ಕಾವ್ಯ ಸಂಗಾತಿ
ಹಾ. ಮ ಸತೀಶ
ಗಜಲ್


ಉಸಿರ ಕೊಡುತ ನಮಗೆ ಬದುಕ ನೀಡಿದ್ದೇ ಗಾಳಿ
ಬಿರುಗಾಳಿ ಬೀಸಿ ಬಾಳ ಮಣ್ಣು ಮಾಡಿದ್ದೇ ಗಾಳಿ
ಸಂಜೆಗೆ ಗಿಡಮರದ ಅಲುಗಾಟ ಜೋರಾಯಿತೇಕೆ
ಈ ಸುಂದರ ನೋಟಕ್ಕೆ ಸಂಗೀತ ಹಾಡಿದ್ದೇ ಗಾಳಿ
ಬನದ ಕಲರವದ ನಡುವೆಯೇ ಹುಡುಗಾಟವು
ಮುರಳಿಯ ಮೋಹದ ನಾದವ ಕಾಡಿದ್ದೇ ಗಾಳಿ
ಜಾತಿ ಬಣ್ಣದ ನಡುವೆಯೇ ಸುಣ್ಣವ ಮೆತ್ತಬೇಡ
ತನುವ ಬೆಸೆದಿರುವ ಪ್ರೀತಿಯನು ನೋಡಿದ್ದೇ ಗಾಳಿ
ಚಿಂತೆಯಾ ಮನದಲಿ ಬಯಕೆ ಇದೆಯಾ ಈಶ
ಮತ್ಸರದ ಮನವ ಇಂದು ಹೊರಗೆ ದೂಡಿದ್ದೇ ಗಾಳಿ
ಹಾ. ಮ ಸತೀಶ ಬೆಂಗಳೂರು



