿತ್ರೆಯನ್ನು ಮಮಕಾರವಿಲ್ಲದೆ ಓದುವ, ಅರ್ಥೈಸಿಕೊಳ್ಳುವ ಮತ್ತೆಂದೂ ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯ ಹೆಜ್ಜೆಗಳನು ಇಡುವ ಕೆಲಸವನ್ನು ಮಾಡಬೇಕೆಂದು ಈ ಕೃತಿಯನ್ನು ಓದಿದೊಡನೆಯೆ ಮನಸ್ಸಿಗೆ ಬಂತು. ಜಪಾನಿನ ನೆಲ ಕೆಡುಕಿನ ಫಲವನ್ನು ಉಂಡಿರುವ ಚರಿತ್ರೆಯನ್ನು ಓದಿದರೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಆಗುತ್ತದೆ. ಅಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬಗೆಗೆ ಅಧ್ಯಯನದಿಂದ ಅಪಾರವಾದ ಪ್ರೀತಿ ಗೌರವಗಳನ್ನು ಬೆಳೆಸಿಕೊಂಡಿರುವ ನಿಮ್ಮಂತಹವರು ಮಾತ್ರ ಸಿಟ್ಟು, ಸೆಡವುಗಳಿಗೆ ಅವಕಾಶವನ್ನು ಕೊಡದೆ, “ಹಿಂದೆ ನಡೆದ ಘಟನೆಯಿದು, ನೋಡಿ” ಎಂದು ದಾಖಲಿಸುವಾಗ ನಿಲ್ಲುವ ನಿರ್ಮಮಕಾರದ ಸ್ಥಿತಿಯನ್ನು ಕಂಡರೆ ಬೆರಗಾಗುತ್ತದೆ. ಜಪಾನಿನ ನೆಲದಲಿ ಕೆಡುಕಿನ ಕಲೆಗಳನು ಬರೆದವರು ಇಂದು ಜಾಗತಿಕ ಮಟ್ಟದಲ್ಲಿ ಬಲು ಎತ್ತರದಲ್ಲಿ ನಿಂತು ಸಬಲರೆಂದು ಬೀಗಬಹುದು, ಆದರೆ ಚರಿತ್ರೆಯ ಅಧ್ಯಯನ ಅವರು ಬಿದ್ದಿರುವ ಪಾತಾಳವನ್ನು ಕಾಣಿಸುತ್ತಿದೆ. ಆ ದಿನ ಒಂದಷ್ಟು ಕ್ಷಣಗಳು ಕೆಡುಕನ್ನು ಹಿಡಿದು ತಡೆದು ನಿಲ್ಲಿಸಿದ್ದಿದ್ದರೆ ಕಾಲಕ್ಕೊಂದು ಘನತೆ – ಗೌರವಗಳು ಇರುತ್ತಿತ್ತೆಂದು ಅನಿಸುತ್ತದೆ. ಚಿಟ್ಟೆಯೊಂದು ಥಟ್ಟನೆ ಹಾರಿದಷ್ಟು ಕ್ಷಣದಲ್ಲಿ ಎಲ್ಲವೂ ನಡೆದು ಹೋಗಿದೆ. ಅದರ ಚಹರೆಗಳು ಇಂದಿಗೂ ಅಲ್ಲಿ ಉಳಿದಿದೆ. ಯಾವ ಫಲಾಪೇಕ್ಷೆಯನ್ನೂ ಇಟ್ಟುಕೊಳ್ಳದೆ ನೀವು ಮಾಡುತ್ತಿರುವ ಕೆಲಸ ನನ್ನಂತಹ ನೂರಾರು ಜನರಿಗೆ ಸಂತಸವನ್ನು ತಂದಿದೆ. ಭಾರತೀಯ ಮತ್ತು ಭಾರತದಿಂದ ಹೊರಗಿನ ಭಾಷೆಗಳ ಅಧ್ಯಯನ ನಡೆಸುವ, ಅನುವಾದವನ್ನೂ ಮಾಡುವ ನಿಮ್ಮನ್ನು ಕಂಡರೆ ವ್ರತ ಹಿಡಿದವರ ಹಾಗೆ ಕಾಣಿಸುತ್ತೀರಿ. ಸೃಜನಶೀಲ ಕೃತಿಗಳನ್ನು ವೇಗವಾಗಿ ನೀವು ಕನ್ನಡಕ್ಕೆ ತರುತ್ತಿರುವುದನ್ನು ಕಂಡರೆ ಸಂತಸದ ಜೊತೆಗೆ ಅಸೂಯೆ ಹುಟ್ಟುತ್ತದೆ. ನನ್ನಿಂದ ಅನುವಾದ ಮಾಡಲಾಗುತ್ತಿಲ್ಲವಲ್ಲ ಎಂದು. ನಿಮ್ಮ ಅನುವಾದದ ಕೆಲಸ ಭರದಿಂದ ಸಾಗಲಿ ಎಂದು ಹಾರೈಸುವೆ. ಸಸ್ನೇಹಪೂರ್ವಕವಾಗಿ ಆರ್. ದಿಲೀಪ್ ಕುಮಾರ್

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಬಾಲ್ಯ ವಿವಾಹ ನಿಷೇಧದ ಕಾನೂನು ಮತ್ತು ರುಕ್ಮಾಬಾಯಿ ಎಂಬ ದಿಟ್ಟ ಮಹಿಳೆ”ಹೇಮಂತ್‌ ಗೌಡ ಪಾಟೀಲ್

ಕಾವ್ಯ ಸಂಗಾತಿ ಹೇಮಂತ್‌ ಗೌಡ ಪಾಟೀಲ್ “ಬಾಲ್ಯ ವಿವಾಹ ನಿಷೇಧದ ಕಾನೂನು ಮತ್ತು ರುಕ್ಮಾಬಾಯಿ ಎಂಬ ದಿಟ್ಟ ಮಹಿಳೆ” ಕಾಲ್ಪನಿಕ ಚಿತ್ರ(ಗೂಗಲ್ ಕೃಪೆ) ಅದು 1887ರ ಸಮಯ. ಮುಂಬೈಯ ಹೈಕೋರ್ಟ್ ಆ ಮಹಿಳೆಗೆ ಎರಡು ಆಯ್ಕೆಗಳನ್ನು ನೀಡಿತು. ಬಾಲ್ಯದಲ್ಲಿ ನಿನ್ನನ್ನು ವಿವಾಹವಾದ ವ್ಯಕ್ತಿಯೊಂದಿಗೆ ಹೋಗಿ ಬದುಕನ್ನು ಕಟ್ಟಿಕೋ, ಇಲ್ಲವೇ ಜೈಲಿಗೆ ಹೋಗು ಎಂದು. ಆಕೆ ಜೈಲಿಗೆ ಹೋಗಲು ತಯಾರಾದಳು.  ಆಕೆಯ ಉತ್ತರ ಎಲ್ಲರಿಗೂ ದಿಗ್ಬ್ರಾಂತಿಯನ್ನು ಉಂಟು ಮಾಡಿತು. ಕೇವಲ ಭಾರತ ದೇಶವನ್ನು ಮಾತ್ರವಲ್ಲದೆ ಅಂದಿನ ಭಾರತ ದೇಶವನ್ನು ಆಳುತ್ತಿದ್ದ ಇಂಗ್ಲೆಂಡ್ ದೇಶದವರೆಗೆ ಈ ವಿಷಯದ ಕುರಿತ ಚರ್ಚೆ ಮುಂದುವರೆದು ಕಾನೂನಿನ ಕ್ರಮದಲ್ಲಿ ಬದಲಾವಣೆಯನ್ನು ಕೈಗೊಂಡು ನಂತರದ ಕೋಟ್ಯಾಂತರ ಹೆಣ್ಣುಮಕ್ಕಳ ಪಾಲಿಗೆ ವರದಾನವಾಯಿತು. ಕೇವಲ ಒಬ್ಬ ಹೆಣ್ಣುಮಗಳ ದಿಟ್ಟ ನಿರ್ಧಾರ ಒಂದು ಇಡೀ ಬ್ರಿಟೀಷ್ ಸಾಮ್ರಾಜ್ಯವನ್ನು ಮೊಳಕಾಲೂರಿ ನಿಲ್ಲುವಂತೆ ಮಾಡಿತು. ಆ ಹೆಣ್ಣು ಮಗಳೇ ರುಕ್ಮಾಬಾಯಿ.  1864 ರಲ್ಲಿ ಮುಂಬೈಯಲ್ಲಿ ಜಯಂತಿ ಬಾಯಿ ಎಂಬ ಹೆಣ್ಣು ಮಗಳನ್ನು ಕೇವಲ 14 ವರ್ಷ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಡಲಾಯಿತು. ತನ್ನ 15ನೇ ವಯಸ್ಸಿಗೆ ಆಕೆ ಹೆಣ್ಣು ಮಗುವೊಂದನ್ನು ಹಡೆದಳು ಹಾಗೂ 17ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ವಿಧವೆಯಾದಳು. ಮುಂದೆ ತನ್ನ ಮಗಳು ಎಂಟು ವರ್ಷದವಳಿದ್ದಾಗ ಆಕೆಯ ತಾಯಿ ಡಾ. ಸಖಾರಾಮ್ ಅರ್ಜುನ್ ಎಂಬ ವೃತ್ತಿಯಿಂದ ತಜ್ಞ ವೈದ್ಯ ಹಾಗೂ ಪ್ರವೃತ್ತಿಯಿಂದ ಸಮಾಜ ಸುಧಾರಕರಾಗಿದ್ದ ವ್ಯಕ್ತಿಯನ್ನು ವಿವಾಹವಾದಳು. ತನ್ನ ಕಾಲದ ಪುರುಷ ಸಮಾಜದ ಯೋಚನೆಗಳಿಗಿಂತ ವಿಭಿನ್ನವಾಗಿ ಯೋಚಿಸುತ್ತಿದ್ದ ಡಾ. ಸಖಾರಾಮ್ ಹೆಣ್ಣು ಮಕ್ಕಳು ಸುಶಿಕ್ಷಿತರಾಗಬೇಕು ಎಂದು ಬಯಸುತ್ತಿದ್ದರು. ತನ್ನ ಮನೆಯ ತುಂಬಾ ಪುಸ್ತಕಗಳನ್ನು ಜೋಡಿಸಿದ್ದ ಆತ ರುಕ್ಮ ಬಾಯಿಗೆ ಓದಿನಲ್ಲಿ ಆಸಕ್ತಿಯನ್ನು ವಹಿಸಲು ಪ್ರೋತ್ಸಾಹಿಸಿದ.ಸಮಾಜ ಸುಧಾರಕನಾದರೂ ಕೂಡ ಆತನಿಗೂ ಕೂಡ ತನ್ನದೇ ಆದ ಕೆಲವು ಸಾಮಾಜಿಕ ಮಿತಿಗಳು ಇದ್ದವು.  ಅಂತೆಯೇ ರುಕುಮಾ ಬಾಯಿ 11 ವರ್ಷದವಳಾದಾಗ ಆಕೆಗೆ 19ರ ಹರಯದ ದಾದಾ ಜೀ ಭಿಕಾಜಿ ಎಂಬ ವ್ಯಕ್ತಿಯೊಡನೆ ಜಯಂತಿ ಬಾಯಿಯ ತಂದೆ ಸನಾತನ ಕಾಲದಿಂದಲೂ ಆಚರಿಸುತ್ತಿದ್ದ ರೀತಿಯಲ್ಲಿ ಎಲ್ಲ ಭಾರತೀಯ ಸಂಪ್ರದಾಯಗಳನ್ನು ಪಾಲಿಸಿ ಮದುವೆ ಮಾಡಿದರು. ಪುಟ್ಟ ಬಾಲಕಿಯಾದ ಆಕೆಗೆ ಯಾವುದೇ ರೀತಿಯ ಆಯ್ಕೆಗಳಾಗಲಿ, ಮದುವೆ ಮಾಡಿಕೊಳ್ಳಲು ಒಲ್ಲೆ  ಎಂದು ಹೇಳುವ ಧೈರ್ಯವಾಗಲಿ ಇರಲಿಲ್ಲ. ಮೌನ ಒಪ್ಪಿಗೆ ಆಕೆಯದಾಗಿತ್ತು.ಅಂದಿನ ಸಮಾಜದ ನಿಯಮಾವಳಿಗಳ ಪ್ರಸಾರ ಮದುವೆ ಆದ ನಂತರವೂ ಕೂಡ ಋತುಮತಿಯಾಗುವವರೆಗೆ ತನ್ನ ತವರು ಮನೆಯಲ್ಲಿಯೇ ಉಳಿಯಬೇಕಾದ ಕಾರಣ ಆಕೆ ತನ್ನ ಶಿಕ್ಷಣವನ್ನು ರಹಸ್ಯವಾಗಿಯೇ ಮುಂದುವರಿಸಿದಳುಆಕೆಯನ್ನು ಮದುವೆಯಾದ ವ್ಯಕ್ತಿ ಅಂದಿನ ಸಾಮಾಜಿಕ ನೀತಿ ನಿಯಮಾವಳಿಗೆ ಬದ್ಧನಾಗಿದ್ದ. ತನ್ನ ಶಿಕ್ಷಣವನ್ನು ಪೂರೈಸಿದ ರುಕ್ಮಭಾಯಿ ಅತ್ಯಂತ ಜಾಣ ಹಾಗೂ ಸಂಸ್ಕಾರವಂತ ಹೆಣ್ಣುಮಗಳಾಗಿ ಪರಿವರ್ತಿತಳಾಗಿದ್ದರು. ಆಕೆಯಲ್ಲಿ ಆಧುನಿಕ ವಿಚಾರಧಾರೆಗಳ ಪ್ರಭಾವದಿಂದ ತನ್ನದೇ ಆದ ವೈಯುಕ್ತಿಕ ಅಭಿಪ್ರಾಯಗಳು ಹರಳುಗಟ್ಟಿದ್ದವು. ಅಂದಿನ ಕಾಲದ ಇತರ ಸಮಾಜ ಸುಧಾರಕರೊಂದಿಗಿನ ಭೇಟಿ, ಅಭಿಪ್ರಾಯ, ವಿಚಾರ ವಿನಿಮಯಗಳು, ಚರ್ಚೆಗಳು, ಭಾಷಣಗಳು, ಉಪನ್ಯಾಸಗಳು ಆಕೆಯ ಮೇಲೆ ಪರಿಣಾಮವನ್ನು ಬೀರಿದ್ದವು. ಆಕೆಯ ಪತಿ ದಾದಾಜಿ ತನ್ನ ಸೋಮಾರಿತನದ ಕಾರಣದಿಂದ ಶಾಲೆಯಿಂದ ಹೊರ ಹಾಕಲ್ಪಟ್ಟಿದ್ದ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿದ್ದ. ದುಶ್ಚಟಗಳಿಗೆ ದಾಸನಾದ ಆತನ ಚಿಕ್ಕಪ್ಪನ ಕುಮ್ಮಕ್ಕು ಕೂಡ ಆತನಿಗಿತ್ತು.ತನ್ನೆಲ್ಲ ಆರ್ಥಿಕ ತೊಂದರೆಗಳನ್ನು ನಿವಾರಿಸಲು ತನ್ನ ಪತ್ನಿಯ ತವರು ಮನೆ ಆತನ ಪಾಲಿಗೆ ಅಲ್ಲಾವುದ್ದೀನನ ದೀಪವಾಗಲಿ ಎಂಬುದು ಆತನ ಬಯಕೆಯಾಗಿತ್ತು.  1884 ರಲ್ಲಿ 20 ವರ್ಷದ ರುಕುಮಾಬಾಯಿಯನ್ನು ಆತ ತನ್ನೊಂದಿಗೆ ಬಂದು ವಾಸಿಸಲು ಕೇಳಿಕೊಂಡ… ಆದರೆ ಆತನ ಕೆಟ್ಟ ಚಟಗಳ ಕುರಿತು ಅರಿವಿದ್ದ ಆಕೆ ಆತನ ಕೋರಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದಳು.ಆಕೆಯನ್ನು ಪತ್ನಿಯಾಗಿ ಮನೆ ತುಂಬಿಸಿಕೊಂಡು ತನ್ನೆಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಆಶಿಸಿದ್ದ ದಾದಾಜಿ ಶತಾಯಗತಾಯ ಆಕೆಯನ್ನು ಹೊಂದಲೇಬೇಕೆಂಬ ಹಟದಿಂದ ನ್ಯಾಯಾಲಯದ ಮೊರೆ ಹೊಕ್ಕ. 19ನೇ ಶತಮಾನದಲ್ಲಿ ಸಾರ್ವಜನಿಕವಾಗಿ ಅತ್ಯಂತ ಚರ್ಚೆಗೆ ಒಳಗಾದ ಕಾನೂನು ಹೋರಾಟ ದಾದಾಜಿ ಮತ್ತು ರುಕ್ಮಬಾಯಿ ಅವರದಾಗಿತ್ತು. ದಾದಾ ಜೀ ದಾಂಪತ್ಯದ ಹಕ್ಕುಗಳ ಮರುಸ್ಥಾಪನೆಯ ಪ್ರಾಸ್ಟಿಟ್ಯೂಷನ್ ಆಫ್ ಕಾಂಜುಗಲ್ ರೈಟ್ಸ್ ದಾವೆಯನ್ನು ಪತ್ನಿಯ ಮೇಲೆ ಹೂಡಿದ್ದ. ಈ ಹಕ್ಕಿನ ಪ್ರಕಾರ ಪತ್ನಿ ಆತನ ಸೊತ್ತಾಗಿದ್ದು ಕಾನೂನು ಆಕೆ ತನ್ನ ಪತಿಯ ಜೊತೆಯಲ್ಲಿ ಬಾಳುವೆ ಮಾಡಬೇಕು ಎಂದು ಸೂಚಿಸಿತು. ಇದಕ್ಕೆ ರುಕ್ಮಾ ಬಾಯಿಯ ಉತ್ತರ ಹೀಗಿತ್ತು… ಅರಿಯದ ಅಬೋಧ ವಯಸ್ಸಿನಲ್ಲಿ ತನಗೆ ಮದುವೆ ಮಾಡಿಕೊಡಲಾಗಿದ್ದು ತಾನು ಅಸಹಾಯಕಳಾಗಿದ್ದೆ. ಮದುವೆ ಎಂದರೆ ಏನು ಎಂಬುದೇ ತನಗೆ ಗೊತ್ತಿರಲಿಲ್ಲ. ಅದೂ ಅಲ್ಲದೆ ಹೆಣ್ಣುಮಕ್ಕಳನ್ನು ಹೊಲ ಮನೆ,ದನ ಕರು ಒಡವೆಗಳ ರೀತಿಯಲ್ಲಿ ಆಸ್ತಿಯಂತೆ ಭಾವಿಸಬಾರದು ಎಂದು ಆಕೆ ವಾದ ಹೂಡಿದಳು. ಹೆಣ್ಣು ಮಕ್ಕಳು ಪುರುಷರಷ್ಟೇ ಸರಿ ಸಮಾನವಾಗಿ ಬದುಕುವ ಕಣ್ಣು ಹೊಂದಿದ್ದಾರೆ ಅವರನ್ನು ತಮ್ಮ ಹಕ್ಕಿನ ಸೊತ್ತಾಗಿ ಬೇರೆಯವರು ಭಾವಿಸಬಾರದು ಎಂದು ಆಕೆ ನ್ಯಾಯಾಲಯವನ್ನು ಒತ್ತಾಯಿಸಿದಳು. ಇದಕ್ಕೂ ಮುನ್ನ ಈ ರೀತಿ ಹೆಣ್ಣು ಮಕ್ಕಳ ಹಕ್ಕಿನ ಕುರಿತಾಗಿ ನ್ಯಾಯಾಲಯದ ಮುಂದೆ ಯಾರೂ ಹಕ್ಕೊತ್ತಾಯವನ್ನು ಮಂಡಿಸಿರಲಿಲ್ಲ. 1885ರಲ್ಲಿ ಜಸ್ಟಿಸ್ ರಾಬರ್ಟ್ ಪಿನ್ಹೇ ಆಕೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಾವು ಪಾಲಿಸುತ್ತಿರುವ ಬ್ರಿಟಿಷ್ ಕಾನೂನು ಬಾಲ್ಯ ವಿವಾಹ ಮಾಡಲ್ಪಟ್ಟ  ಅಬೋಧ ರುಕ್ಮಭಾಯಿಗೆ ಸಂಬಂಧ ಪಡುವುದಿಲ್ಲ ಎಂದು ತೀರ್ಪು ನೀಡಿತು. ಸಂಪ್ರದಾಯವಾದಿ ಭಾರತೀಯರು ಸಿಡಿದೆದ್ದರು. ಹಿಂದೂ ರೀತಿ ರಿವಾಜುಗಳನ್ನು ಪ್ರಶ್ನಿಸುವ ನ್ಯಾಯಾಲಯದ ವಿರುದ್ಧ ಸನಾತನವಾದಿಗಳು ದನಿಯೆತ್ತಿದರು.ಉಕ್ಕಿನ ಮನುಷ್ಯ ಎಂದೇ ಭಾರತೀಯ ಸ್ವತಂತ್ರ ಇತಿಹಾಸದಲ್ಲಿ ಹೆಸರಾದ ಬಾಡೋಲಿಯ ಸರದಾರ ಬಾಲಗಂಗಾಧರನಾಥ ತಿಲಕ್ ಅವರು ರುಕ್ಮಾಭಾಯಿಯ ಆಂಗ್ಲ ಶಿಕ್ಷಣದ ಪರಿಣಾಮವೇ ಆಕೆಯ ಈ ತೀರ್ಮಾನಕ್ಕೆ ಕಾರಣ ಎಂದು ಹೇಳಿದರು   ಭಾರತದ ಹಿಂದುತ್ವ ಅಪಾಯದಲ್ಲಿದೆ ಎಂದು ಸಾರ್ವಜನಿಕರು ಕೂಗು ಹಾಕಿದರು . 1886 ರಲ್ಲಿ ಮತ್ತೆ ಮರುಪರಿಶೀಲನೆಗೆ ಒಳಪಟ್ಟ ತೀರ್ಪನ್ನು ಹೆಚ್ಚುವರಿ ನ್ಯಾಯಾಲಯದ ಅಂದಿನ ಜಡ್ಜ್ ಆಗಿದ್ದ ಜಸ್ಟಿಸ್ ಫರಾನ್ ಅವರು ರುಕ್ಮಬಾಯಿ ಮರಳಿ ತನ್ನ ಪತಿಯ ಮನೆಗೆ ಹೋಗಬೇಕು ಇಲ್ಲವೇ ಆರು ತಿಂಗಳ ಕಾಲ ಕಾರಾಗ್ರಹ ವಾಸವನ್ನು ಅನುಭವಿಸುವ ನಿಟ್ಟಿನಲ್ಲಿ ಜೈಲಿಗೆ ಹೋಗಬೇಕು ಎಂದು ಆದೇಶವನ್ನು ಹೊರಡಿಸಿದರು.  ಇದೀಗ ರುಕ್ಮಭಾಯಿತಾನು ಜೈಲಿಗೆ ಹೋದರೂ ಪರವಾಗಿಲ್ಲ, ಆದರೆ ತನ್ನ ಒಪ್ಪಿಗೆ ಇಲ್ಲದೆ ಮಾಡಿದ ವಿವಾಹವನ್ನು ಹಾಗೂ ವಲ್ಲದ ಗಂಡನೊಂದಿಗಿನ ಬದುಕನ್ನು ನಡೆಸಲಾರೆ ಎಂಬ ಹೇಳಿಕೆ ನೀಡಿದ್ದು ಐತಿಹಾಸಿಕ ಸಮರ್ಥನೆಯಾಯಿತು. ಆಕೆಯ ಮಾತುಗಳು, ಕೇಸಿನ ವಿವರಗಳು ಸಮುದ್ರಗಳನ್ನು ದಾಟಿ ಬ್ರಿಟಿಷ್ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟವಾದವು. ಇಂಗ್ಲೆಂಡಿನ ಪ್ರಸಿದ್ಧ ಮಹಿಳಾ ನಿಯತಕಾಲಿಕವೊಂದು ರುಕ್ಮಾಬಾಯಿಯ ನಿಲುವನ್ನು ಸಮರ್ಥಿಸಿತು, ಮಾತ್ರವಲ್ಲದೇ ಪ್ರಸಿದ್ಧ ತತ್ವಜ್ಞಾನಿಯಾಗಿದ್ದ ಮ್ಯಾಕ್ಸ್ ಮುಲ್ಲರ್ ರುಕ್ಮಾಭಾಯಿಯ ಆಂಗ್ಲ ಶಿಕ್ಷಣವು ಆಕೆಗೆ ತನ್ನ ಆಯ್ಕೆಗಳ ಕುರಿತು ಸ್ಪಷ್ಟ ನಿಲುವನ್ನು ಹೊಂದಲು ಮತ್ತು ನಿರ್ಣಯಗಳನ್ನು ಕೈಗೊಳ್ಳಲು ಅತ್ಯುತ್ತಮ ನ್ಯಾಯಾಧೀಶನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೆ ನೀಡಿದರು. ಇದೇ ಸಮಯದಲ್ಲಿ ರುಕ್ಮಾ ಬಾಯಿ ಅನಾಮಿಕವಾಗಿದಿ ಹಿಂದೂ ಲೇಡಿ ಎಂಬ ಹೆಸರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ನಿಯತಕಾಲಿಕಕ್ಕೆ ಬಾಲ್ಯ ವಿವಾಹವನ್ನು ವಿರೋಧಿಸುವ ನಿಟ್ಟಿನಲ್ಲಿ ಲೇಖನಗಳನ್ನು ಬರೆಯಲು ಆರಂಭಿಸಿದ್ದಳು. ತನ್ನ 14ನೇ ಹುಟ್ಟುಹಬ್ಬಕ್ಕೆ ಮುನ್ನವೇ ಮಕ್ಕಳನ್ನು ಪಡೆಯಲು ಹೆಣ್ಣು ಮಕ್ಕಳನ್ನು ಒತ್ತಾಯಿಸುವ ಸಂಪ್ರದಾಯವನ್ನು ವಿರೋಧಿಸಿ ಆಕೆ ಬರೆದಳು. ಕನಸುಗಳ ಸಾವಿನ ಕುರಿತು ಹೆಣ್ಣು ಮಕ್ಕಳ ಅಂತಃಸತ್ವವನ್ನು ಹೀರಿ ಎಸೆಯುವ, ಅವರ ಬಾಲ್ಯವನ್ನು ಕಸಿಯುವ ಕುರಿತು ಆಕೆ ಬರೆದ ಲೇಖನಗಳು ಬುದ್ಧಿವಂತರ, ವಿಚಾರ ಜೀವಿಗಳ ಮನಸ್ಸನ್ನು ತಾಕಿದವು. ಬಾಲ್ಯವಿವಾಹದಂತಹ ಕೆಟ್ಟ ಸಂಪ್ರದಾಯವು ನನ್ನ ಜೀವನದ ಎಲ್ಲಾ ಸಂತೋಷಗಳನ್ನು ಕಸಿದುಕೊಂಡಿತ್ತು ಎಂದು ಆಕೆ ಬರೆದಳು. ನನ್ನ ಬದುಕಿನಲ್ಲಿ ವಿವಾಹವು ನನ್ನ ವಿದ್ಯೆ ಮತ್ತು ಮಾನಸಿಕ ಬೆಳವಣಿಗೆಗೆ ಅಡ್ಡ ಬಂದಿತು ಎಂದು ಹೇಳಿದ ಆಕೆ ಅಂದು ಬ್ರಿಟನ್ ಸಾಮ್ರಾಜ್ಯವನ್ನು ಆಳುತ್ತಿದ್ದ ರಾಣಿ ವಿಕ್ಟೋರಿಯಾಗೆ ಪತ್ರ ಬರೆದು ತನಗೆ ನ್ಯಾಯ ದೊರಕಿಸಿಕೊಡಲು ಕೇಳಿಕೊಂಡಳು. ಹಿಂದೂ ಕಾನೂನಿನಲ್ಲಿ ವೈವಾಹಿಕ ವಯಸ್ಸನ್ನು ಹೆಣ್ಣು ಮಕ್ಕಳಿಗೆ 15 ವರ್ಷ ಮೇಲ್ಪಟ್ಟು ಹಾಗೂ ಗಂಡು ಮಕ್ಕಳಿಗೆ 20 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾಡುವ ಮೂಲಕ ಬಾಲ್ಯ ವಿವಾಹವನ್ನು ನಿಷೇಧಿಸಲು ಕೋರಿಕೊಂಡಳು.ಬಾಲ್ಯ ವಿವಾಹವನ್ನು ನಿಷೇಧಿಸುವ ಮೂಲಕ ಹಿಂದೂ ಯುವತಿಯರಿಗೆ ಮಹದುಪಕಾರ ಮಾಡಿ ಎಂದು ಕೇಳಿಕೊಂಡಳು. 1888 ರಲ್ಲಿ ಅಂತಿಮವಾಗಿ ಒಂದು ಒಪ್ಪಂದಕ್ಕೆ ಬರಲಾಯಿತು.2 ಸಾವಿರ ರೂ ಹಣವನ್ನು ದಾದಾಜಿಗೆ ನೀಡುವ ಮೂಲಕ ಮದುವೆಯನ್ನು ರದ್ದುಗೊಳಿಸುವ ಹಾಗೂ ರುಕ್ಮಾಭಾಯಿಯ ಮೇಲೆ ಹೊರಿಸಿರುವ ಎಲ್ಲ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಒಪ್ಪಂದವಾಗಿತ್ತದು. ಅಂತಿಮವಾಗಿ ಆಕೆ ಪಂಜರದಿಂದ ಹೊರ ಬಿಟ್ಟ ಪಕ್ಷಿಯಾದಳು.ಇಲ್ಲಿಗೆ ಆಕೆಯ ಕಥೆ ಮುಗಿಯಲಿಲ್ಲ.  ಇಂಗ್ಲೆಂಡಿನ ಡಾಕ್ಟರ್ ಎಡಿತ್ ಪೆಚ್ಚಿ ಎಂಬ ತಜ್ಞ ವೈದ್ಯರ ಸಹಾಯ ಮತ್ತು ಸಹಕಾರದಿಂದ 1894 ರಲ್ಲಿ ಆಕೆ ವೈದ್ಯಕೀಯ ಪದವಿ ಪಡೆಯಲು ಇಂಗ್ಲೆಂಡಿಗೆ ತೆರಳಿದಳು. ಮಹಿಳೆಯರಿಗಾಗಿಯೇ ಇದ್ದ ಲಂಡನ್ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಆಕೆ ಓದಿ ವೈದ್ಯಕೀಯ ಪದವಿಯನ್ನು ಪಡೆದಳು. ಮುಂದೆ ಮರಳಿ ಭಾರತಕ್ಕೆ ಬಂದ ಆಕೆ ವೈದ್ಯಕೀಯ ಚಿಕಿತ್ಸಕಳಾಗಿ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯೆ ಎಂದು ರಾಷ್ಟ್ರದ ಇತಿಹಾಸದಲ್ಲಿ ದಾಖಲಾದಳು.  ಮುಂದಿನ 35 ವರ್ಷಗಳ ಕಾಲ ರುಕ್ಮಭಾಯಿ ಸೂರತ್ ಮತ್ತು ರಾಜಕೋಟ್ಗಳಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಎಲ್ಲ ಜಾತಿ, ವರ್ಗಗಳ ಜನರ ಚಿಕಿತ್ಸೆಯನ್ನು ಕೈಗೊಂಡ ಆಕೆ ಸಾಕಷ್ಟು ಹೆಣ್ಣು ಮಕ್ಕಳಿಗೆ ನರ್ಸಿಂಗ್ ಕ್ಷೇತ್ರದಲ್ಲಿ ತರಬೇತಿ ನೀಡಿದಳು. ಮತ್ತೆ ನೂರಾರು ಹೆಣ್ಣು ಮಕ್ಕಳಿಗೆ ಶುಶ್ರೂಷೆ ಮತ್ತು ಸ್ವಚ್ಛತೆಯ ಕುರಿತು ತರಬೇತಿ ನೀಡಿ ಅವರನ್ನು ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಿದರು. ಮಾರಣಾಂತಿಕ ಕಾಯಿಲೆಗಳು ದೇಶದಲ್ಲಿ ತಾಂಡವವಾಡುತ್ತಿದ್ದಾಗಲೂ ಆಕೆ ಸಾವಿಗೆ ಅಂಜದೆ, ರೋಗಕ್ಕೆ ಹಿಂಜರಿದು ಧೈರ್ಯಗೆಡದೆ ತಾನೇ ಮುಂಚೂಣಿಯಲ್ಲಿ ನಿಂತು ರೋಗಿಗಳನ್ನು ತಪಾಸಿಸಿ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿದಳು. ಹೋರಾಟ ಆಕೆಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು ತನ್ನ ವೃತ್ತಿ ಜೀವನದಿಂದ ನಿವೃತ್ತಿಯಾದ ನಂತರವೂ ಕೂಡ ಆಕೆ ಪರ್ದಾ ಪದ್ಧತಿಯನ್ನು ವಿರೋಧಿಸಿ ಹೆಣ್ಣು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿದರು. ಭಾರತೀಯ ಸಭ್ಯತೆಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಬಲವಂತದಿಂದ ಮನೆಯಲ್ಲಿ ಕೂಡಿ ಹಾಕುವುದನ್ನು ವಿರೋಧಿಸಿ ಆಕೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತಹ ಶಾಲೆಯನ್ನು ತೆರೆಯಲು ತನ್ನ ಮನೆಯನ್ನೇ ಬಿಟ್ಟುಕೊಟ್ಟಳು.  ಅಂದು ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ರುಕ್ಮಬಾಯಿ ತೆಗೆದುಕೊಂಡ ಒಂದು ದಿಟ್ಟ ನಿರ್ಧಾರದ ಪರಿಣಾಮವಾಗಿ ತಲೆ ತಲೆಮಾರುಗಳ ಹೆಣ್ಣು ಮಕ್ಕಳು ನೆಮ್ಮದಿಯ ಬಾಲ್ಯವನ್ನು ಕಳೆಯಲು ಸಾಧ್ಯವಾಗಿದೆ. 1888 ರ ರುಕುಮಾಬಾಯಿ ಮೊಕದ್ದಮೆಯ ಐತಿಹಾಸಿಕ ತೀರ್ಪಿನ ಮೂರು ವರ್ಷಗಳ ನಂತರ 1891ರಲ್ಲಿ ಬ್ರಿಟಿಷ್ ಸರ್ಕಾರವು ‘ ದ ಏಜ್ ಆಫ್ ಕನ್ಸೆಂಟ್ ಆಕ್ಟ್’ ಅನ್ನು ಜಾರಿ ಮಾಡಿತು. ನಿರ್ದಿಷ್ಟ ವಿಷಯಗಳ ಕುರಿತು ತೀರ್ಮಾನವನ್ನು ಕೈಗೊಳ್ಳುವ ಹಕ್ಕನ್ನು ನೀಡಲಾಯಿತು. ವೈವಾಹಿಕ ವಯಸ್ಸಿನ ಮಿತಿಯನ್ನು ಹೆಚ್ಚಿಸಲಾಯಿತು. ರುಕ್ಮಾಭಾಯಿಯ ಮೊಕದ್ದಮೆಯು ಮೊಟ್ಟಮೊದಲ ಬಾಲ್ಯ ವಿವಾಹ ವಿರುದ್ಧದ ಪ್ರಕರಣ ಎಂದು ದಾಖಲಾಯಿತು, ಆದರೆ ಅದುವೇ ಕೊನೆಯ ಪ್ರಕರಣವಾಗಬೇಕಿತ್ತು… ದುರ್ದೈವವಶಾತ್ ಇಂದಿಗೂ ಕೂಡ ಬಾಲ್ಯ ವಿವಾಹ ತೆರೆ ಮರೆಯಲ್ಲಿ ನಡೆಯುತ್ತಲೇ ಇವೆ ಹಾಗೂ ಅದರ ಪರಿಣಾಮವಾಗಿ ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನಲ್ಲಿ ಅನಿರೀಕ್ಷಿತ ಗರ್ಭ ಧರಿಸುವಿಕೆ, ಹೆರಿಗೆಯಲ್ಲಿ ಸಾವು, ತಾನೇ ಒಂದು ಮಗುವಾಗಿ ತನ್ನಲ್ಲಿ ಆ ಸಾಮರ್ಥ್ಯ ಇಲ್ಲದೆ ಇದ್ದಾಗಲೂ ಕೂಡ ತನ್ನದೇ ಮಗುವನ್ನು ಹೆರುವ, ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ

“ಬಾಲ್ಯ ವಿವಾಹ ನಿಷೇಧದ ಕಾನೂನು ಮತ್ತು ರುಕ್ಮಾಬಾಯಿ ಎಂಬ ದಿಟ್ಟ ಮಹಿಳೆ”ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

ಸಾವಿಲ್ಲದ ಶರಣರು,ಕಾಲಜ್ಞಾನಿ ಸಾಮರಸ್ಯದ ಶರಣ  ಕೊಡೇಕಲ್ ಬಸವಣ್ಣನವರು

ಸಾವಿಲ್ಲದ ಶರಣರು,ಕಾಲಜ್ಞಾನಿ ಸಾಮರಸ್ಯದ ಶರಣ  ಕೊಡೇಕಲ್ ಬಸವಣ್ಣನವರು

ಸಾವಿಲ್ಲದ ಶರಣರು,ಕಾಲಜ್ಞಾನಿ ಸಾಮರಸ್ಯದ ಶರಣ  ಕೊಡೇಕಲ್ ಬಸವಣ್ಣನವರು Read Post »

ಇತರೆ

“ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ !”ಜಯಶ್ರೀ.ಜೆ. ಅಬ್ಬಿಗೇರಿ

“ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ !”ಜಯಶ್ರೀ.ಜೆ. ಅಬ್ಬಿಗೇರಿ

“ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ !”ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ Read Post »

ಇತರೆ

ಟಿಶ್ಯೂ ಪೇಪರ್ ಬಳಸಬೇಕೆ? ಬೇಡವೇ?…. ಒಂದು ಲೆಕ್ಕಾಚಾರ-ವೀಣಾ ಹೇಮಂತ್‌ ಗೌಡ ಪಾಟೀಲ್

ಲೇಖನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ ಟಿಶ್ಯೂ ಪೇಪರ್ ಬಳಸಬೇಕೆ? ಬೇಡವೇ?…. ಒಂದು ಲೆಕ್ಕಾಚಾರ- ಯಾವುದೇ ಸಮಾರಂಭಕ್ಕೆ ಹೋಗಲಿ ಅಲ್ಲಿ ನಾವು ಊಟದ ತಟ್ಟೆಯ ಜೊತೆಗೆ ಪಡೆಯುವ ಟಿಶ್ಯೂ ಪೇಪರನಿಂದ ತಟ್ಟೆಯನ್ನು ಒರೆಸಿ ಎಸೆದು ಮತ್ತೊಂದನ್ನು ಕೇಳಿ ಪಡೆಯುತ್ತೇವೆ. ಇನ್ನು ಹೋಟೆಲ್ಗಳಿಗೆ ಹೋದಾಗಲಂತೂ ಒಂದು ಬಳಸುವ ಕಡೆ ನಾಲ್ಕೈದು ಟಿಶ್ಯೂ ಪೇಪರ್ ಗಳನ್ನು ಬಳಸಿ ಇಡುತ್ತೇವೆ. ಮುಖದ ಮೇಲಿನ ಎಣ್ಣೆಯ ಪಸೆಯನ್ನು ಹೋಗಲಾಡಿಸಲು, ಧೂಳಿನ ಕಣಗಳನ್ನು ಹಾಗೂ  ಬೆವರನ್ನು ಒರೆಸಿಕೊಳ್ಳಲು. ಟೇಬಲ್, ಲ್ಯಾಪ್ಟಾಪ್, ಡೆಸ್ಕ ಟಾಪ್  ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳ  ಮೇಲ್ಮೈಗಳನ್ನು ಸ್ವಚ್ಛಗೊಳಿಸಲು, ವಾಶ್ರೂಮ್ ಗಳಲ್ಲಿ ಹೀಗೆ ಹತ್ತು ಹಲವು ಕಡೆ ನಾವು ಕೇವಲ ಒಂದು ಬಾರಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಗಳನ್ನು ಬಳಸುತ್ತೇವೆ. ಬಳಸುವುದಕ್ಕಿಂತ ಬಿಸಾಡುವುದೇಹೆಚ್ಚಾಗಿದೆ. ಖರ್ಚಿನ ಬಾಬತ್ತು ಎಂದು ಇನ್ನೂ ಕೆಲ ಮನೆಗಳಲ್ಲಿ ಟಿಶ್ಯೂ ಪೇಪರ್ ದೈನಂದಿನ ಬದುಕಿನಲ್ಲಿ ಕಾಲಿಟ್ಟಿಲ್ಲ ನಿಜ ಆದರೆ ಕೆಲವರ ಮನೆಗಳಲ್ಲಿ ಈ ಟಿಶ್ಯೂ ಪೇಪರ್ಗಳನ್ನೇ ಬಹಳಷ್ಟು ಬಾರಿ ಬಳಸುತ್ತಾರೆ. ಈ ಹಿಂದೆಯೂ ನಾವು ಕಾರ್ಯಕ್ರಮಗಳಿಗೆ ಮದುವೆ ಮುಂಜಿ ಮುಂತಾದ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ಅತಿಯಾದ ಸ್ವಚ್ಛತೆಯ ಪರಿಕಲ್ಪನೆ ತೊಳೆದಿದ್ದೆಲ್ಲವೂ ಸ್ವಚ್ಛವಾಗಿಲ್ಲ ಎಣ್ಣೆಯ ಜಿಡ್ಡಿನಿಂದ ಕೂಡಿದೆ ಎಂಬ ಭಾವ ( ಅದು ಸ್ವಲ್ಪಮಟ್ಟಿಗೆ ನಿಜವು ಕೂಡ!) ಟಿಶ್ಯೂ ಪೇಪರ್ ಬಳಸಿ ತಟ್ಟೆಯನ್ನು ಒರೆಸಲು ಕಾರಣವಾಗುತ್ತದೆ. ಹಾಗಾದರೆ ಈ ಟಿಶ್ಯೂ ಪೇಪರ್ ಗಳನ್ನು ಬಳಸಬಾರದೇ ಎಂದು ಆಶ್ಚರ್ಯಸೂಚಕ ಧ್ವನಿಯಲ್ಲಿ ನಿಮ್ಮ ಪ್ರಶ್ನೆ ಬಂದರೆ ಪರಿಸರ ಪ್ರೇಮಿಗಳ ಉತ್ತರ ಹೀಗಿರುತ್ತದೆ…. ತೀರ ಅವಶ್ಯಕತೆ ಇದ್ದರೆ ಮಾತ್ರ ಬಳಸಿ ಎಂದು. ಅನವಶ್ಯಕವಾಗಿ ಟಿಶ್ಯೂ ಪೇಪರ್ ಗಳನ್ನು ಬಳಸುವ ಮೂಲಕ ಪರಿಸರವನ್ನು ಹಾನಿಗೊಳಿಸದಿರಿ ಎಂಬುದು ಅವರ ಕಳಕಳಿಯ ಮನವಿಯಾಗಿರುತ್ತದೆ. ಟಿಶ್ಯೂ ಪೇಪರ್ ಬಳಕೆಗೂ ಪರಿಸರದ ಹಾನಿಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಭಯಾನಕ ಸತ್ಯ ಕಣ್ಣಿಗೆ ಬೀಳುತ್ತದೆ. ನಮ್ಮ ದೇಶದಲ್ಲಿ ಈ ಹಿಂದೆ ಮರದಿಂದ ಬೇರೆಯಾಗಿ ಬಿದ್ದ ಕಟ್ಟಿಗೆಯ ತುಂಡುಗಳನ್ನು ಉರುವಲು ಮತ್ತಿತರ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಕಾಗದ ತಯಾರಿಕೆಗೆ ಶೇಕಡ 35ರಷ್ಟು ಕಟ್ಟಿಗೆಯನ್ನು ಬಳಸಲಾಗುತ್ತಿದೆ. ಅದರಲ್ಲೂ ಕಾಗದಕ್ಕಿಂತ ಹೆಚ್ಚಾಗಿ  ಟಿಶ್ಯೂ ಪೇಪರ್ ಗಳ ತಯಾರಿಕೆಗೆ ಹೆಚ್ಚು ಬಳಸಲಾಗುತ್ತಿದೆ.ಪ್ರಾರಂಭದಲ್ಲಿ ಅಷ್ಟೇನೂ ಉತ್ತಮ ಗುಣಮಟ್ಟದ ಟಿಶ್ಯೂ ಪೇಪರ್ ಗಳು ಬರುತ್ತಿರಲಿಲ್ಲ. ಜನರ ಆಧ್ಯತೆ ಬದಲಾಗುತ್ತಾ ಹೋದಂತೆ ಅತ್ಯುತ್ತಮ ಗುಣಮಟ್ಟದ ಟಿಶ್ಯೂ ಪೇಪರ್ ಗಳು ಬೇಕು ಎಂಬ ಕಾರಣವನ್ನು ಒಡ್ಡಿಕಾಗದದ ಮರುಬಳಕೆಯನ್ನು ತಡೆಹಿಡಿದರು. ಅತ್ಯಂತ ನಯವಾದ ಮೇಲ್ಮೈಯುಳ್ಳ ಟಿಶ್ಯೂ ಪೇಪರ್ ಗಳು ತಯಾರಾಗತೊಡಗಿದವು. ಹೀಗೆ ತಯಾರಾಗುತ್ತಿರುವ ಟಿಶ್ಯೂ ಪೇಪರ್ ಗಳ ತಯಾರಿಕೆಗೆ ಅತ್ಯವಶ್ಯಕ ಮೂಲ ವಸ್ತುವಾಗಿ ಒಣಗಿದ ಮರದ ತುಂಡಿನ ಬದಲಾಗಿ ಹಸಿ ಮರವನ್ನು ಕಡಿದು ಬಳಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಪ್ರತಿದಿನ ಸುಮಾರು 27 ಸಾವಿರಕ್ಕೂ ಹೆಚ್ಚು ಮರಗಳನ್ನು ಕೇವಲ ಟಿಶ್ಯೂ ಪೇಪರ್ ತಯಾರಿಸಲು ಕಡಿಯಲಾಗುತ್ತಿದೆ. ಹೀಗೆ ಕಡಿಯುವ ಒಟ್ಟು ಮರಗಳ ಸಂಖ್ಯೆ ವರ್ಷಕ್ಕೆ ಸುಮಾರು ಒಂದು ಕೋಟಿಯಷ್ಟು. ಕೇವಲ ಟಿಶ್ಯೂ ಪೇಪರ್ ಗಳನ್ನು ತಯಾರಿಸಲು ಕೋಟಿ ಸಂಖ್ಯೆಯಲ್ಲಿ ಮರಗಳನ್ನು ಬಳಸಲಾಗುತ್ತಿದೆ ಎಂದರೆ ನಾವು ಅವುಗಳ ಮೇಲೆ ಅದೆಷ್ಟು ಅವಲಂಬಿತರಾಗಿದ್ದೇವೆ ಎಂಬುದನ್ನು ಯೋಚಿಸಿ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ನೂರು ವರ್ಷಗಳಲ್ಲಿ ನಾವು ಈ ಭೂಮಿಯ ಮೇಲೆ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಭೀಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಹಸಿರಿಲ್ಲದೆ ನಮಗೆ ಉಸಿರು ದೊರೆಯುವುದಾದರೂ ಹೇಗೆ?ಮರಗಳನ್ನು ಕಡಿಯುತ್ತಾ ಹೋದರೆ ಅದೇ ಪ್ರಮಾಣದಲ್ಲಿ ಬೆಳೆಸಲು ಸಾಧ್ಯವೇ? ಕ್ಷಣಮಾತ್ರದಲ್ಲಿ ಕೊಡಲಿಯ ಏಟಿನಿಂದ ನಾವು ಮರವೊಂದನ್ನು ಉರುಳಿಸಬಹುದು, ಆದರೆ ಅದೇ ಮರ ಬೆಳೆಯಲು ವರ್ಷಗಳೇ ಬೇಕು. ಇಡೀ ಭಾರತ ದೇಶದ ಪ್ರಜೆಗಳು ಮೊಣಕಾಲೂರಿ ಪ್ರಾರ್ಥಿಸಿದರೂ, ಅತ್ತು ಗೋಗರೆದರೂ ಕೂಡ ಒಂದೇ ಒಂದು ಗಿಡ ಒಂದಡಿಯಷ್ಟು ಕೂಡ ಬೆಳೆಸಲು ಒಂದು ದಿನಕ್ಕೆ ಸಾಧ್ಯವಾಗುವುದಿಲ್ಲ….. ಜೀವದಾಯಿನಿಯಾಗಿರುವ ಹಸಿರು ಮರಗಳನ್ನು ಬೆಳೆಸಿದ ನಾವು ಅವುಗಳನ್ನು ಕಡಿಯಲು ಯಾವ ಹಕ್ಕನ್ನು ಹೊಂದಿದ್ದೇವೆ ನೀವೇ ಹೇಳಿ? ಹಾಗಾದರೆ ನಾವು ಟಿಶ್ಯೂ ಪೇಪರ್ ಗಳ ಬಳಕೆಯನ್ನು ಹೇಗೆ ತಡೆ ಹಿಡಿಯಬಹುದು? ಮೊದಲನೆಯದಾಗಿ ಸದಾ ನಮ್ಮ ಜೊತೆ ಒಂದು ಕರ ವಸ್ತ್ರ, ನಮ್ಮ ಪ್ಯಾಂಟುಗಳ ಜೇಬುಗಳಲ್ಲಿ, ಹ್ಯಾಂಡ್ ಬ್ಯಾಗುಗಳಲ್ಲಿ ಇರಲೇಬೇಕು. ಇನ್ನು ನಾವು ಟಿಶ್ಯೂ ಪೇಪರ್ಗಳನ್ನು ಬಳಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ಒಂದೊಂದು ಬಟ್ಟೆಯ ನ್ಯಾಪ್ಕಿನಗಳನ್ನು ಇಡಬೇಕು. ಅಡುಗೆ ಮನೆಯಲ್ಲಿ ಬಚ್ಚಲುಮನೆ, ವಾಶ್  ಬೇಸಿನ್ಗಳ ಬಳಿ, ಊಟದ ಮೇಜಿನ ಬಳಿ, ಕಾರುಗಳಲ್ಲಿ ಸಾಧ್ಯವಾದಷ್ಟು ಬಟ್ಟೆಯನ್ಯಾಪ್ಕಿನ್ಗಳನ್ನು ಬಳಕೆ ಮಾಡಬೇಕು. ಕಾಗದದ ಹಾಳೆಯಿಂದ ತಯಾರಿಸಲಾಗುವ ಟಿಶ್ಯೂ ಪೇಪರಗಳ ಬಳಕೆಯನ್ನು ತೀರಾ ಅನಿವಾರ್ಯವಲ್ಲದ ಹೊರತು ಮಾಡಲೇಬಾರದು. ನಮ್ಮ ಬಳಿ ಬಟ್ಟೆ ಇಲ್ಲವೇ ಇಲ್ಲ, ಕೈ ತೊಳೆಯಲು ನೀರು ಕೂಡ ದೊರೆಯುತ್ತಿಲ್ಲ ಎಂಬ ಸಮಯದಲ್ಲಿ ಮಾತ್ರ ಟಿಶ್ಯೂ ಪೇಪರನ್ನು ಬಳಸಿ. ಕಳೆದ ಕೆಲವೇ ವರ್ಷಗಳಿಂದ ತುಸು ಹೆಚ್ಚೇ ಚಾಲ್ತಿಯಲ್ಲಿರುವ ಟಿಶ್ಯೂ ಪೇಪರ್ ಗಳನ್ನು ಬಳಸುತ್ತಿರುವ ನಾವು ಊಟದ ಮೊದಲು ಹಾಗೂ ಊಟದ ನಂತರ ಕೈ ತೊಳೆಯುವುದನ್ನು ರೂಢಿಸಿಕೊಳ್ಳೋಣ. ನೀರು ಎಷ್ಟೊಂದು ಬಳಕೆಯಾಗುತ್ತದಲ್ಲವೇ ಅಂತ ನೀವು ಕೇಳಬಹುದು, ಆದರೆ ಸಂಶೋಧನೆಗಳ ಪ್ರಕಾರ ಒಂದು ಟಾಯ್ಲೆಟ್ ಪೇಪರ್ ನ ಸುರುಳಿಯನ್ನು ತಯಾರಿಸಲು ಸುಮಾರು 37 ಗ್ಯಾಲನ್ ನಷ್ಟು ನೀರನ್ನು ಬಳಸಲಾಗುತ್ತದೆ ಮತ್ತು ಇದರ ಜೊತೆಗೆ ಸಾಕಷ್ಟು ಪ್ರಮಾಣದ ಮರಗಳನ್ನು ಕಡಿಯುವುದು ಕೂಡ ಸೇರಿದೆ. ಈಗ ಹೇಳಿ… ಕೈ ತೊಳೆಯುವುದು ಒಳ್ಳೆಯದೋ ಟಿಶ್ಯೂ ಪೇಪರ್ ಬಳಕೆಯೋ ಎಂದು. ನಮ್ಮ ನಾಡಿನ ಭವ್ಯ ಭವಿಷ್ಯಕ್ಕೆ ಒಳ್ಳೆಯ ಪರಿಸರವನ್ನು ಹೊಂದಲು ತೀರ ಅನಿವಾರ್ಯವಲ್ಲದ ಹೊರತು  ನಾವು ಸಾಧ್ಯವಾದಷ್ಟು ಟಿಶ್ಯೂ ಪೇಪರ್ ಗಳ ಬಳಕೆಯನ್ನು ನಿಲ್ಲಿಸೋಣ.ಏನಂತೀರಾ ಸ್ನೇಹಿತರೆ? ————– ವೀಣಾ ಹೇಮಂತಗೌಡ ಪಾಟೀಲ್ ʼ “

ಟಿಶ್ಯೂ ಪೇಪರ್ ಬಳಸಬೇಕೆ? ಬೇಡವೇ?…. ಒಂದು ಲೆಕ್ಕಾಚಾರ-ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

You cannot copy content of this page

Scroll to Top